ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆಯಿಂದ ಆಮ್ಲಜನಕ ಸಮಸ್ಯೆ ಉಂಟಾಗುವ ಸಾಧ್ಯತೆ
ಪ್ರತಿಯೊಬ್ಬರ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಸರಿಯಾಗಿ ಇರಬೇಕಾಗುತ್ತದೆ ಆದರೆ ಕೆಲವು ಕಾರಣಾಂತರಗಳಿಂದ ಹಿಮೋಗ್ಲೋಬಿನ್ ಮಟ್ಟ ನಿರಂತರವಾಗಿ ಕುಸಿಯಬಹುದು.ಅದರಿಂದ ರಕ್ತಹೀನತೆ ಸ್ಥಿತಿಗೆ ಕಾರಣವಾಗುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ .
ಹಿಮೋಗ್ಲೋಬಿನ್ ಮಟ್ಟವನ್ನು ಸರಿಯಾಗಿ ಇಟ್ಟುಕೊಳ್ಳಲು ನಮ್ಮ ದೇಹಕ್ಕೆ ಕೆಲವು ವಿಶೇಷವಾದ ಪದಾರ್ಥಗಳ ಅವಶ್ಯಕತೆ ಇರುತ್ತದೆ.
ದೇಹದ ಜೀವಕೋಶಗಳಲ್ಲಿ ಆಮ್ಲಜನಕ ಮತ್ತು ಕಾರ್ಬನ್ ಡೈಆಕ್ಸೈಡ್ ನ್ನು ಹಿಮೋಗ್ಲೋಬಿನ್ ವಿನಿಮಯ ಮಾಡುತ್ತದೆ. ಹಾಗಾಗಿ ದೇಹದಲ್ಲಿ ಸರಿಯಾದ ಪ್ರಮಾಣದ ಹಿಮೋಗ್ಲೋಬಿನ್ ಹೊಂದುವುದು ತುಂಬಾ ಮುಖ್ಯ. ಕೆಲವೊಮ್ಮೆ ದೇಹದಲ್ಲಿ ರಕ್ತದ ಪ್ಲೇಟ್ಲೆಟ್ ಮತ್ತು ಹಿಮೋಗ್ಲೋಬಿನ್ ಮಟ್ಟ ಕಡಿಮೆ ಆಗುತ್ತದೆ. ಇದು ದೌರ್ಬಲ್ಯ, ಹಸಿವಿನ ಕೊರತೆ, ತಲೆನೋವು, ಆಯಾಸ, ಉಸಿರಾಟದ ತೊಂದರೆ, ಹೆಚ್ಚಿದ ಹೃದಯ ಬಡಿತ, ಜೊತೆಗೆ ತಲೆತಿರುಗುವಿಕೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಹಿಮೋಗ್ಲೋಬಿನ್ ಅನ್ನು ಸರಿಯಾಗಿ ಇಟ್ಟುಕೊಳ್ಳಲು ಹಲೀಮ್ ಪಾನೀಯ ಸೇವನೆ ಉತ್ತಮವಾಗಿದೆ ಎಂದು ಹೇಳಲಾಗುತ್ತದೆ.
ಹಲೀಮ್ ಪಾನೀಯ ತಯಾರಿಸಲು ಅರ್ಧ ಕಪ್ ನೀರಿನಲ್ಲಿ ಒಂದು ಚಮಚ ಹಲೀಮ್ ಬೀಜ ಹಾಕಿ, ಅದಕ್ಕೆ ನಿಂಬೆ ರಸ ಸೇರಿಸಿ. ಈಗ ಅದನ್ನು 2 ಗಂಟೆ ಮುಚ್ಚಿಡಿ. ಈ ದ್ರವಕ್ಕೆ ಒಂದು ಚಮಚ ಪುದೀನ ಎಲೆಗಳ ಪೇಸ್ಟ್, 1/2 ಚಮಚ ಅರಿಶಿನ ಪುಡಿ, 1/2 ಟೀಚಮಚ ಜೀರಿಗೆ ಪುಡಿ ಮತ್ತು ಉಪ್ಪನ್ನು ಸೇರಿಸಿ. ಪಾನೀಯವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ಕಬ್ಬಿಣ ಮತ್ತು ಫೋಲೇಟ್ ಯುಕ್ತ ಸಮೃದ್ಧ ಆಹಾರ ಸೇವಿಸಬೇಕು. ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆಯಿದ್ದರೆ ಆಹಾರದಲ್ಲಿ ಕಬ್ಬಿಣ ಸಮೃದ್ಧ ಆಹಾರ ಸೇರಿಸಿ. ಕಬ್ಬಿಣವು ಹಿಮೋಗ್ಲೋಬಿನ್ ಉತ್ಪಾದನೆ ಉತ್ತೇಜಿಸುತ್ತದೆ. ಇದು ಕೆಂಪು ರಕ್ತ ಕಣಗಳ ರಚನೆಗೆ ಸಹಕಾರಿ. ಫೋಲಿಕ್ ಆಮ್ಲವು ಕೆಂಪು ರಕ್ತ ಕಣಗಳ ರಚನೆಗೆ ಸಹಕಾರಿ.ಪಾಲಕ್ ಸೊಪ್ಪಿನ ನಿಯಮಿತ ಸೇವನೆಯು ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕಬ್ಬಿಣದ ಮತ್ತು ಆಕ್ಸಲೇಟ್ನ ಉತ್ತಮ ಮೂಲ. ಆಕ್ಸಲೇಟ್ ದೇಹವು ಕಬ್ಬಿಣ ಹೀರಿಕೊಳ್ಳಲು ಸಹಕಾರಿ. ಬ್ರೊಕೊಲಿ, ಬೀಟ್ರೂಟ್ ಇತ್ಯಾದಿ ಸೇವಿಸಬೇಕು. ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆಯಿದ್ದರೆ ಕಬ್ಬಿಣ ಹೀರಿಕೊಳ್ಳಲು ಅಡ್ಡಿ ಮಾಡುವ ಪದಾರ್ಥಗಳಾದ ಕಾಫಿ, ಟೀ, ಕೋಕೋ ಕೋಲಾ ಮತ್ತು ಮದ್ಯ, ಸಿಗರೇಟ್, ಸಕ್ಕರೆ ಪಾನೀಯ ಸೇವನೆ ಸಂಪೂರ್ಣವಾಗಿ ತ್ಯಜಿಸಿ. ಈ ಎಲ್ಲಾ ಪಾನೀಯಗಳು ದೇಹದಲ್ಲಿ ಕಬ್ಬಿಣದ ಕೊರತೆಗೆ ಕಾರಣವಾಗುತ್ತದೆ.
ಹಿಮೋಗ್ಲೋಬಿನ್ ಕೊರತೆ ಇರುವವರು ನುಗ್ಗೆ ಸೊಪ್ಪನ್ನು ಸೇವಿಸಿದರೆ ಅದರ ಮಟ್ಟವನ್ನು ಸುಧಾರಿಸಿಕೊಳ್ಳಬಹುದು ಹೀಗೆ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಸರಿಯಾಗಿದೆಯಾ ಅಂತ ಆಗಾಗ ಟೆಸ್ಟ್ ಮಾಡಿಸಿಕೊಳ್ಳುತ್ತಾ ಇರಬೇಕು.