ಬೆಂಗಳೂರು: ಬಿಹಾರದ ಭಾಗಲ್ಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿರುವ ಘಟನೆ ನಡೆದಿದೆ.
ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಈ ಕುಸಿತ ಸಂಭವಿಸಿದ್ದು, ಇದ್ದಕ್ಕಿದ್ದ ಹಾಗೆ ಸುಮಾರು 500 ಮೀಟರ್ ಭಾಗವು ನದಿಗೆ ಬಿದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
ಬಿಹಾರ ಸರ್ಕಾರ ಈ ಸೇತುವೆಯನ್ನು 1,717 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಿಸುತ್ತಿದೆ. ಈ ಕುರಿತು ಬಿಹಾರ ಸಿಎಂ ನಿತೀಶ್ ಕುಮಾರ್ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಮತ್ತು ಕುಸಿತಕ್ಕೆ ಕಾರಣ ಏನೆಂಬುದನ್ನು ಗುರುತಿಸುವಂತೆ ಕೇಳಿದ್ದಾರೆ.
ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ದೃಶ್ಯಗಳು ಸೇತುವೆಯ ಎರಡು ಭಾಗಗಳು ಒಂದರ ನಂತರ ಒಂದರಂತೆ ಕುಸಿಯುತ್ತಿರುವುದನ್ನು ಕಾಣಬಹುದಾಗಿದೆ.
https://twitter.com/airnewsalerts/status/1665356191453544448?s=20