ಹೆಚ್ಚಿನ ಗ್ರಾಹಕರ ಆಯ್ಕೆ ವಿಂಡೋ ಎಸಿಗಳು ಪೋರ್ಟೇಬಲ್ ಆಗಿರುವುದಾಗಿರುತ್ತದೆ. ಹೀಗೆ ಖರೀದಿಗೂ ಮೊದಲು ಎಸಿಯ ಗುಣಮಟ್ಟ, ಬಾಳಿಕೆ, ಅದಕ್ಕೆ ವ್ಯಯವಾಗುವ ವಿದ್ಯುತ್ ಹೀಗೆ ಹಲವು ರೀತಿಗಳಲ್ಲಿ ಗ್ರಾಹಕರಾದವರು ಪರಿಶೀಲನೆ ಮಾಡಿಕೊಳ್ಳಲೇಬೇಕಾಗುತ್ತದೆ.
ಹೀಗೆ ಎಸಿ ಖರೀದಿಗೆ ಹೋಗುವ ಮುನ್ನ ಉತ್ತಮ ಯಾವುದು? ಬೆಲೆ ಎಷ್ಟು ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ವಿಂಡೋ ಎಸಿ ಬೇಕೋ, ಸ್ಪ್ಲಿಟ್ ಎಸಿಯೋ ಎಂಬಿತ್ಯಾದಿ ಗೊಂದಲ ಮಾಡಿಕೊಳ್ಳುತ್ತಾರೆ. ಆದರೆ ಬಹುತೇಕರು ಸಾಮಾನ್ಯವಾಗಿ 25000 ಮತ್ತು ಅದಕ್ಕಿಂತ ಕೆಳಗಿನ ಬೆಲೆಯ ವಿಂಡೋ ಎಸಿ ಖರೀದಿಗೇ ಮುಂದಾಗುತ್ತಾರೆ ಮತ್ತು ಅದರಲ್ಲೇ ಅತ್ಯುತ್ತಮ ಬ್ರ್ಯಾಂಡ್ ಯಾವುದು ಎಂದು ಪರಿಶೀಲನೆ ಮಾಡುತ್ತಾರೆ.ವಿಂಡೋ ಎಸಿಗಳು ಪೋರ್ಟೇಬಲ್ ಆಗಿರುವುದರಿಂದ ಹೆಚ್ಚಿನ ಗ್ರಾಹಕರ ಅದನ್ನೇ ಇಷ್ಟಪಡುತ್ತಾರೆ. ಅವುಗಳಲ್ಲಿ ಯಾವುದೆಲ್ಲ ಉತ್ತಮವಾದುದು ಎಂದರೆ:
ಬ್ಲ್ಯೂ ಸ್ಟಾರ್ 0.75 ಟನ್ 3 ಸ್ಟಾರ್ ವಿಂಡೋ ಎಸಿ ಸಣ್ಣ ಸ್ಥಳಗಳಿಗೆ ಹೊಂದಿಕೆಯಾಗುವ ಎಸಿ ಎಂದರೆ ಬ್ಲ್ಯೂ ಸ್ಟಾರ್ ಬ್ರ್ಯಾಂಡ್ನ 0.75 ಟನ್ 3 ಸ್ಟಾರ್ ಏರ್ ಕಂಡೀಶನರ್. ಬಾಳಿಕೆ ಮತ್ತು ಕಾರ್ಯಕ್ಷಮತೆಯೂ ಉತ್ತಮವಾಗಿರುತ್ತದಂತೆ. ಈ 0.75 ಟನ್ 3 ಸ್ಟಾರ್ ವಿಂಡೋ ಎಸಿಯಲ್ಲಿ ಒಳಭಾಗದಲ್ಲಿ ಅಕ್ಯುಮುಲೇಟರ್ಸ್ ಅಳವಡಿಸಿರಲಾಗುತ್ತದೆ. ಹಾಗೇ ಕಡಿಮೆ ವಿದ್ಯುಚ್ಛಕ್ತಿ ಬಳಸಿ, ಹೆಚ್ಚು ತಂಪು ನೀಡುವ ರೀತಿಯಲ್ಲಿ ಇದರಲ್ಲಿನ ಕಂಪ್ರೆಸ್ಸರ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರಣಕ್ಕೆ ಇಂಥ ಎಸಿಗಳ ದಕ್ಷತೆ ಹೆಚ್ಚಾಗಿರುತ್ತದೆ. ಈ ಎಸಿಗೆ ಅಂದಾಜು 20,000 ರೂ. ಗಳಷ್ಟು ಬೆಲೆ ಇರುತ್ತದೆ.
ವೋಲ್ಟಾಸ್ನ 0.75 ಟನ್ 2 ಸ್ಟಾರ್ ವಿಂಡೋ ಎಸಿ ಸಣ್ಣ ಕೋಣೆಗೆ ಅಳವಡಿಸಲು ಎಸಿ ಖರೀದಿ ಮಾಡುತ್ತಿದ್ದೀರಿ ಎಂದಾದರೆ ವೋಲ್ಟಾಸ್ನ 0.75 ಟನ್ 2 ಸ್ಟಾರ್ ವಿಂಡೋ ಎಸಿ ಕೊಳ್ಳುವುದು ತುಂಬ ಉತ್ತಮ. ಬಿಸಲಿನ ತಾಪ 50 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಿದ್ದಾಗಲೂ ಈ ಎಸಿಗಳು ತುಂಬ ತಂಪು ನೀಡಬಲ್ಲವು ಹಾಗೇ, ತುಂಬ ಕಡಿಮೆ ಪ್ರಮಾಣದ ವಿದ್ಯುತ್ ಸಾಕು. ಇದರಿಂದ ವಿದ್ಯುತ್ ಬಿಲ್ ಹೆಚ್ಚು ಬರಬಹುದು ಎಂಬ ತಲೆಬಿಸಿಯೂ ಇರುವುದಿಲ್ಲ. ಈ ವಿಂಡೋ ಎಸಿಯ ಬೆಲೆ 18,990 ರೂಪಾಯಿ ಬೆಲೆ ಇದಕ್ಕಿದೆ.
ವೋಲ್ಟಾಸ್ 0.8ಟನ್ 3 ಸ್ಟಾರ್ ವಿಂಡೋ ಎಸಿ ವೋಲ್ಟಾಸ್ ಕಂಪನಿಯ ಈ 0.8 ಟನ್ 3ಸ್ಟಾರ್ ವಿಂಡೋ ಎಸಿ ಕೂಡ ತುಂಬ ಒಳ್ಳೆಯದೇ. ಎಲ್ಲ ಹವಾಮಾನಕ್ಕೂ ಸೂಕ್ತವೆನಿಸುವ ಏರ್ಕಂಡೀಶನರ್ ಇದಾಗಿದೆ. ಈ ಎಸಿ ತನ್ನ ಸುತ್ತಲೂ ತಂಪಾಗಿಡುತ್ತದೆ. ಇದರಲ್ಲಿರುವ ಡಿಹ್ಯೂಮಿಡಿಫೈಯರ್ ಮನೆಯೊಳಗಿನ ಆರ್ದ್ರತೆಯನ್ನು ಗ್ರಹಿಸುತ್ತದೆ. ಕಡಿಮೆ ವಿದ್ಯುತ್ ವ್ಯಯಿಸುವ ಜತೆಯಲ್ಲಿ ಹಿತಕರವಾದ ತಂಪು ನೀಡುತ್ತದೆ. ಇದರ ಬೆಲೆ 22,990 ರೂಪಾಯಿಗಳಷ್ಟಿದೆ.
ಅಮೆಜಾನ್ ಬೇಸಿಕ್ಸ್ 0.75 ಟನ್ 3 ಸ್ಟಾರ್ ವಿಂಡೋ ಎಸಿಯಲ್ಲಿ ಸ್ವಿಂಗ್ ಮೆಮರಿ ಫಂಕ್ಷನ್, ಸ್ಲೀಪ್ ಮೋಡ್ ಮತ್ತು ಸ್ವತಂತ್ರ ಡಿಹ್ಯೂಮಿಡಿಫೈಯರ್ಗಳಿದ್ದು ಸುತ್ತಲೂ ತಂಪು ಹರಡುವಂತೆ ವಿನ್ಯಾಸ ರೂಪಿಸಲಾಗಿದೆ. ಎಲ್ಲ ಕಾಲದ ಹವಾಮಾನಕ್ಕೂ ಸೂಕ್ತವಾಗಿದ್ದು, ಬೆಲೆ 24,999 ರೂ. ಎಸಿಯ ಯಾವುದೇ ಭಾಗಕ್ಕೆ ತೊಂದರೆಯಾದರೆ ಕೂಡಲೇ ಸ್ವಯಂಚಾಲಿತವಾಗಿ ಬಂದ್ ಆಗುತ್ತದೆ. ಇದರಿಂದಾಗಿ ಎಸಿಯ ಮುಖ್ಯ ಸಿಸ್ಟಂ ರಕ್ಷಿಸಲ್ಪಡುತ್ತದೆ. ಹಾಗೇ ಯಾವುದೇ ಸಮಸ್ಯೆ ಆದಾಗ ಎರರ್ ಕೋಡ್ ಕೂಡ ತೋರಿಸುತ್ತದೆ. ಇದು ಆಟೋ ಮೋಡ್ ಎಸಿಯಾಗಿದ್ದು, ಆಯಾ ಹವಾಮಾನಕ್ಕೆ ತಕ್ಕಂತೆ ಕೂಲಿಂಗ್ ಮಟ್ಟವನ್ನು ಕಾದುಕೊಳ್ಳುತ್ತದೆ.
ಒ ಜನರಲ್ ವಿಂಡೊ ಎಸಿ 0.75 ಟನ್ ಈ ಏರ್ಕಂಡೀಷನರ್ ನಿಜಕ್ಕೂ ಆಹ್ಲಾದಕರ ತಂಪನ್ನು ನೀಡುತ್ತಾ ಇದು ಜಾಸ್ತಿ ವಿದ್ಯುತ್ ವ್ಯಯ ಮಾಡುವುದಿಲ್ಲ. ಖಂಡಿತ ಕೊಟ್ಟ ಹಣ ವ್ಯರ್ಥವಾಗುವುದಿಲ್ಲ. ಇದರಲ್ಲಿನ ಕಂಪ್ರೆಸ್ಸರ್ಗಳು ಸ್ವಚ್ಛ, ತಂಪು ಗಾಳಿಯನ್ನು ಸೂಸುತ್ತವೆ. ಇದು ಗ್ರಾಹಕ ಸ್ನೇಹಿ ಎಸಿಯಾಗಿದ್ದು, ಬೆಲೆ 25,369 ರೂಪಾಯಿ. ಇದೆ . ಹೀಗೆ ಮಾರುಕಟ್ಟೆಯಲ್ಲಿ ಅನೇಕ ಬಗೆಯ ಎಸಿಗಳಿದ್ದು ನಮಗೆ ಬೇಕಾದ ಎಸಿಯನ್ನು ಮನೆಗೆ ಹಾಕಿಸಿಕೊಂಡು ತಂಪಾಗಿ ಖುಷಿಯಾಗಿ ಬೇಸಿಗೆಯನ್ನು ಕಳೆಯಬಹುದಾಗಿದೆ.