ಅಡಿಗೆಯಲ್ಲಿ ಬಹಳ ಪ್ರಮುಖವಾಗಿದ್ದು ಸಾಸಿವೆ ಕಾಳು. ಇದನ್ನು ಎಲ್ಲ ಬಗೆಯ ಅಡಿಗೆಯಲ್ಲಿ ಕೂಡ ಒಗ್ಗರಣೆ ಹಾಕಲು ಮುಖ್ಯವಾಗಿ ಬಳಸಲಾಗುತ್ತದೆ. ಈ ಬೀಜವು ಒಮೆಗಾ -3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್ ಮತ್ತು ಸೆಲೆನಿಯಂನಂತಹ ಅಂಶಗಳನ್ನು ಹೊಂದಿರುತ್ತದೆ, ಜೊತೆಗೆ ಇದು ರಂಜಕ, ಮ್ಯಾಂಗನೀಸ್, ತಾಮ್ರ ಮತ್ತು ವಿಟಮಿನ್ ಬಿ 1 ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ.
ಅಡುಗೆ ಮನೆಯಲ್ಲಿ ಅನೇಕ ಮಸಾಲೆಗಳಿವೆ, ಆದರೆ ಸಾಸಿವೆ ಆಹಾರದ ರುಚಿ ಹೆಚ್ಚಿಸುವುದಲ್ಲದೆ, ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ಇನ್ನು ದೇಹವನ್ನು ತಂಪಾಗಿಸಲು ಮತ್ತು ಆರೋಗ್ಯ ಗಟ್ಟಿಯಾಗಿರಲು ಜನರು ಹೆಚ್ಚಾಗಿ ಸಾಸಿವೆ ಬಳಸುತ್ತಾರೆ. ಈ ಸಾಸಿವೆ ನೆನೆಸಿದ ನೀರು ಕುಡೀಯೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದರೆ:
ಸಾಸಿವೆ ಬೀಜವು ಒಮೆಗಾ -3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್ ಮತ್ತು ಸೆಲೆನಿಯಂನಂತಹ ಅಂಶಗಳನ್ನು ಹೊಂದಿರುತ್ತದೆ, ಜೊತೆಗೆ ಇದು ರಂಜಕ, ಮ್ಯಾಂಗನೀಸ್, ತಾಮ್ರ ಮತ್ತು ವಿಟಮಿನ್ ಬಿ 1 ನ ಉತ್ತಮ ಮೂಲವಾಗಿರುವುದರಿಂದ ಸಾಸಿವೆ ನೀರಿನ ಪ್ರಯೋಜನಗಳು ತುಂಬಾ ಪ್ರಬಲವಾಗಿರುತ್ತದೆ.
ರಾತ್ರಿಯಿಡೀ ನೆನೆಸಿದ ಸಾಸಿವೆ ನೀರನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟ ಸುಧಾರಿಸಿ, ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾದ್ರೆ ಹೃದ್ರೋಗ ಸಮಸ್ಯೆಗಳು ಸಹ ನಿವಾರಣೆಯಾಗುತ್ತೆ.
ಅದೇ ಸಮಯದಲ್ಲಿ, ಸಾಸಿವೆ ನೀರು ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಇದು ಚರ್ಮವನ್ನು ಹೈಡ್ರೇಟ್ ಆಗಿಡಲು ಕೆಲಸ ಮಾಡುತ್ತದೆ, ವಯಸ್ಸಾದ ಚಿಹ್ನೆಗಳನ್ನು ತಡೆಯುತ್ತದೆ ಮತ್ತು ಸೋಂಕಿನಿಂದ ರಕ್ಷಿಸುತ್ತದೆ. ನಿಮ್ಮನ್ನು ಯಂಗ್ ಆಗಿರಿಸಲು ಇದು ಉಪಯೋಗಕಾರಿ.
ಇನ್ನು ದೇಹದಲ್ಲಿ ಯಾವುದೇ ಆಂತರಿಕ ಉರಿಯೂತವಿದ್ದರೆ, ಸಾಸಿವೆ ನೀರು ಅದನ್ನು ತೊಡೆದುಹಾಕಲು ಕೆಲಸ ಮಾಡುತ್ತದೆ. ಇದಲ್ಲದೆ, ಇದರಲ್ಲಿ ಕಂಡುಬರುವ ಮೆಗ್ನೀಸಿಯಮ್ ಅಸ್ತಮಾ, ಸಂಧಿವಾತ ಮತ್ತು ಕಡಿಮೆ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿ.
ಮಾತ್ರವಲ್ಲದೆ, ಸಾಸಿವೆ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಬಾಯಿಯ ವಾಸನೆಯನ್ನು ಕಡಿಮೆ ಮಾಡುತ್ತದೆ.
ಇದು ಕೂದಲಿನ ಬೆಳವಣಿಗೆಗೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಸಹ ಉಂಟಾಗೋದಿಲ್ಲವಂತೆ.
ಸಾಸಿವೆ ನೆನೆಸಿದ ನೀರನ್ನು ನಿಯಮಿತವಾಗಿ ಸೇವಿಸೋದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಇನ್ನು ಇದು ತಲೆನೋವನ್ನು ನಿವಾರಿಸಲು ಸಹ ಉತ್ತಮ ಪರಿಹಾರವಾಗಿ ಕಾರ್ಯ ನಿರ್ವಹಿಸುತ್ತದೆ.
ಇದರ ನೀರು ಹಲ್ಲುಗಳು ಮತ್ತು ಮೂಳೆಗಳನ್ನು ಬಲಪಡಿಸುವ ಕೆಲಸ ಮಾಡುತ್ತದೆ.
ಹಾಗಾಗಿ ಸಾಸಿವೆ ನೀರನ್ನು ಕುಡಿಯುವುದು ತುಂಬಾನೆ ಪ್ರಯೋಜನಕಾರಿ. ಒಮ್ಮೆ ಪ್ರಯತ್ನ ಪಟ್ಟು ನೋಡಿ ಖಂಡಿತವಾಗಿಯೂ ಉತ್ತಮ ಪರಿಣಾಮ ಸಿಗುವುದು.