ಕೆಲವರಿಗೆ ರಸ್ತೆ ಧೂಳು, ಮನೆ ಧೂಳಿನಿಂದ ಸಿಕ್ಕಾಪಟ್ಟೆ ಡಸ್ಟ್ ಅಲರ್ಜಿ ಆಗುತ್ತೆ. ಇದರಿಂದ ಎಷ್ಟೋ ಜನ ತಮ್ಮ ಮನೆ ಕ್ಲೀನ್ ಅಥವಾ ಶಿಫ್ಟ್ ಮಾಡೋಕೆ ಹಿಂದೇಟು ಆಗ್ತಾರೆ.
ನಿಮಗೂ ಹೀಗೆ ಡಸ್ಟ್ ಅಲರ್ಜಿ ಇದ್ಯಾ? ಹಾಗಿದ್ರೆ ಈ ರೀತಿ ಮಾಡಿ..
• ತಪ್ಪದೇ ನಿಮ್ಮ ಮನೆ ಕ್ಲೀನ್ ಮಾಡುತ್ತಲೇ ಇರಿ.
• ಧೂಳು ಹೆಚ್ಚಾಗಿರುವ ಸ್ಥಳದಲ್ಲಿ ನೀವು ಇರಬೇಡಿ.
• ಹೊರಗೆ ಹೋಗುವಾಗ ಮಾಸ್ಕ್ ಅಥವಾ ಮೂಗಿಗೆ ಬಟ್ಟೆ ಧರಿಸಿ.
• ರಸ್ತೆ ಬದಿಯಲ್ಲಿ ನಿಮ್ಮ ಮನೆ ಇದ್ದರೆ ಹೆಚ್ಚು ವಾಹನ ಓಡಾಡುವ ಹೊತ್ತಿನಲ್ಲಿ ಬಾಗಿಲು ಮುಚ್ಚಿರಿ.
• ಟೆಡ್ಡಿ ಬೇರ್ ಗಳನ್ನು ಖರೀದಿಸಬೇಡಿ. ತೊಳೆಯಬಹುದಾದಂತ ಗೊಂಬೆಗಳನ್ನು ತಗೊಳ್ಳಿ.
ಈ ಆಹಾರಗಳನ್ನು ಸೇವಿಸಿದರೆ ಉತ್ತಮ
ಗ್ರೀನ್ ಟೀ
ಅರಿಶಿನ
ಜೇನುತುಪ್ಪ
ಚಕ್ಕೆ
ಶುಂಠಿ
ಈರುಳ್ಳಿ
ಚಿಕನ್
ಯೋಗರ್ಟ್
ಟೊಮಾಟೋ