ಸೂಪರ್ಹಿಟ್ ಕನ್ನಡತಿ ಸೀರಿಯಲ್ ಮೂಲಕ ಕರ್ನಾಟಕದ ಮನೆಮಾತಾಗಿದ್ದ ನಟ ಕಿರಣ್ ರಾಜ್ ಈಗ ಸ್ಯಾಂಡವುಡ್ನ ಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ.
ಕಿರಣ್ ರಾಜ್ ಕೇವಲ ನಾಯಕನಾಗಷ್ಟೇ ಅಲ್ಲ. ಸಾಮಾಜಿಕ ಕಾರ್ಯಗಳಿಂದಲೂ ಕನ್ನಡಿಗರ ಮನಗೆದ್ದಿದ್ದಾರೆ. ಕೋವಿಡ್ ಸಮಯದಲ್ಲೂ ಸಾಕಷ್ಟು ಜನರಿಗೆ ಕಿರಣ್ ರಾಜ್ ಆಸರೆಯಾಗಿದ್ದರು. ಅಲ್ಲದೇ, ಅನೇಕ ಸಮಾಜಮುಖಿ ಕೆಲಸಗಳಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಸದ್ಯಕ್ಕೆ ನಿರಾಶ್ರೀರಿಗೆ ನೆರವಾಗುವ ಮೂಲಕ ಕಿರಣ್ರಾಜ್ ಸುದ್ದಿಯಲ್ಲಿದ್ದಾರೆ. ನಕ್ಷತ್ರ ಅವರು ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ‘ನಮ್ಮನೆ ಸುಮ್ಮನೆ ನಿರಾಶ್ರಿತರ ಆಶ್ರಮ’ ಕ್ಕೆ ಕಿರಣ್ ರಾಜ್ ನೂರು ಮೂಟೆ ಸಿಮೆಂಟ್ ನೀಡಿದ್ದಾರೆ. ಕಿರಣ್ ರಾಜ್ ಅವರ ಈ ಕಾರ್ಯಕ್ಕೆ ನಕ್ಷತ್ರ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ, ನಿರಾಶ್ರಿತರ ಜೊತೆ ಯಾವಾಗಲೂ ನಿಲ್ಲುವುದಾಗಿ ಕಿರಣ್ ರಾಜ್ ಹೇಳಿದ್ದಾರೆ.
ಪ್ರಸ್ತುತ ಕಿರಣ್ರಾಜ್ ನಾಯಕನಾಗಿ ನಟಿಸುತ್ತಿರುವ ರಾನಿ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದ್ದು, ಕಿರಣ್ರಾಜ್ ಬೆಳ್ಳಿತೆರೆಯಲ್ಲಿ ಬ್ಯೂಸಿಯಾಗಿದ್ದಾರೆ.