ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದಿನ ದಿನದಲ್ಲಿ ಪ್ರತಿ ಮನೆಯಲ್ಲೂ ಇಂಟರ್ನೆಟ್ ಕನೆಕ್ಷನ್ ಲಭ್ಯವಿದೆ. ಹೆಚ್ಚುತ್ತಿರುವ ಇಂಟರ್ನೆಟ್ ಅಗತ್ಯತೆ, ಬ್ರಾಡ್ಬ್ಯಾಂಡ್ ಪ್ಲಾನ್ಗಳ ಬೆಲೆ ಕಡಿಮೆಯಾದಂತೆ, ಇಂಟರ್ನೆಟ್ ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಿದೆ.
ಇನ್ನು ಕೆಲವೊಬ್ಬರು ಸಾಧನಗಳನ್ನು ಸಂಪರ್ಕಿಸಲು ವೈಫೈ ಬಳಸುತ್ತಿದ್ದಾರೆ. ಆದರಲ್ಲೂ ಅನೇಕ ಜನರು ರೂಟರ್ ಅನ್ನು ಎಲ್ಲಾ ಸಮಯದಲ್ಲೂ ಆನ್ನಲ್ಲೇ ಇಡುತ್ತಾರೆ. ಇದು ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.
ಅಗತ್ಯವಿಲ್ಲದಿದ್ದಾಗ, ವಿಶೇಷವಾಗಿ ರಾತ್ರಿಯಲ್ಲಿ ರೂಟರ್ ಅನ್ನು ಆಫ್ ಮಾಡಲು ತಜ್ಞರು ಹೇಳುತ್ತಾರೆ. ಇಲ್ಲವಾದಲ್ಲಿ ಬಳಕೆದಾರರ, ಮನೆಯಲ್ಲಿರುವವರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗಿದೆ.
ವೈಫೈ ನೆಟ್ವರ್ಕ್ಗಳು ವಿದ್ಯುತ್ಕಾಂತೀಯ ಆವರ್ತನಗಳನ್ನು ಬಳಸುತ್ತವೆ. ಇದು ನಿಮ್ಮ ನೆಮ್ಮದಿಯ ನಿದ್ರೆಗೆ ಸಮಸ್ಯೆ ಮಾಡಬಹುದು.
ಆಲ್ಝೈಮರ್ನ ಸಮಸ್ಯೆಯ ಅಪಾಯವೂ ಇದೆ ಮತ್ತು ಒಂದು ವೇಳೆ ರಾತ್ರಿ ವೈಫೈ ಆಫ್ ಮಾಡದಿದ್ದರೆ, ನಿದ್ದೆ ಮಾಡದೆ ನೆಟ್ ನಲ್ಲಿ ಏನನ್ನೋ ಹುಡುಕುತ್ತಲೇ ಇರುತ್ತೇವೆ. ಇದರಿಂದ ನಿದ್ದೆಯ ಸಮಯ ಸಹ ಕಡಿಮೆಯಾಗುತ್ತದೆ. ಇದರಿಂದ ದಿನಕಳೆದಂತೆ ಆರೋಗ್ಯದಲ್ಲಿ ಏನಾದ್ರೂ ವ್ಯತ್ಯಾಸ ಕಂಡುಬರಬಹುದು.
ನೀವು ವೈಫೈ ಆಫ್ ಮಾಡಿದರೆ, ನೀವು ಬಹಳ ಬೇಗನೆ ನಿದ್ರೆ ಮಾಡಲು ನಿರ್ಧರಿಸುತ್ತೀರಿ ಎಂದು ಅಧ್ಯಯನಗಳು ತೋರಿಸುತ್ತವೆ. ಅಲ್ಲದೆ ರಾತ್ರಿ ವೇಳೆ ವೈಫೈ ರೂಟರ್ ಆನ್ ಮಾಡಿದರೆ ಆ ಸಮಯದಲ್ಲಿ ನೀವು ಕನೆಕ್ಟ್ ಮಾಡಿರುವ ಸಾಧನಗಳು ಹ್ಯಾಕ್ ಆಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಈ ಎಲ್ಲಾ ಸಮಸ್ಯೆಗಳಿಂದ ನೆಮ್ಮದಿ, ಶಾಂತಿ ಸಿಗಬೇಕಂದ್ರೆ ರಾತ್ರಿಯಲ್ಲಿ ವೈಫೈ ರೂಟರ್ ಅನ್ನು ಆಫ್ ಮಾಡಿದ್ರೆ ಒಳ್ಳೆಯದು