ಐಪಿಎಲ್ನ 16ನೇ ಆವೃತ್ತಿಯು ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವಿನ ಮೂಲಕ ಮುಕ್ತಾಯವಾಗಿದ್ದು, ಗುಜರಾತ್ ಟೈಟಾನ್ಸ್ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಸೋಮವಾರ ತಡರಾತ್ರಿ ಮುಕ್ತಾಯವಾದ ಫೈನಲ್ನಲ್ಲಿ ಚೆನ್ನೈ ತಂಡವು 5 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಭಾನುವಾರ್ ಈ ಬಾರಿಯ ಫೈನಲ್ ಮ್ಯಾಚ್ ನಡೆಯಬೇಕಿತ್ತು ಆದರೆ ಮಳೆಯ ಕಾರಣದಿಂದಾಗಿ ಸೋಮವಾರಕ್ಕೆ ಮ್ಯಾಚ್ನ್ನು ಮುಂದುಡಲಾಗಿತ್ತು.
ಐಪಿಎಲ್ ಹುಟ್ಟು:
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಭಾರತದಲ್ಲಿನ ಟ್ವೆಂಟಿ 20 ಕ್ರಿಕೆಟ್ ಪಂದ್ಯಾವಳಿಗಳ ಒಂದು ಲೀಗ್ ಆಗಿದ್ದು, ಇದನ್ನು ಭಾರತದ ಕ್ರಿಕೆಟ್ (ಬಿಸಿಸಿಐ) ನಿಯಂತ್ರಣ ಮಂಡಳಿ ಆರಂಭಿಸಿತು. ಇದರ ಪ್ರಧಾನ ಕಚೇರಿ ಮುಂಬಯಿ, ಮಹಾರಾಷ್ಟ್ರದಲ್ಲಿದೆ. ಇದರಲ್ಲಿ ಕ್ರಿಕೆಟ್ ಜಗತ್ತಿನ ಹಲವು ದೇಶಗಳ ಆಟಗಾರರನ್ನು ಹೊಂದಿರುವ, ಎಂಟು ತಂಡಗಳು ಸ್ಪರ್ಧಿಸುತ್ತವೆ. ೨೦೧೦ ರಲ್ಲಿ, ಐಪಿಎಲ್ ಯೂಟ್ಯೂಬ್ನಲ್ಲಿ ಪ್ರಸಾರವಾದ ಮೊದಲ ಕ್ರೀಡಾ ಪಂದ್ಯವಾಯಿತು.
ಐಪಿಎಲ್ ಗೆಲುವಿನ ಕಿರೀಟ ಹೊತ್ತವರು:
2008ರಲ್ಲಿ ಮುಂಬೈನಲ್ಲಿ ನಡೆದ ಫೈನಲ್ ಮ್ಯಾಚ್ನಲ್ಲಿ ರಾಜಸ್ತಾನ ಮತ್ತು ಚೆನ್ನೈ ತಂಡಗಳು ಮುಖಾಮುಖಿಯಾಗಿ ಸೆಣಸಾಟ ನಡೆಸಿ 3 ವಿಕೆಟ್ಗಳ ರೋಚಕ ಗೆಲುವನ್ನು ರಾಜಸ್ತಾನ ಪಡೆದುಕೊಳ್ಳುವುದರ ಮೂಲಕ ಚೆನ್ನೈ ರನ್ನರ್ ಸ್ಥಾನವನ್ನು ಪಡೆದುಕೊಂಡಿತ್ತು. ರಾಜಸ್ತಾನ ತಂಡದ ನಾಯಕತ್ವವನ್ನು ಶಾನ್ವಾರ್ನೆ ವಹಿಸಿದ್ದರು.
2009ರಲ್ಲಿ ಜೋನ್ಸ್ಬರ್ಗ್ನಲ್ಲಿ ನಡೆದ ಫೈನಲ್ ಮ್ಯಾಚ್ನಲ್ಲಿ ಡೆಕನ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ರೋಚಕ ಪಂದ್ಯದಲ್ಲಿ 6 ರನ್ಗಳ ಗೆಲುವು ಆಡಮ್ ಗಿಲ್ಕ್ರಿಸ್ಟ್ ನಾಯಕತ್ವದ ಡೆಕನ್ ಪಾಲಾಯಿತು. ಆರ್ಸಿಬಿ ರನ್ನರ್ಅಪ್ ಸ್ಥಾನವನ್ನು ಪಡೆದುಕೊಂಡಿತ್ತು.
2010ರಲ್ಲಿ ಮುಂಬೈನಲ್ಲಿ ಚೆನ್ನೈ ಮತ್ತು ಮುಂಬೈ ತಂಡಗಳು ನಡುವೆ ನಡೆದ ಫೈನಲ್ ಮ್ಯಾಚ್ನಲ್ಲಿ 22ರನ್ಗಳ ರೋಚಕ ಗೆಲುವನ್ನು ಚೆನ್ನೈ ಪಡೆದುಕೊಂಡಿತ್ತು. ಮುಂಬೈ ರನ್ನರ್ ಸ್ಥಾನವನ್ನು ಗಿಟ್ಟಿಸಿಕೊಂಡಿತ್ತು. ಚೆನ್ನೈ ಎಂಎಸ್ ಧೋನಿ ತಂಡದ ನಾಯಕತ್ವವನ್ನು ವಹಿಸಿದ್ದರು.
2011ರಲ್ಲಿ ಚೆನ್ನೈನಲ್ಲಿ ನಡೆದ ಫೈನಲ್ ಮ್ಯಾಚ್ನಲ್ಲಿ ಆರ್ಸಿಬಿ ಮತ್ತು ಚೆನ್ನೈ ತಂಡಗಳು ನಡುವೆ ರೋಚಕ ಪಂದ್ಯದಲ್ಲಿ 58 ರನ್ಗಳ ಗೆಲುವು ಎಂಎಸ್ ಧೋನಿ ನಾಯಕತ್ವದ ಸಿಎಸ್ಕೆ ಪಾಲಾಯಿತು. ಆರ್ಸಿಬಿ ರನ್ನರ್ಅಪ್ ಸ್ಥಾನವನ್ನು ಪಡೆದುಕೊಂಡಿತ್ತು.
2012ರಲ್ಲಿ ಚೆನ್ನೈನಲ್ಲಿ ನಡೆದ ಫೈನಲ್ ಮ್ಯಾಚ್ನಲ್ಲಿ ಕೋಲ್ಕತಾ ಮತ್ತು ಚೆನ್ನೈ ತಂಡಗಳು ಮುಖಮುಖಿಯಾಗಿದ್ದವು ಅದರಲ್ಲಿ ಕೋಲ್ಕತ್ತಾ ತಂಡವು 5 ವಿಕೆಟ್ಗಳ ಭರ್ಜರಿ ಗೆಲುವನ್ನು ಪಡೆದುಕೊಂಡಿತ್ತು. ಕೋಲ್ಕತ್ತಾ ತಂಡದ ನಾಯಕತ್ವನ್ನು ವಹಿಸಿದ್ದರು.
2013ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಚೆನ್ನೈ ತಂಡ ರನ್ನರ್ ಸ್ಥಾನವನ್ನು ಪಡೆದುಕೊಂಡರೆ ಮುಂಬೈ ತಂಡ 23 ರನ್ಗಳೊಂದಿಗೆ ಗೆಲುವಿನ ನಗೆ ಬೀರಿತ್ತು.
2014ರಲ್ಲಿ ಬೆಂಗಳೂರಿನಲ್ಲಿ ನಡೆದ ಫೈನಲ್ ಮ್ಯಾಚ್ನಲ್ಲಿ ಕೋಲ್ಕತಾ ತಂಡ ಗೆಲುವನ್ನು ಸಾಧಿಸಿದರೆ ಪಂಜಾಬ್ ತಂಡ ರನ್ನರ್ಅಪ್ ಸ್ಥಾನವನ್ನು ಪಡೆದುಕೊಂಡಿತು.
2015ರಲ್ಲಿ ಕೋಲ್ಕತಾದಲ್ಲಿ ನಡೆದ ಪೈನಲ್ ಮ್ಯಾಚ್ನಲ್ಲಿ ಮುಂಬೈ ಮತ್ತು ಚೆನ್ನೈ ತಂಡಗಳು ನಡುವೆ ಹಣಹಣಿ ಏರ್ಪಟ್ಟು 41ರನ್ಗಳ ರೋಚಕ ಗೆಲುವನ್ನು ಮುಂಬೈ ಪಡೆದುಕೊಂಡಿತ್ತು.
2016ರಲ್ಲಿ ಹೈದರಾಬಾದ್ ಮತ್ತು ಬೆಂಗಳೂರು ತಂಡಗಳ ನಡುವೆ ಫೈನಲ್ ಮ್ಯಾಚ್ ಬೆಂಗಳೂರಿನಲ್ಲಿ ನಡೆದಿತ್ತು. ಇದರಲ್ಲಿ 6ರನ್ಗಳೊಂದಿಗೆ ಹೈದರಾಬಾದ್ ತಂಡ ಗೆಲುವಿನ ನಗೆ ಬೀರುತ್ತಾ ಬೆಂಗಳೂರು ತಂಡ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿತ್ತು.
2017ರಲ್ಲಿ ಹೈದರಾಬಾದ್ನಲ್ಲಿ ಮುಂಬೈ ಮತ್ತು ಪುಣೆ ನಡುವೆ ಫೈನಲ್ ಮ್ಯಾಚ್ ನಡೆದಿದ್ದು, ಮುಂಬೈ ತಂಡ 1 ರನ್ಗಳ ರೋಚಕ ಗೆಲುವನ್ನು ಪಡೆದುಕೊಂಡಿತ್ತು. ಪುಣೆ ರನ್ನರ್ಅಪ್ ಹೊರಹೊಮ್ಮಿತ್ತು.
2018ರಲ್ಲಿ ಮುಂಬೈ ಕ್ರೀಡಾಂಗಣದಲ್ಲಿ ಚೆನ್ನೈ ಮತ್ತು ಹೈದರಾಬಾದ್ ತಂಡಗಳ ನಡುವೆ ಫೈನಲ್ ಮ್ಯಾಚ್ ನಡೆದಿದ್ದು, ಚೆನ್ನೈ 8 ವಿಕೆಟ್ಗಳೊಂದಿಗೆ ಗೆಲುವನ್ನು ಸಾಧಿಸಿತ್ತು.
2019ರಲ್ಲಿ ಹೈದರಾಬಾದ್ ಕ್ರೀಡಾಂಗಣದಲ್ಲಿ ನಡೆದ ಐಪಿಲ್ ಕೊನೆಯ ಪಂದ್ಯದಲ್ಲಿ ಮುಂಬೈ ಮತ್ತು ಚೆನ್ನೈ ನಡುವೆ ನಡೆದಿದ್ದು, ಮುಂಬೈ 1 ರನ್ಗಳ ರೋಚಕ ಗೆಲುವನ್ನು ಪಡೆದುಕೊಂಡಿತ್ತು.
2020ರಲ್ಲಿ ದುಬೈನಲ್ಲಿ ನಡೆದ ಫೈನಲ್ ಮ್ಯಾಚ್ನಲ್ಲಿ ಮುಂಬೈ ಮತ್ತು ದೆಹಲಿ ಎದುರುಬದುರಾಗಿ ಸೆಣಸಾಡಿ ಮುಂಬೈ 5 ವಿಕೆಟ್ ಗಳೊಂದಿಗೆ ಮುಂಬೈ ಗೆಲುವನ್ನು ಪಡೆದುಕೊಂಡಿತ್ತು.
2021ರಲ್ಲಿ ಚೆನ್ನೈ ಮತ್ತು ಕೋಲ್ಕತಾ ತಂಡಗಳ ನಡುವೆ ಪೈನಲ್ ಮ್ಯಾಚ್ ದುಬೈನಲ್ಲಿ ನಡೆದಿತ್ತು. ಇದರಲ್ಲಿ ಚೆನ್ನೈ 27 ರನ್ಗಳೊಂದಿಗೆ ಗೆಲುವನ್ನು ಪಡೆದುಕೊಂಡಿತ್ತು.
2022ರಲ್ಲಿ ಅಹಮದಬಾದ್ನಲ್ಲಿ ನಡೆದ ಪೈನಲ್ ಮ್ಯಾಚ್ ಗುಜರಾತ್ ಮತ್ತು ರಾಜಸ್ತಾನದ ನಡುವೆ ನಡೆಯಿತು. ಇದರಲ್ಲಿ ಗುಜರಾತ್ 7 ವಿಕೆಟ್ಗಳ ಗೆಲುವನ್ನು ಸಾಧಿಸಿತ್ತು. ರಾಜಸ್ತಾನ ರನ್ನರ್ಅಪ್ ಸ್ಥಾನವನ್ನು ಪಡೆದುಕೊಂಡಿತು.