ಮಂಗಳೂರು: ಸಿಎಂ ಸಿದ್ದರಾಮಯ್ಯ ಹಿಜಾಬ್ ನಿಷೇಧ ಆದೇಶ ವಾಪಾಸ್, ಕೋರ್ಟ್ ನಲ್ಲಿರೋ ವಿಚಾರದ ಬಗ್ಗೆ ಹೇಳಿಕೆ ನೀಡಿರೋದು ಸಿಎಂ ಸ್ಥಾನಕ್ಕೆ ಅಗೌರವ ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್.
ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ನಡೆದ ಹಿಜಾಬ್ ವಿಚಾರದ ಬಗ್ಗೆ ಅವರಿಗೆ ಅರಿವಿಲ್ಲ. ಅವರು ಎಲ್ಲೋ ಕೂತು ಅಲ್ಪಸಂಖ್ಯಾತರ ಓಲೈಕೆ ಮಾಡ್ತಾ ಇದ್ದಾರೆ.
ಕೋರ್ಟ್ ನಲ್ಲಿರೋ ವಿಚಾರದ ಬಗ್ಗೆ ಸಿಎಂ ಮಾತನಾಡೋದು ತಪ್ಪು. ಅಲ್ಪಸಂಖ್ಯಾತರಿಗೆ ಬೇಕಾದ ರೀತಿಯಲ್ಲಿ ವಿಚಾರ ಬದಲಿಸೋದು ಸರಿಯಲ್ಲ.
ಮಂಗಳೂರು ವಿವಿ ಕಾಲೇಜ್ ಹಿಜಾಬ್ ಗಲಾಟೆ ಹೊತ್ತಲ್ಲಿ ನಾನು ಸಿಡಿಸಿ ಅಧ್ಯಕ್ಷನಾಗಿದ್ದೆ. ಏಕಾಏಕಿ ಹೊಸ ಸರ್ಕಾರ ಬಂದು ನಮ್ಮ ಅಧ್ಯಕ್ಷ ಸ್ಥಾನ ಕಿತ್ತು ಬಿಸಾಕಿತ್ತು.
ಆವತ್ತು ಹಿಜಾಬ್ ಗಲಾಟೆ ಆದಾಗ ಯು.ಟಿ.ಖಾದರ್ ಮುಸ್ಲಿಂ ಹೆಣ್ಮಕ್ಕಳು ಗಲಾಟೆ ಮಾಡಬೇಡಿ ಅಂದ್ರು. ಭಾರತದಲ್ಲಿ ಮುಸ್ಲಿಮರಿಗೆ ಸ್ವಾತಂತ್ರ್ಯ ಸಿಕ್ಕಿದೆ ಅಂದಿದ್ದರು.ಈ ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ ಬೇಡ ಅಂತ ಖಾದರ್ ಹೇಳಿದ್ದರು.
ಆವತ್ತು ಖಾದರ್ ಹೇಳಿದ್ದು ಸರಿ ಅಂತಾದ್ರೆ ಇವತ್ತು ಸಿದ್ದರಾಮಯ್ಯ ಏನ್ ಮಾಡ್ತಾ ಇದ್ದಾರೆ. ಸಭಾಧ್ಯಕ್ಷರಾದ ಖಾದರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು.
ಸಿದ್ದರಾಮಯ್ಯ ಲೋಕಸಭಾ ಚುನಾವಣೆಗೆ ಲಾಭ ಪಡೆಯೋ ಉದ್ದೇಶ ಹೊಂದಿದ್ದಾರೆ.ಮೈಕ್ ಸಿಕ್ಕಿದಾಗ ಖುಷಿ ಬಂದಾಗೆ ಮಾತನಾಡೋದನ್ನ ವಿರೋಧಿಸುತ್ತೇನೆ.
ಹಿಜಾಬ್ ಹಾಕಿಕೊಂಡು ಬಂದು ಬ್ಲೂ ಟೂತ್ ಇಟ್ಟು ನಕಲು ಮಾಡಿದ್ರೆ ಯಾರು ಹೊಣೆ. ವಿಚಾರ ಸುಪ್ರೀಂ ಕೋರ್ಟ್ ನಲ್ಲಿರೋವಾಗ ಸಿಎಂ ಮಾತನಾಡಿದ್ದು ನ್ಯಾಯಾಂಗ ನಿಂದನೆ. ಇದರ ವಿರುದ್ದ ಬಿಜೆಪಿ ಹೋರಾಟ ಮಾಡಲಿದೆ ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಹೇಳಿಕೆ ನೀಡಿದ್ದಾರೆ.