ತಂತ್ರಜ್ಞಾನದ ಪ್ರಗತಿಯಿಂದಾಗಿ ನಮ್ಮ ಜೀವನವು ದಿನಕಳೆದಂತೆ ಈಜಿ ಆಗಿದೆ ಅಂದರೆ ನಮಗೆ ಬೇಕಾದ ವಿಷಯಗಳನ್ನು ಕ್ಷಣಾರ್ಧದಲ್ಲಿ ಮೊಬೈಲ್ ಲ್ಯಾಪ್ ಟಾಪ್ ಮೂಲಕ ಪಡೆದುಕೊಳ್ಳಬಹುದು. ಈ ಲ್ಯಾಪ್ ಟಾಪನ್ನು ಬಳಸಿ ನಾವು ಎಷ್ಟು ಕೆಲಸಗಳನ್ನು ಸಾಧಿಸುತ್ತೇವೋ ಅದರ ದುಪ್ಪಟ್ಟು ನಾವು ಕೇರ್ ಫುಲ್ಲಾಗಿರಬೇಕು ಯಾಕೆಂದರೆ ಇದನ್ನು ಹ್ಯಾಕ್ ಮಾಡುವವರ ಸಂಖ್ಯೆ ಸಹ ಹೆಚ್ಚಾಗುತ್ತಲೇ ಇದೆ.
ಇಂದು ಎಲ್ಲಿ ಹೋದರು ಸ್ಕ್ಯಾಮ್, ಹ್ಯಾಕ್ ಎಂಬ ಸುದ್ದಿಗಳೇ ಕೇಳಿಬರುತ್ತಿದೆ. ಎಷ್ಟೋ ಬಳಕೆದಾರರಿಗೆ ತನ್ನ ಮೊಬೈಲ್, ಲ್ಯಾಪ್ಟಾಪ್ ಇನ್ನಿತರ ಸಾಧನಗಳು ಹ್ಯಾಕ್ ಹೇಗೆ ಆಯಿತು ಎನ್ನುವುದೆ ಗೊತ್ತಾಗಲ್ಲ. ಹೆಚ್ಚಿನವರಿಗೆ ಲ್ಯಾಪ್ಟಾಪ್ ಹ್ಯಾಕ್ ಆದ್ರೆ ಹೇಗೆ ತಿಳಿದುಕೊಳ್ಳುವುದು ಅನ್ನೋದು ಗೊತ್ತಿರಲ್ಲ. ಆದರೆ ಈ ರೀತಿಯ ನಿಮ್ಮ ಲ್ಯಾಪ್ಟಾಪ್ಗೆ ಸಮಸ್ಯೆಗಳು ಬಂದರೆ ಖಂಡಿತ ನಿಮ್ಮ ಲ್ಯಾಪ್ಟಾಪ್ ಹ್ಯಾಕ್ ಆಗಿದೆ ಎಂದರ್ಥ.
ಸ್ಲೋ ಆಗುವುದು: ಒಂದು ವೇಳೆ ನಿಮ್ಮ ಲ್ಯಾಪ್ಟಾಪ್ ಸ್ಲೋ ಆಗಿ ವರ್ಕ್ ಆಗ್ತಾ ಇದ್ರೆ ಅದಕ್ಕೆ ಹಲವು ಕಾರಣವಿರಬಹುದು. ಆಪರೇಟಿಂಗ್ ಸಿಸ್ಟಂನ ಇತ್ತೀಚಿನ ಅಪ್ಡೇಟ್ನಲ್ಲಿನ ದೋಷ ಅಥವಾ ಕೆಲವು ಹಾರ್ಡ್ವೇರ್ ಸಮಸ್ಯೆಗಳಿಂದ ಲ್ಯಾಪ್ಟಾಪ್ ಸ್ಲೋ ಆಗುತ್ತದೆ. ಅದೇ ರೀತಿ ವೈರಸ್, ಮಾಲ್ವೇರ್ಗಳು ಸಿಸ್ಟಂಗೆ ಪ್ರವೇಶಿಸಿದಾಗ ಲ್ಯಾಪ್ಟಾಪ್ ಸ್ಲೋ ಆಗುವ ಸಾಧ್ಯತೆ ಇರುತ್ತದೆ.
ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು: ವೈರಸ್ ಅಥವಾ ಮಾಲ್ವೇರ್ನಿಂದ ಪ್ರಭಾವಿತವಾಗಿರುವ ಕಂಪ್ಯೂಟರ್ನ ಮತ್ತೊಂದು ಸಾಮಾನ್ಯ ಲಕ್ಷಣವೆಂದರೆ ವಿಚಿತ್ರ ನಡವಳಿಕೆ. ನೀವು ಏನನ್ನೂ ಮಾಡದೆಯೇ ಸ್ವಯಂಚಾಲಿತವಾಗಿ ಶಟ್ಡೌನ್, ರೀಸ್ಟಾರ್ಟ್ ಅಥವಾ ಸ್ವಯಂಚಾಲಿತವಾಗಿ ಅಪ್ಲಿಕೇಶನ್ಗಳು ಓಪನ್ ಆಗುತ್ತಿದ್ರೆ ನಿಮ್ಮ ಲ್ಯಾಪ್ಟಾಪ್ ಹ್ಯಾಕ್ ಆಗಿದೆ ಅನ್ನಬಹುದು.
ಫೈಲ್ ಡಿಲೀಟ್ : ಅನೇಕ ಬಾರಿ ನಾವು ಕೆಲವು ಫೈಲ್ ಅಥವಾ ಡಾಕ್ಯುಮೆಂಟ್ ಅನ್ನು ಸಿಸ್ಟಮ್ನಲ್ಲಿ ಎಲ್ಲೋ ಸೇವ್ ಮಾಡಿ ಇಟ್ಟಿರುತ್ತೇವೆ. ಆದರೆ ಕೆಲವೊಮ್ಮೆ ನಾವು ಸೇವ್ ಮಾಡಿದ ಫೈಲ್ಗಳು ತನ್ನಷ್ಟಕ್ಕೆ ಡಿಲೀಟ್ ಆಗಿರುತ್ತವೆ. ಇದಕ್ಕೂ ವೈರಸ್ಗಳು ಅಥವಾ ಮಾಲ್ವೇರ್ಗಳೇ ಕಾರಣವಾಗಿರುತ್ತದೆ.
ಫೇಕ್ ಫೋಲ್ಡರ್ಗಳು: ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ಗಳಲ್ಲಿ ಕೆಲವೊಂದು ವೈರಸ್ಗಳು ಇದ್ದಾಗ ಆಟೋಮ್ಯಾಟಿಕ್ ಆಗಿ ಫೇಕ್ ಫೋಲ್ಡರ್ಗಳು ಕ್ರಿಯೇಟ್ ಆಗುತ್ತವೆ. ಆದ್ದರಿಂದ ಯಾರೇ ಆಗಲಿ ನಿಮ್ಮ ಲ್ಯಾಪ್ಟಾಪ್ನಲ್ಲಿ ಫೇಕ್ ಫೋಲ್ಡರ್ಗಳು ಕಂಡುಬಂದ್ರೆ ತಕ್ಷಣ ಚೆಕ್ ಮಾಡಿಕೊಳ್ಳೋದು ಉತ್ತಮ.
ಈ ರೀತಿ ಸಮಸ್ಯೆಯಾದಾಗ ನಿಮ್ಮ ಲ್ಯಾಪ್ ಟಾಪ ಹ್ಯಾಕ್ ಆಗಿದೆ ಎಂದರ್ಥ. ಹೀಗೆ ಆದಾಗ ಒಮ್ಮೆ ಎಲ್ಲಾ ಚೆಕ್ ಮಾಡಿಕೊಂಡ ಸಾಫ್ಟ್ ವೇರ್ ಅಪ್ಡೇಟ್ ಮಾಡಿಸಬೇಕು. ಒಮ್ಮೆ ವೈರಸ್ ನಿಮ್ಮ ಕಂಪ್ಯೂಟರ್ ಅನ್ನು ಪ್ರವೇಶಿಸಿದ್ರೆ ಹೇಗೆ ರಕ್ಷಿಸಿಕೊಳ್ಳೋದು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಮೊದಲಿಗೆ ನೀವು ಅಪ್-ಟು-ಡೇಟ್ ಆಂಟಿವೈರಸ್ ಸಾಫ್ಟ್ವೇರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಹಾಗೆಯೇ ಯಾವುದೇ ಫೈಲ್ಗಳನ್ನು ಡೌನ್ಲೋಡ್ ಮಾಡುವಾಗ ಅಥವಾ ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡುವಾಗ ಎಚ್ಚರದಿಂದ ಇರಬೇಕು.