ಹೊಸ ಶೈಕ್ಷಣಿಕ ವರ್ಷಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಉಳಿದಿರುವ 27 ಸಾವಿರ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ರಾಜ್ಯ ಶೈಕ್ಷಣಿಕ ಇಲಾಖೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ತಾಲೂಕು ಕ್ಷೇತ್ರ ಶಿಕ್ಷಣ ಇಲಾಖಾವಾರು ಅರ್ಜಿ ಸಲ್ಲಿಕೆ ಮಾಡಬಹುದು.
ಮಾಸಿಕ 10 ಸಾವಿರ ರೂ. ಗೌರವ ಸಂಭಾವನೆ:
ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 2022-23 ನೇ ಸಾಲಿನಲ್ಲಿ ಅಗತ್ಯತೆ/ಹೆಚ್ಚುವರಿ ಶಿಕ್ಷಕರ ಹುದ್ದೆಗಳ ಹಂಚಿಕೆ, ಅನುಬಂಧ-1 ಮತ್ತು ಅನುಬಂಧ-2 ಸೂಚನೆಗಳನ್ನು ಪಾಲಿಸಿ ಪ್ರತಿ ಶಾಲೆಗೆ ಅಗತ್ಯವಿರುವ ಶಿಕ್ಷಕರ ಹುದ್ದೆಗಳ ಕುರಿತಂತೆ, ಶಾಲಾವಾರು ವೃಂದ ಮಂಜೂರಾತಿ ಕ್ರಮಗಳನ್ನು ಈಗಾಗಲೇ ಜಿಲ್ಲಾ ಹಂತದಲ್ಲಿ ನಿಯಮಾನುಸಾರ ಕೈಗೊಳ್ಳಲಾಗಿರುತ್ತದೆ. ಆಯ್ಕೆಯಾದ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ಮಾಸಿಕ 10 ಸಾವಿರ ರೂ. ಗೌರವ ಸಂಭಾವನೆ ನೀಡಲಾಗುತ್ತದೆ.
ಶಾಲೆಯ ಮುಖ್ಯ ಶಿಕ್ಷಕರ ಮೂಲಕವೇ ನೇಮಕ:
*ಖಾಲಿ ಇರುವ ಅಗತ್ಯ ಹುದ್ದೆಗಳಿಗೆ ಮಾತ್ರ ಆದ್ಯತೆ ಮೇರೆಗೆ ಅತಿಥಿ ಶಿಕ್ಷಕರನ್ನು ತ್ವರಿತವಾಗಿ ನೇಮಕಾತಿ ಮಾಡಲು ಜಿಲ್ಲಾ ಉಪನಿರ್ದೇಶಕರು ತಾಲ್ಲೂಕುವಾರು ಹುದ್ದೆಗಳ ಮರು ಹಂಚಿಕೆಯನ್ನು ದಿನಾಂಕ 26/05/2023 ರ ಒಳಗಾಗಿ ಕಡ್ಡಾಯವಾಗಿ ಮಾಡತಕ್ಕದ್ದು.
*ತಾಲ್ಲೂಕುವಾರು ಹುದ್ದೆಗಳ ಹಂಚಿಕೆ ಆದೇಶದ ಪ್ರತಿಯನ್ನು ಅಂದೇ ಈ ಕಛೇರಿಗೆ ಮಿಚಂಚೆ (ಇ-ಮೇಲ್) ಮೂಲಕ ಸಲ್ಲಿಸುವುದು
*, ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ ಅತಿಥಿ ಶಿಕ್ಷಕರ ಆಯ್ಕೆ ಜವಾಬ್ದಾರಿಯನ್ನು ಸಂಬಂಧಿಸಿದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರುಗಳ ಮೂಲಕವೇ ಮಾಡುವುದು.
ಜಿಲ್ಲಾವಾರು ಖಾಲಿ ಹುದ್ದೆಗಳು:
ಬೆಳಗಾವಿ- 1046
ಬಾಗಲಕೋಟೆ -1130
ವಿಯಯಪುರ-1115
ಕಲಬುರಗಿ -1706
ಬೀದರ್ -681
ರಾಯಚೂರು-1540
ಕೊಪ್ಪಳ-1035
ಗದಗ-471
ಧಾರವಾಡ-540
ಉತ್ತರಕನ್ನಡ-250
ಹಾವೇರಿ-617
ಬಳ್ಳಾರಿ-540
ಚಿತ್ರದುರ್ಗ-571
ದಾವಣಗೆರೆ-979
ಶಿವಮೊಗ್ಗ-731
ಉಡುಪಿ-312
ಚಿಕ್ಕಮಗಳೂರು-430
ತುಮಕೂರು-585
ಕೋಲಾರ-499
ಬೆಂಗಳೂರು ದಕ್ಷಿಣ-573
ಬೆಂಗಳೂರು ಗ್ರಾಮಾಂತರ-367
ಮಂಡ್ಯ-827
ಹಾಸನ-712
ದಕ್ಷಿಣಕನ್ನಡ-828
ಕೊಡಗು-259
ಮೈಸೂರು-1090
ಚಾಮರಾಜನಗರ-409
ಬೆಂಗಳೂರು ಉತ್ತರ-186
ಚಿಕ್ಕಬಳ್ಳಾಪುರ-551
ಚಿಕ್ಕೋಡಿ-1673
ಮಧುಗಿರಿ-553
ರಾಮನಗರ-561
ಯಾದಗಿರಿ-1364
ಶಿರಸಿ-584
ವಿಜಯನಗರ-1685