ನಮ್ಮ ದೇಶದಲ್ಲಿ ರಾಜಕೀಯ ಅಂತ ಬಂದ ಕೂಡಲೇ ಎಲ್ಲರೂ ಬಿಳಿಯ ಬಟ್ಟೆಯನ್ನು ಧರಿಸುತ್ತಾರೆ. ಇದು ತುಂಬಾ ಹಿಂದಿನ ಕಾಲದಿಂದಲೂ ಕೂಡ ನಡೆದುಕೊಂಡು ಬಂದಿದೆ. ಭಾರತದಲ್ಲಿ ಇದು ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಮಹಾತ್ಮ ಗಾಂಧಿಯವರು ಭಾರತೀಯರನ್ನು ಬ್ರಿಟನ್ನಿಂದ ಆಮದು ಮಾಡಿಕೊಳ್ಳುವ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವ ಸಲುವಾಗಿ ಕೈಯಿಂದ ನೂಲುವ ಖಾದಿಯನ್ನು ಮಾತ್ರ ಧರಿಸಬೇಕೆಂದು ಒತ್ತಾಯಿಸಿದರು. ಹಾಗಾಗಿ ಆಗದಿಂದ ಬಿಳಿಯ ಕಾದಿಬಟ್ಟೆಯನ್ನು ಹೆಚ್ಚಾಗಿ ಸಮಾರಂಭಗಳಲ್ಲಿ ಧರಿಸುತ್ತಿದ್ದರು.
ಬಿಳಿಯ ಖಾದಿ-ಉಡುಪುಗಳು ಸ್ವರಾಜ್ಯದ ಸಂಕೇತವಾಯಿತು. ಈ ಸಮಯದಲ್ಲಿ ಅನೇಕ ಜನರು ಖಾದಿ ಧರಿಸಲು ಪ್ರಾರಂಭಿಸಿದ್ದರು ಮತ್ತು ಇದು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಬೆಂಬಲದ ಸಂಕೇತವಾಯಿತು. ಈ ಬಿಳಿ ಬಣ್ಣವು ಶಾಂತಿ ಮತ್ತು ಸ್ವಚ್ಛತೆಯನ್ನು ಸೂಚಿಸುತ್ತದೆ.ಅವರಿಗೆ ಇದು ಶುದ್ಧತೆ ಮತ್ತು ಐಷಾರಾಮಿ ಸಂತೋಷಗಳನ್ನು ತ್ಯಾಗ ಮಾಡುವುದಾಗಿ ಸೂಚಿಸುತ್ತದೆ.
ಏಕೆಂದರೆ ರಾಜಕಾರಣಿಗಳು ಜನರಿಗಾಗಿ ಸೇವೆ ಮಾಡಬೇಕೇ ಹೊರತು ತಮ್ಮ ಸ್ವಾರ್ಥಕ್ಕಾಗಿ ಅಲ್ಲ. ಹೀಗೆ ಈ ಮೂಲಕ ಒಂದೇ ರೀತಿಯ ಸಮವಸ್ತ್ರ ತೊಡುವುದು ಸೂಕ್ತ ಎಂದು ಬಿಳಿ ಬಣ್ಣದ ಬಟ್ಟೆ ಆರಂಭವಾಯಿತು. ಸಿಂಪ್ಲಿಸಿಟಿಯ ಸಂಕೇತವಾಗಿ ಈ ಬಿಳಿ ಬಣ್ಣವು ಸೂಚಿಸುತ್ತದೆ. ಆದಾಗ್ಯೂ, ಪ್ರವೃತ್ತಿಯು ಈಗ ಬದಲಾಗುತ್ತಿದೆ. ಏಕೆಂದರೆ ಜನರು ತಮ್ಮ ನಡವಳಿಕೆಯಲ್ಲಿ “ಕಳಂಕವಿಲ್ಲದ” ರಾಜಕಾರಣಿಗಳನ್ನು ನೋಡಲು ಬಯಸುತ್ತಾರೆ.
ರಾಜಕೀಯದಲ್ಲಿ ಮಹಿಳೆಯರು ನಿರ್ದಿಷ್ಟವಾಗಿ ಈ ಸಂಹಿತೆಯನ್ನು ಅನುಸರಿಸಿಲ್ಲ ಏಕೆಂದರೆ ಸರಳ ಬಿಳಿಯನ್ನು ಧರಿಸುವುದು ವಿಧವೆಯ ಸಂಕೇತವಾಗಿದೆ. ಅಲ್ -ಜಜೀರಾ ವರದಿಯ ಪ್ರಕಾರ ಮಹಿಳೆಯರು ರಾಜಕಾರಣಿ ಆದರೆ, ಅದರಲ್ಲಿ ಬಿಳಿ ಬಣ್ಣದ ಬದಲು ಕೈ ಮಗ್ಗದ ಸೀರೆಯನ್ನು ಉಡಬಹುದು ಎಂದು ತಿಳಿಸಲಾಗಿದೆ. ಜಯಲಲಿತಾ ಅವರಂತಹ ಮಹಿಳಾ ನಾಯಕರು ಹೆಚ್ಚಾಗಿ ನೀಲಿ ಮತ್ತು ಹಸಿರು ಬಣ್ಣಗಳಂತಹ ಗಾಢವಾದ ಬಣ್ಣಗಳನ್ನು ಧರಿಸುತ್ತಿದ್ದರು ಮತ್ತು ಡಿಎಂಕೆ ನಾಯಕಿ ಕನಿಮೋಳಿ ಯಾವಾಗಲೂ ತಮ್ಮ ತವರು ರಾಜ್ಯಕ್ಕೆ ಪ್ರಕಾಶಮಾನವಾದ ಉಡುಪುಗಳನ್ನು ಧರಿಸುತ್ತಾರೆ.
ಒಟ್ಟಿನಲ್ಲಿ ರಾಜಕಾರಣಿಗಳು ಧರಿಸುವ ಉಡುಪುಗಳ ಆಧಾರದ ಮೇಲೆ ಅವರು ರಾಜಕೀಯದವರೇ ಎಂದು ಗುರುತಿಸಬಹುದಾಗಿದೆ.