ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಯಾರಾಗುತ್ತಾರೆ ಎನ್ನುವ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ನ ಪ್ರಮುಖ ನಾಯಕರಾದ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ರೇಸ್ನಲ್ಲಿದ್ದು ಇವರಲ್ಲಿ ಯಾರು ಮುಖ್ಯಮಂತ್ರಿ ಕುರ್ಚಿಯನ್ನು ಏರಲಿದ್ದಾರೆ ಎನ್ನುವ ಪ್ರಶ್ನೆ ರಾಜ್ಯದ ಜನತೆಯನ್ನು ಕಾಡುತ್ತಿದೆ.
ಸಿದ್ದರಾಮಯ್ಯ ಮತ್ತು ಡಿಕೆಶಿ ಇವರಿಬ್ಬರಿಗೆ ಮುಖ್ಯಮಂತ್ರಿ ಗಾದಿಗೆ ಏರಲು ಇರುವ ಅನುಕೂಲ ಮತ್ತು ಪ್ರತಿಕೂಲಗಳೇನು ಎಂಬ ಬಗ್ಗೆ ಇಲ್ಲಿದೆ ವಿಶ್ಲೇಷಣೆ
ಡಿ ಕೆ ಶಿವಕುಮಾರ್:
ಅನುಕೂಲ:
* ಪಕ್ಷವನ್ನು ಬಲಪಡಿಸಿದ ಕೀರ್ತಿ ಡಿಕೆಶಿಗೆ ಸಲ್ಲುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ.
*ಕಾಂಗ್ರೆಸ್ ಪಕ್ಷ ಕಷ್ಟದಲ್ಲಿದ್ದಾಗ ಟ್ರಬಲ್ಶೂಟರ್ ಆಗಿ ಕಾರ್ಯನಿರ್ವಹಿಸಿದ ಕೀರ್ತಿ.
*ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾಗೆ ಬಹಳ ಆಪ್ತ.
*ಪ್ರಬಲ ಒಕ್ಕಲಿಗ ಸಮುದಾಯದ ನಾಯಕ.
*ಪ್ರಭಾವಿ ದಾರ್ಶನಿಕರು ಮತ್ತು ಮುಖಂಡರ ಬೆಂಬಲವಿದೆ.
*ವಿವಿಧ ಖಾತೆಗಳನ್ನು ನಿಭಾಯಿಸಿರುವುದರಿಂದ ಸುದೀರ್ಘ ರಾಜಕೀಯ ಅನುಭವ.
*ಹಿಂದಿನ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷರು ಆದವರು ಸಿಎಂ ಆಗುವುದು ಖಚಿತ. ಹಿಂದೆ ಸಿಎಂ ಆಗಿದ್ದ ಎಸ್.ಎಂ.ಕೃಷ್ಣ, ವೀರೇಂದ್ರ ಪಾಟೀಲ್ ಕೂಡ ನಂತರ ಸಿಎಂ ಆಗಿದ್ದರು.
* ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಪ್ರಾಬಲ್ಯ ಸಾಧಿಸಿರುವುದು.
*ಪಕ್ಷದ ವರಿಷ್ಠ ನಾಯಕರಿಂದ ಬೆಂಬಲ ಸಿಗುವ ಸಾಧ್ಯತೆ ಹೆಚ್ಚು.
*ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ದಾಖಲೆ ಮತಗಳ ಅಂತರದಿಂದ ಜಯಗಳಿಸಿರುವುದು.
ಪ್ರತಿಕೂಲ:
*ಐಟಿ, ಇಡಿ ಮತ್ತು ಸಿಬಿಐನಲ್ಲಿ ಡಿಕೆಶಿ ವಿರುದ್ದ ಇರುವ ಹಲವು ಪ್ರಕರಣಗಳಿದ್ದು, ಮುಂದೆ ವಿಚಾರಣೆ ಬರುವ ಸಾಧ್ಯತೆಗಳು ಹೆಚ್ಚು.
* ಈ ಹಿಂದೆ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿರುವ ಕಳಂಕ.
*ಡಿ ಕೆ ಶಿವಕುಮಾರ್ ಪ್ರಭಾವ ಹಳೆ ಮೈಸೂರು ಪ್ರದೇಶಕ್ಕೆ ಸೀಮಿತ
*ಸಿದ್ದರಾಮಯ್ಯನವರಿಗೆ ಹೋಲಿಸಿದರೆ ರಾಜಕೀಯ ಅನುಭವ ಕಡಿಮೆ.
*ಒಕ್ಕಲಿಗ ಸಮುದಾಯ ಹೊರತು ಪಡಿಸಿ ಇತರ ಸಮುದಾಯಗಳಲ್ಲಿ ಜನಪ್ರಿಯತೆ ಕಡಿಮೆ.
*ಪಕ್ಷದಲ್ಲಿ ಸಿದ್ದರಾಮಯ್ಯನವರ ಬೆಂಬಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ನಿಲ್ಲುವ ಸಾಧ್ಯತೆ.
*ದಲಿತ ಅಥವಾ ಲಿಂಗಾಯುತ ಸಿಎಂ ಗೆ ಅವಕಾಶ ನೀಡಿದರೆ ಸಿಎಂ ಆಗುವ ಅವಕಾಶ ಕಡಿಮೆ.
*ರಾಹುಲ್ಗಾಂಧಿಗೆ ಸಿದ್ದರಾಮಯ್ಯ ಆಪ್ತವಾಗಿರುವುದು.
ಸಿದ್ದರಾಮಯ್ಯ:
ಅನುಕೂಲ:
*ರಾಜಯಕೀಯ ಅನುಭವ, ಹಿರಿತನ ಮತ್ತು ಮಾಸ್ ಲೀಡರ್ ಎಂಬ ಇಮೇಜ್.
*ಕಾಂಗ್ರಸ್ ಪಕ್ಷದಲ್ಲಿ ದೊಡ್ಡ ಬೆಂಬಲ ವರ್ಗವನ್ನು ಹೊಂದಿರುವುದು.
*೨೦೧೩ರಲ್ಲಿ ೨೦೧೮ರ ವರೆಗೆ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸಿದ ಅನುಭವ.
* 13 ಬಾರಿ ರಾಜ್ಯದಲ್ಲಿ ಬಜೆಟ್ ಮಂಡಿಸಿದ ಅನುಭವ.
*ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಮತ್ತು ದಲಿತರ ನಾಯಕ ಎಂಬ ಹೆಗ್ಗಳಿಕೆ.
*ಸಮಾಜವಾದಿ ತತ್ವವನ್ನು ಅನುಸರಿಸುವ ಸಿಎಂ ಎಂಬ ಖ್ಯಾತಿ.
* ಇದು ಕೊನೆಯ ಚುನಾವಣೆ ಮತ್ತು ಸಿಎಂ ಆಗುವ ಕೊನೆಯ ಅವಕಾಶ.
*ರೇಸ್ನಲ್ಲಿರುವ ಶಿವಕುಮಾರ್ ವಿರುದ್ಧ ಇರುವ ಐಟಿ, ಇಡಿ, ಸಿಬಿಐ ಕೇಸ್ ಗಳು.
ಪ್ರತಿಕೂಲ:
*ಮಲ್ಲಿಕಾರ್ಜುನ ಖರ್ಗೆ, ಡಾ.ಜಿ ಪರಮೇಶ್ವರ ಅವರಂತಹ ಹಿರಿಯ ಕಾಂಗ್ರೆಸ್ ನಾಯಕರು ಸಿಎಂ ಕುರ್ಚಿಯ ಮೇಲೆ ಕಣ್ಣು ಇಟ್ಟಿರುವುದು.
*ಪಕ್ಷ ಸಂಘಟನೆಯಲ್ಲಿ ಹಿಂದೆ ಉಳಿದಿರುವುದು.
*ಮೂಲ ಕಾಂಗ್ರೆಸ್ನವರು ಸಿದ್ದರಾಮಯ್ಯನವರನ್ನು ಇನ್ನೂ ವಲಸಿಗರು ಎಂಬಂತೆ ನೋಡುತ್ತಿರುವುದು.
*ಡಿಕೆಶಿಗಿಂತ ವಯಸ್ಸಿನಲ್ಲಿ ಹಿರಿಯವರಾದರಿಂದ ಕಿರಿಯರಿಗೆ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚು.
*ಪೂರ್ಣಾವಧಿಯ ಮುಖ್ಯಮಂತ್ರಿಯಾದ ನಂತರದ ೨೦೧೮ರ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ವಿಫಲ.