ಚುನಾವಣೆಯ ಪ್ರಚಾರ ಕಾರ್ಯದ ಸಂದರ್ಭದಲ್ಲಿ ಕಾಂಗ್ರೆಸ್ ವಲಯದಲ್ಲಿ ಭಜರಂಗದಳವನ್ನು ಬ್ಯಾನ್ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದರು. ಇತ್ತ ಕಾಂಗ್ರೆಸ್ನ ಗ್ಯಾರಂಟಿಗಳಲ್ಲಿ ಇದು ಒಂದು ಅನ್ನುವ ಮಟ್ಟದಲ್ಲಿ ಈ ವಿಷಯ ಚರ್ಚೆಗೆ ಕಾರಣವಾಗಿತ್ತು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಖ್ಯಮಮತ್ರಿ ಸಿದ್ದರಾಮಯ್ಯ ಈಗ ನೈತಿಕ ಪೊಲೀಸ್ ಗಿರಿ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ನೈತಿಕ ಪೊಲೀಸ್ಗಿರಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಆಯಾ ವಿಭಾಗದ ಡಿಸಿಪಿ ಹಾಗೂ ಎಸ್ಪಿಗಳೇ ಹೊಣೆಗಾರರಾಗುತ್ತಾರೆ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ರಾಜ್ಯದಲ್ಲಿ ಕೆಲವು ಸಂಘಟನೆಗಳು ನೈತಿಕ ಪೊಲೀಸ್ ಗಿರಿಯನ್ನು ಮಾಡಿರುವುದನ್ನು ಕಂಡಿರುತ್ತೇವೆ. ರಾಜ್ಯದಲ್ಲಿ ತಡರಾತ್ರಿ ಪಾರ್ಟಿ, ಆಶ್ಲೀಲ ವರ್ತನೆ ಹಾಗೂ ಅನ್ಯ ಕೋಮಿನ ಹುಡುಗ ಹುಡುಗಿ ಅಕಸ್ಮಿಕವಾಗಿ ಬಸ್ಸಿನಲ್ಲಿ ಒಂದೇ ಸೀಟಿನಲ್ಲಿ ಪ್ರಯಾಣಿಸಿದ್ದರೆ ಕಾರ್ಯಕರ್ತರು ಪ್ರತ್ಯಕ್ಷವಾಗಿ ಬಿಡುತ್ತಿದ್ದರು.
ಈ ಬಗ್ಗೆ ಸಾಕಷ್ಟು ಚರ್ಚೆಗಳೇ ನಡೆದಿದೆ ಆದರು ಯಾರೊಬ್ಬರು ಹದ್ದು ಮೀರಿ ನಡೆದಾಗ ನಾವು ಅಲ್ಲಿ ಇರುತ್ತೇವೆ ಎಂಬ ವಾದಗಳು ಸಂಘಟಿಕರಿಂದ ಕೇಳಿ ಬಂದಿದ್ದವು.
ಕೆಲವೊಂದು ಸಂದರ್ಭದಲ್ಲಿ ಅನೈತಿಕ ಚಟುವಟಿಕೆಗಳನ್ನು ಹತ್ತಿಕ್ಕಲು ಸರಿ ಅನಿಸಿದ್ದರು ದೇಶದ ಕಾನೂನು ವ್ಯವಸ್ಥೆಯನ್ನು ಮೀರಿ ನಡೆಯುವುದು ಸರಿಯಲ್ಲ. ಇದರಿಂದ ನಮ್ಮ ದೇಶದ ಕಾನುನೂ ವ್ಯವಸ್ಥೆಯನ್ನು ನಾವು ದುರ್ಬಲಗೊಳಿಸಿದಂತಾಗುತ್ತದೆ.
ಸಮಾಜದ ಶಾಂತಿಗೆ ದಕ್ಕೆ ತರುವಂತಹ ಕೆಲಸವು ಸಂಘಟನೆಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ. ಸಮಾಜದಲ್ಲಿ ಧಾರ್ಮಿಕ ಕಲಹಗಳಿಗೂ ಕೆಲವೊಮ್ಮೆ ಈ ಸಂಘಟನೆಗಳು ಕಾರಣವಾಗುತ್ತದೆ. ಸಮಾಜದ ಆರೋಗ್ಯವನ್ನು ಹಾಳುಮಾಡುವ ಯಾವುದೇ ಸಂಘಟನೆಯಾಗಲಿ ಅದನ್ನು ನಿಯಂತ್ರಿಸುವುದು ಅವಶ್ಯಕ ಎಂದಿದ್ದಾರೆ.