ವಾಟ್ಸಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನ ಪರಿಚಯಿಸುವುದರ ಮೂಲಕ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದೆ.
ಇನ್ನು ಮುಂದೆ ವಾಟ್ಸಪ್ ನಲ್ಲಿ ಕಳುಹಿಸಿದ ಮೆಸೇಜನ್ನು ಕಳುಹಿಸಿ 15 ನಿಮಿಷಗಳವರೆಗೆ ಎಡಿಟ್ ಮಾಡಬಹುದು ಎಂದು ಮೇಟಾ ತಿಳಿಸಿದೆ.
ಮೆಸೇಜ್ ಎಡಿಟ್ ಮಾಡೋದು ಹೇಗೆ:
ಮೆಸೇಜನ್ನು ಲಾಂಗ್ ಪ್ರೆಸ್ ಮಾಡಿದರೆ ಅದರಲ್ಲಿ ಮೆನು ಕಾಣಿಸಿಕೊಂಡು ಎಡಿಟ್ ಆಯ್ಕೆ ಕಾಣುತ್ತದೆ ಆಗ ನಾವು ಕಳುಹಿಸಿದ ಸಂದೇಶ ಕಾಗುಣಿತ ದೋಷವಿದ್ದರೆ ಸರಿಪಡಿಸಬಹುದು. ಇಲ್ಲವೇ ಹೆಚ್ಚುವರಿ ಮೆಸೇಜನ್ನು ಸೇರಿಸಬಹುದು. ಹೀಗೆ ಎಡಿಟ್ ಮಾಡಲು ನಾವು ಮೆಸೇಜ್ ಕಳುಹಿಸಿದ ನಂತರ 15 ನಿಮಿಷಗಳವರೆಗೆ ಸಮಯವಿರುತ್ತದೆ ಹಾಗೆ ನಾವು ಎಡಿಟ್ ಮಾಡಿದರೆ ಮೆಸೇಜನ್ನು ಸ್ವೀಕರಿಸಿದವರಿಗೂ ಇದು ಎಡಿಟ್ ಮಾಡಿರುವ ಸಂದೇಶ ಎಂದು ತಿಳಿಯುವುದಿಲ್ಲ.
ಎಲ್ಲ ವೈಯಕ್ತಿಕ ಸಂದೇಶಗಳು, ಮಾಧ್ಯಮ, ಕರೆಗಳಂತೆ ಇದು ಕೂಡ ಎನ್ ಕ್ರಿಪ್ಶನ್ ನಿಂದ ರಕ್ಷಿಸಲ್ಪಡುತ್ತದೆ.
ನಿಮ್ಮ ಸಂದೇಶಗಳ ಮೇಲೆ ನಿಮಗೆ ಹೆಚ್ಚಿನ ನಿಯಂತ್ರಣ ಹೊಂದಲು ಈ ಯೋಜನೆ ಜಾರಿಗೊಳಿಸಲಾಗಿದೆ ಎಂದು ಮೇಟಾ ಹೇಳಿದೆ.
ವಾಟ್ಸಾಪ್ ಬಳಕೆದಾರರು ತಮ್ಮ ಖಾಸಗಿ ಸಂಭಾಷಣೆಯನ್ನು ಇನ್ನಷ್ಟು ಖಾಸಗಿಯಾಗಿಸಲು ಚಾಟ್ ಲಾಕ್ ಎಂಬ ಹೊಸ ಫೀಚರ್ಅನ್ನು ಮೇ 15ರಂದು ಬಿಡುಗಡೆ ಮಾಡಲಾಗಿತ್ತು. ಇದೀಗ ಸಂದೇಶಗಳನ್ನು ಎಡಿಟ್ ಮಾಡುವ ಆಯ್ಕೆ ನೀಡಲು ವಾಟ್ಸಾಪ್ ಮುಂದಾಗಿದೆ.