ಕೆಲವೊಮ್ಮ ನಾವು ಎಷ್ಟೇ ಚೆನ್ನಾಗಿ ಡ್ರೇಸ್, ಮೇಕಪ್ ಮಾಡಿ ತಯಾರಾದರು ನಮ್ಮ ಹೇರ್ ಸ್ಟೆಯಿಲ್ ಎಲ್ಲವನ್ನು ಹಾಳು ಮಾಡುತ್ತದೆ. ಅದರಲ್ಲೂ ಗುಂಗುರು ಕೂದಲು ಹೆಚ್ಚಾಗಿ ಅಂದವನ್ನು ಕೆಡಿಸುತ್ತದೆ. ದಪ್ಪನೆ ಕಪ್ಪಾದ ಗುಂಗುರು ಕೂದಲು, ಗಂಟು ಕಟ್ಟಿದ ಕೂದಲು ಬಾಚುಕೊಳ್ಳದು ಕೂಡ ಕಷ್ಟ. ಅದರಲ್ಲೂ ತುಂಬಾನೇ ಒರಟಾಗಿರುವ ಮತ್ತು ಸಿಕ್ಕು ಕಟ್ಟಿರುವ ಕೂದನ್ನು ಸ್ಟೆಯಿಲಿಶ್ ಆಗಿ ಹೇರ್ ಸ್ಟೆಯಿಲ್ ಮಾಡುವುದು ತುಂಬಾನೇ ಕಷ್ಟ. ಇದು ನೈಸರ್ಗಿಕವಾಗಿ ಬೆಳೆಯುವ ಕೂದಲಾಗಿರುವುದರಿಂದ ಇದನ್ನು ಅಂದವಾಗಿಸುವುದು ಕಷ್ಟಕರವಾದ ಕೆಲಸ.
ನೈಸರ್ಗಿಕವಾಗಿ ಗುಂಗುರು ಕೂದಲು ಆರೈಕೆ ಮಾಡಲು ಅತಿಯಾದ ಅನುಭವವನ್ನು ಬೇಕಾಗುತ್ತದೆ. ದಪ್ಪ, ಗುಂಗುರು ಕೂದಲು ಇತರ ಕೂದಲಿಗೆ ಹೋಲಿಸಿದರೆ ಒಡೆಯುವಿಕೆ ಮತ್ತು ಶುಷ್ಕತೆಗೆ ಹೆಚ್ಚು ಒಳಗಾಗುತ್ತದೆ. ಸರಿಯಾದ ದಿನಚರಿ ಮತ್ತು ಕೂದಲಿನ ಆರೈಕೆ ಉತ್ಪನ್ನಗಳೊಂದಿಗೆ, ನಾವು ನಮ್ಮ ಗುಂಗುರು ಕೂದಲನ್ನು ಆರೋಗ್ಯಕರವಾಗಿ ಮತ್ತು ಸುಂದರವಾಗಿ ಇಟ್ಟುಕೊಳ್ಳಬಹುದು ಮತ್ತು ಗುಂಗುರು ಕೂದಲಿನ ಆರೈಕೆಯನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹದು.
ಗುಂಗುರು ಕೂದಲನ್ನು ಅಗತ್ಯವಿದ್ದಾಗ ಮಾತ್ರ ತೊಳೆಯಬೇಕು. ಗುಂಗುರು ಕೂದಲನ್ನು ಪದೇ ಪದೇ ತೊಳೆಯುವುದರಿಂದ ಅದು ಶುಷ್ಕ, ಜಿಗುಪ್ಪೆ ಮತ್ತು ನಿರ್ವಹಿಸಲು ಕಷ್ಟವಾಗುತ್ತದೆ. ದಪ್ಪ, ಗುಂಗುರು ಕೂದಲನ್ನು ಪ್ರತಿದಿನ ಅಥವಾ ವಾರಕ್ಕೊಮ್ಮೆ ತೊಳೆಯುವ ಅಗತ್ಯವಿಲ್ಲ. ಕೂದಲು ಉದ್ದವಾಗಿದ್ದರೆ ಅಥವಾ ದಪ್ಪವಾಗಿದ್ದರೆ, ಹಾನಿ ಅಥವಾ ಸೆಳೆತವನ್ನು ಕಡಿಮೆ ಮಾಡಲು ಅದನ್ನು ವಿಭಾಗಗಳಾಗಿ ಮಾಡಿ ತೊಳೆಯ ಬೇಕು. ಗುಂಗುರು ಕೂದಲಿಗಾಗಿ ರೂಪಿಸಲಾದ ಮಾಯಿಶ್ಚರೈಸಿಂಗ್ ಶಾಂಪೂವನ್ನು ಬಳಸಬೇಕು.
ಕೂದಲಿನಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಬಹದು. ಗುಂಗುರು ಕೂದಲು ಇತರ ಕೂದಲಿಗಿಂತ ಶುಷ್ಕವಾಗಿರುತ್ತದೆ. ಇದನ್ನು ತೇವಾಂಶದಿ0ದ ಇರಿಸಲು, ಕೂದಲನ್ನು ಕಂಡೀಷನ್ ಮಾಡಬೇಕು. ಕೂದಲನ್ನು ತೊಳೆದ ನಂತರ ದಪ್ಪ ಕಂಡೀಷನರ್ ಹಚ್ಚಿ, ನಂತರ ಮಾಯಿಶ್ಚರೈಜೇಶನ್ಗೆ ಸಹಾಯ ಮಾಡಲು ಕೂದಲನ್ನು ತೊಳೆಯುವುದು.
ಕೂದಲು ತುಂಬಾ ಒಣಗಿದ್ದರೆ ಅಥವಾ ಶಾಂಪೂ ಮಾಡುವ ಮೊದಲು ಕೂದಲನ್ನು ಬೇರ್ಪಡಿಸಲು ತೊಂದರೆ ಇದ್ದರೆ, ಕೂದಲನ್ನು ತೊಳೆಯುವ ಮೊದಲು ಕಂಡೀಷನರ್ ಅನ್ನು ಸಹ ಬಳಸಬಹುದು.
ತಲೆಬುರುಡೆಯ ಬಗ್ಗೆ ಕಾಳಜಿ ಅವಶ್ಯಕ. ಕೂದಲು ತೊಳೆಯುವ ನಡುವೆ ಬಹಳ ಸಮಯ ಕಳೆದರೆ, ನೆತ್ತಿಯ ಮೇಲೆ ತೈಲದ ಅತಿಯಾದ ಉತ್ಪಾದನೆಯಿಂದಾಗಿ ನಿಮಗೆ ತಲೆಹೊಟ್ಟು ಬರಬಹುದು. ತಲೆಹೊಟ್ಟು ಶಾಂಪೂ ಕೂದಲನ್ನು ಒಣಗಿಸುತ್ತದೆ. ತಲೆಹೊಟ್ಟು ನಿವಾರಕ ಶ್ಯಾಂಪೂವನ್ನು ನಿಮ್ಮ ತಲೆಬುರುಡೆಗೆ ಮಾತ್ರ ಹಚ್ಚಿ, ಕೂದಲಿನ ಉಳಿದ ಭಾಗಕ್ಕೆ ಮಾಯಿಶ್ಚರೈಸಿಂಗ್ ಶಾಂಪೂ ಬಳಸಿ.
ಗುಂಗುರು ಕೂದಲು ಸುಲಭವಾಗಿ ಕಟ್ಟಲ್ಪಡುತ್ತದೆ. ತೊಳೆಯಲು ಕೂದಲನ್ನು ಬೇರ್ಪಡಿಸಲು, ಕೂದಲನ್ನು ಚೆನ್ನಾಗಿ ಒದ್ದೆ ಮಾಡಿ ಮತ್ತು ಲೀವ್-ಇನ್ ಕಂಡಿಷನರ್ ಹಚ್ಚಿ ಮತ್ತು ಬೆರಳುಗಳಿಂದ ಅಥವಾ ಅಗಲವಾದ ಹಲ್ಲಿನ ಬಾಚಣಿಗೆ ಮತ್ತು / ಅಥವಾ ಗುಂಗುರು ಕೂದಲಿಗಾಗಿ ವಿನ್ಯಾಸಗೊಳಿಸಲಾದ ಬ್ರಷ್ ನಿಂದ ಬೇರ್ಪಡಿಸಬೇಕು. ಡಿಟ್ಯಾಂಗ್ಲಿಂಗ್ ಅನ್ನು ಸುಲಭಗೊಳಿಸಲು ವಿಭಾಗಗಳಲ್ಲಿ ಕೆಲಸ ಮಾಡಬೇಕು.
ಗುಂಗುರು ಕೂದಲನ್ನು ಸೂರ್ಯನಿಂದ ರಕ್ಷಿಸಿಕೊಳ್ಳಬೇಕು. ಶಾಖ ಮತ್ತು ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳು ಗುಂಗುರು ಕೂದಲನ್ನು ಒಣಗಿಸುತ್ತದೆ. ಗುಂಗುರು ಕೂದಲನ್ನು ರಕ್ಷಿಸಲು, ಅಗಲವಾದ ಅಂಚಿನ ಟೋಪಿಯನ್ನು ಧರಿಸುವುದು ಸೂಕ್ತ ಮತ್ತು ಕೂದಲನ್ನು ತೇವಾಂಶದಿAದ ಇರಿಸಿಕೊಳ್ಳಬೇಕು.
ಮಲಗುವಾಗ ಕೂದಲಿನ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಕೂದಲನ್ನು ತಲೆಯ ಮೇಲ್ಭಾಗದಲ್ಲಿ ಸಡಿಲವಾದ ಪೊನಿಟೈಲ್ಗೆ ಹಾಕಿ ಕೊಳ್ಳಬಹುದು ಅಥವಾ ಮಲಗುವ ಮೊದಲು ಗುಂಗುರು ಕೂದಲನ್ನು ಕಾಪಾಡಿಕೊಳ್ಳಲು ದಿಂಬಿನ ಜೊತೆ ಘರ್ಷಣೆಯನ್ನು ಕಡಿಮೆ ಮಾಡಲು ಸಡಿಲವಾದ ಜಡೆಯನ್ನು ಹಾಕಬಹುದು,