ಸೂಪರ್ ಮಾರ್ಕೆಟ್ನಲ್ಲಿ ಖರೀದಿ ಮಾಡಿದ್ದರೆ ಈ ಶಾಪಿಂಗ್ ಬಾಸ್ಕೇಟ್ ಚಿರಪರಿಚಿತ, ನಾವು ಯಾವುದೇ ಸೂಪರ್ ಮಾರ್ಕೆಟ್ಗೆ ಹೋದಾಗ ಅಲ್ಲಿ ಮುಖ್ಯ ದ್ವಾರದ ಬಳಿಯೇ ಒಂದಿಷ್ಟು ಬಾಸ್ಕೇಟ್ಗಳನ್ನು ಇಟ್ಟಿರುವುದನ್ನು ಕಾಣುತ್ತೇವೆ.
ಮಧ್ಯಮ ಗಾತ್ರದ ಮತ್ತು ಟ್ರೋಲಿ ಬಾಸ್ಕೇಟ್. ಇದನ್ನು ಹಿಡಿದುಕೊಂಡು ಆರಾಮವಾಗಿ ತಮ್ಮ ಅಗತ್ಯದ ವಸ್ತುಗಳ ಖರೀದಿಗೆ ಮುಂದಾಗುತ್ತಾರೆ. ಹೀಗೆ ಖರೀದಿಯು ಜೋರಾಗಿ ಬಾಸ್ಕೇಟ್ ತುಂಬಿದು ಗೊತ್ತೆ ಆಗಲ್ಲ ಯಾಕೆಂದರೆ ಈ ಬಾಸ್ಕೇಟ್ ಉದ್ದೇಶ ಇಡೇರಿರುತ್ತದೆ,
ಹೌದು ಗ್ರಾಹಕರನ್ನು ಸೆಳೆಯಲು ಬಣ್ಣ ಬಣ್ಣದ ಜಾಹೀರಾತಿನ್ನು ಬಳಸಿ ಈ ಮೂಲಕ ಜನರನ್ನು ಆಕರ್ಷಿಸುತ್ತಾರೆ. ಹಾಗೆ ಬಂದ ಗ್ರಾಹಕರನ್ನು ಬರಿಕೈಯಲ್ಲಿ ಹೋಗದಂತೆ ನೋಡಿಕೊಳ್ಳುವ ಕೆಲಸ ಈ ಶಾಪಿಂಗ್ ಬಾಸ್ಕೇಟ್ನದ್ದು.
ಸಾಮಾನ್ಯವಾಗಿ ಜಾಹೀರಾತು ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹಾಗೆನೇ ಶಾಪಿಂಗ್ ಬಾಸ್ಕೇಟ್ ಕೂಡ ನಮ್ಮ ಮನಸ್ಸಿ ಮೇಲೆ ಪರಿಣಾಮ ಬೀರುತ್ತದೆ. ನಮ್ಮಲ್ಲಿ ಕೊಳ್ಳುವ ಸಂಸ್ಕೃತಿ ತುಸು ಹೆಚ್ಚು ಇರುವುದರಿಂದ ಜನರು ಜಾಹೀರಾತಿಗೆ ಮಾರು ಹೋಗಿ ಖರೀದಿಗೆ ದೌಡಯಿಸುತ್ತಾರೆ.
ಶಾಪಿಂಗ್ ಮಾರ್ಕೆಟ್ಗಳಲ್ಲಿ ಬಾಸ್ಕೇಟ್ ಹಿಡಿದು ಮುಂದೆ ಮುಂದೆ ಸಾಗುತ್ತಾ ಹೋಗುವಾಗ ಪ್ರತಿಯೊಂದು ವಸ್ತು ನಮ್ಮ ಅಗತ್ಯದ ವಸ್ತು ಅನಿಸೊದಿಕ್ಕೆ ಶುರುವಾಗುತ್ತದೆ. ಇನ್ನು ಕೆಲವರು ಕೆಲವೊಂದು ವಸ್ತುಗೆ ಆಕರ್ಷಿತರಾಗಿ ಖರೀದಿಸಲು ಮುಂದಾಗುತ್ತಾರೆ. ಹೀಗೆ ಖರೀದಾರರಿಗೆ ಅರಿವಿಲ್ಲದೆ ಬಾಸ್ಕೇಟ್ ತುಂಬುತ್ತಾ ಹೋಗುತ್ತದೆ.
ಇನ್ನು ಕೆಲವು ಸಂದರ್ಭದಲ್ಲಿ ಇಷ್ಟು ದೊಡ್ಡ ಶಾಪ್ಗ್ ಬಂದು ಇಷ್ಟು ಕಡಿಮೆ ವಸ್ತು ಖರೀದಿಸುವುದೆ ? ಎಂಬ ಸಣ್ಣತನದ ಭಾವನೆ ಮೂಡುತ್ತದೆ. ಕೆಲವರು ಕೇವಲ ಎರಡು ಮೂರು ವಸ್ತುವಿನ ಖರೀದಿಗೆ ಬಂದವರು ಬಾಸ್ಕೇಟ್ ತುಂಬಾ ವಸ್ತುಗಳನ್ನು ಖರೀದಿಸುತ್ತಾರೆ. ಇದು ಮನಸ್ಸಿನ ಆಟ. ಬಾಸ್ಕೇಟ್ನ ಪ್ರಭಾವ.
ಮಾರ್ಕೆಟೀಂಗ್ ಬಳಗದ ಈ ಜಾಣ ತಂತ್ರಗಾರಿಕೆ ಮೆಚ್ಚುವಂತದ್ದು. ತಮ್ಮ ಬ್ರಾಂಡ್ ಕಂಪೆನಿಗಳನ್ನು ಚೆನ್ನಾಗಿ ನಡೆಸಲು ವಿವಿಧ ರೀತಿಯ ಕಾರ್ಯತಂತ್ರಗಳನ್ನು ರೂಪಿಸಿರುತ್ತಾರೆ. ಇಂತಹದೊAದು ಮನೋವೈಜ್ಞಾನಿಕ ಸಿದ್ದಾಂತವನ್ನು ಬಳಸಿಕೊಂಡು ಮಾರ್ಕೆಟಿಂಗ್ ಮಾಡುವ ಚಾಣಾಕ್ಷತನಕ್ಕೆ ಮೆಚ್ಚಲೇ ಬೇಕು.
ಶಾಪಿಂಗ್ ಮಾಡುವಾಗ ಶಾಪಿಂಗ್ ಬಾಸ್ಕೇಟ್ನ ಹಿಂದೆ ಇಂತದೊಂದು ಮಾರ್ಕೆಟಿಂಗ್ ಕಾರ್ಯತಂತ್ರ ಇದೆ ಎನ್ನುವ ಕಲ್ಪನೆ ಅರಿವಿಲ್ಲದೆ ನಮ್ಮ ಜೇಬಿಗೆ ನಾವೇ ಕತ್ತರಿ ಹಾಕಿಕೊಳ್ಳುತ್ತಿದ್ದೇವೆ.