ನೈಸರ್ಗಿಕ ಸಂಪತ್ತಿನ ಗಣಿಯಾಗಿ ಆಧ್ಯಾತ್ಮಿಕವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಲೋಕದಂತಿರುವ ಭೂತಾನ್ ವಿಶ್ವದಲ್ಲೇ ಪ್ರಮುಖ ಪ್ರವಾಸಿ ತಾಣವಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.
ಹಲವಾರು ಪ್ರಸಿದ್ಧ ಆಕರ್ಷಣೀಯ ಪ್ರವಾಸಿ ತಾಣಗಳು ಹೊಂದಿದ್ದು, ಹಲವಾರು ವೈಶಿಷ್ಟ್ಯಗಳಿಂದ ಕೂಡಿರುವ ಭೂತಾನ್ ದೇಶ ಬೌದ್ಧ ಧರ್ಮದ ಪ್ರಮುಖ ಕೇಂದ್ರವಾಗಿದೆ.
ಹಿಂದೂ ಹಾಗೂ ಬೌದ್ಧ ಧರ್ಮವೇ ಪ್ರಮುಖವಾಗಿರುವ ಭೂತಾನ್ ದೇಶದಲ್ಲಿ ಒಂದೇ ಒಂದು ಚರ್ಚ್ ಆಗಲಿ ಮಸೀದಿಯಾಗಲಿ ಇಲ್ಲ ಎಂದು ಕೇಳುವಾಗ ನಿಮಗೆ ಅಚ್ಚರಿಯಾಗಬಹುದು ಆದರೂ ಕೂಡ ಇದು ನಿಜ.
ಭೂತನ್ ಅತ್ಯಂತ ಚಿಕ್ಕ ದೇಶವಾಗಿದ್ದು, ಅಲ್ಲಿನ ಜನಸಂಖ್ಯೆಯಲ್ಲಿ ಮುಕ್ಕಾಲು ಭಾಗ ಬೌದ್ಧ ಧರ್ಮದವರೇ ಇದ್ದು ಉಳಿದ ಭಾಗ ಹಿಂದೂ ಧರ್ಮದವರಿದ್ದಾರೆ ಇನ್ನು ಇಲ್ಲಿ ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದವರು ಕಾಣಸಿಗುವುದು ಬಹಳ ವಿರಳ.
ಮಸೀದಿ ಚರ್ಚ್ ಇಲ್ಲ:
ಬೌದ್ಧ ಧರ್ಮದ ಪ್ರಾಬಲ್ಯವಿರುವ ಭೂತಾನ್ ನಲ್ಲಿ ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದವರು ಕಾಣಸಿಗುವುದು ಅತಿ ವಿರಳ. ಹಾಗೆ ಇಲ್ಲಿ ಮಸೀದಿ ಅಥವಾ ಚರ್ಚ್ ಆಗಲಿ ಇಲ್ಲ ಮಸೀದಿ ಹಾಗೂ ಚರ್ಚ್ ನ್ನು ನಿರ್ಮಿಸಲು ಸರ್ಕಾರದಿಂದ ಅನುಮತಿ ಕೇಳಿದರು ಕೂಡ ಭೂತಾನ್ ಸರ್ಕಾರ ಅನುಮತಿಯನ್ನು ನೀಡಿಲ್ಲ.
ಭೂತನದಲ್ಲಿ ನೆಲೆಯಾಗಿರುವ ಅಥವಾ ಪ್ರವಾಸಿ ಮುಸ್ಲಿಂ ಕ್ರೈಸ್ತರು ಪ್ರಾರ್ಥನೆಯನ್ನು ಸಲ್ಲಿಸಲು ಬಮ್ ಥಾಂಗ್ ನಲ್ಲಿ ಸಣ್ಣ ಪ್ರಾರ್ಥನಾ ಮಂದಿರವನ್ನು ನಿರ್ಮಿಸಲಾಗಿದೆ. ಇಲ್ಲಿ ಮೂರು ಪ್ರತ್ಯೇಕ ಕೊಠಡಿಗಳಿದ್ದು ಮುಸ್ಲಿಮರು ಸಿಕ್ಕರು ಕ್ರೈಸ್ತರು ಪ್ರಾರ್ಥನೆಯನ್ನು ಸಲ್ಲಿಸಬಹುದು.