ಬೀಜಿಂಗ್ ; ಚೀನಾದ ಕಮ್ಯನಿಸ್ಟ್ ಪಕ್ಷವು ಮಂಗಳವಾರ ಕಾಣೆಯಾಗಿದ್ದ ತನ್ನ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ಫು ಅವರನ್ನು ವಜಾಗೊಳಿಸಿದೆ. ಎರಡು ತಿಂಗಳ ಹಿಂದಷ್ಟೇ ಮಾಜಿ ಕ್ಯಾಬಿನೆಟ್ ಸಹೋದ್ಯೋಗಿ ಮತ್ತು ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರನ್ನೂ ಚೀನಾ ವಜಾಗೊಳಿಸಿತ್ತು. ಅಲ್ಲದೆ ಮಂಗಳವಾರ, ಚೀನಾ ಹಣಕಾಸು ಸಚಿವ ಲಿಯು ಕುನ್ ಅವರನ್ನು ಕೂಡ ತೆಗೆದುಹಾಕಿತು ಮತ್ತು ಅವರ ಸ್ಥಾನಕ್ಕೆ ಲ್ಯಾನ್ ಫೋನ್ ಅವರನ್ನು ನೇಮಿಸಿತು. ಲಿಯು ಯಾವುದೇ ವಿವರಣೆಯಿಲ್ಲದೆ ಬದಲಾಯಿಸಲ್ಪಟ್ಟ ಮೂರನೇ ಹಿರಿಯ ಕ್ಯಾಬಿನೆಟ್ ಸಚಿವರಾಗಿದ್ದಾರೆ.
ಲ್ಯಾನ್ ಸೆಪ್ಟೆಂಬರ್ ಅಂತ್ಯದಲ್ಲಿ ಕಮ್ಯುನಿಸ್ಟ್ ಪಕ್ಷದ ಹಣಕಾಸು ಸಚಿವಾಲಯದ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಮತ್ತೊಂದು ಅಧಿಕೃತ ಪ್ರಕಟಣೆಯ ಪ್ರಕಾರ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ವಾಂಗ್ ಝಿಗಾಂಗ್ ಅವರನ್ನು ತೆಗೆದುಹಾಕಿದ್ದು ಅವರ ಸ್ಥಾನಕ್ಕೆ ಯಿನ್ ಹೆಜುನ್ ಅವರನ್ನು ನೇಮಿಸಿತು. ವಾಂಗ್ ಅವರು ಜುಲೈ 2012 ರಿಂದ ವಿಜ್ಞಾನ ಮತ್ತು ತಂತ್ರಜ್ಞಾನದ ಉಪ ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಮಾರ್ಚ್ 2018 ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದರು. ಅವರನ್ನು ತೆಗೆದುಹಾಕಲು ಯಾವುದೇ ಕಾರಣಗಳನ್ನು ನೀಡಲಾಗಿಲ್ಲ.
65 ವರ್ಷದ ರಕ್ಷಣಾ ಸಚಿವ ಜನರಲ್ ಲಿ ಅವರನ್ನು ರಾಜ್ಯ ಕೌನ್ಸಿಲರ್ ಮತ್ತು ರಾಷ್ಟ್ರೀಯ ರಕ್ಷಣಾ ಸಚಿವ ಸ್ಥಾನದಿಂದ ತೆಗೆದುಹಾಕಲಾಗಿದೆ ಮತ್ತು ಕ್ವಿನ್ ಗ್ಯಾಂಗ್ ಅವರನ್ನು ರಾಜ್ಯ ಕೌನ್ಸಿಲರ್ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ನ ಸ್ಥಾಯಿ ಸಮಿತಿಯು ಮಂಗಳವಾರ ಅಂಗೀಕರಿಸಿದ ನಿರ್ಧಾರದ ಪ್ರಕಾರ ಅಧಿಕೃತ ಮಾಧ್ಯಮದಲ್ಲಿ ವರದಿಯಾಗಿದೆ. ಲಿ ಅವರ ಉತ್ತರಾಧಿಕಾರಿಯನ್ನು ಇಲ್ಲಿಯವರೆಗೆ ಘೋಷಿಸಲಾಗಿಲ್ಲ.
NPC ಜುಲೈನಲ್ಲಿ ಕ್ವಿನ್ ಅವರನ್ನು ವಜಾಗೊಳಿಸಿತು ಮತ್ತು ಪ್ರಸ್ತುತ ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಬ್ಯೂರೋ ಸದಸ್ಯರಾಗಿರುವ ವಾಂಗ್ ಯಿ ಅವರನ್ನು ವಿದೇಶಾಂಗ ಸಚಿವರಾಗಿ ಮರು-ನೇಮಕಗೊಳಿಸಿತು.
ಗಮನಾರ್ಹವಾಗಿ, ಅವರಿಬ್ಬರೂ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ನಿಕಟ ವಿಶ್ವಾಸಿಗಳಾಗಿದ್ದರು, ಅವರು ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯಗಳಲ್ಲಿ ಹಲವಾರು ಹಿರಿಯರನ್ನು ಗಮನದಲ್ಲಿಟ್ಟುಕೊಂಡೇ ಉನ್ನತ ಹುದ್ದೆಗಳಿಗೆ ಅವರನ್ನು ಆಯ್ಕೆ ಮಾಡಿದ್ದರು. ಚೀನೀ ಮಿಲಿಟರಿಯ ಪ್ರಾದೇಶಿಕ ಭದ್ರತಾ ವೇದಿಕೆಗಾಗಿ ಅಮೆರಿಕ ಮಿಲಿಟರಿ ನಿಯೋಗ ಬೀಜಿಂಗ್ಗೆ ಆಗಮಿಸುವ ದಿನಗಳ ಮೊದಲು ಲಿ ಅವರನ್ನು ಔಪಚಾರಿಕವಾಗಿ ತೆಗೆದುಹಾಕಲಾಗಿದೆ. , ಇದು ಎರಡು ಕಡೆಯ ನಡುವಿನ ದೀರ್ಘಾವಧಿಯ ಉನ್ನತ ಮಟ್ಟದ ಮಿಲಿಟರಿ ಮಾತುಕತೆಗೆ ಅನುವಾಗಿದೆ ಎನ್ನಲಾಗಿದೆ. ಚೀನೀ ಏಕ-ಪಕ್ಷ ವ್ಯವಸ್ಥೆಯಲ್ಲಿ, ಮಂತ್ರಿಗಳು ನಿರ್ಧಾರ ತೆಗೆದುಕೊಳ್ಳುವವರಿಗಿಂತ ಹೆಚ್ಚು ನೀತಿ ಜಾರಿಗೊಳಿಸುವ ಕಾರ್ಯ ಮಾಡುತ್ತಾರೆ . ಆದರೆ ಲಿ ಮತ್ತು ಕಿನ್ ಇಬ್ಬರೂ ರಾಜ್ಯ ಕೌನ್ಸಿಲರ್ಗಳಾಗಿದ್ದರು – ಚೀನಾದ ಕ್ಯಾಬಿನೆಟ್ನ ಸ್ಟೇಟ್ ಕೌನ್ಸಿಲ್ನಲ್ಲಿ ಹಿರಿಯ ಸ್ಥಾನ ಹೊಂದಿದ್ದರು. ಲಿ ಅವರು ಚೀನಾ ಸೇನೆಯ ಸಾರ್ವಜನಿಕ ಮುಖವಾಗಿದ್ದರು ಮತ್ತು ಕ್ಸಿ ನೇತೃತ್ವದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಯ ಒಟ್ಟಾರೆ ಹೈಕಮಾಂಡ್ – ಸೆಂಟ್ರಲ್ ಮಿಲಿಟರಿ ಕಮಿಷನ್ (CMC) ಸದಸ್ಯರಾಗಿದ್ದರು. ಕಿನ್, ಲಿ ಮತ್ತು ಲಿಯು ಅವರನ್ನು ತೆಗೆದುಹಾಕಲು ಕಾರಣಗಳನ್ನು ನೀಡಿಲ್ಲ.
ಹಾಂಗ್ ಕಾಂಗ್ ಮೂಲದ ಚೀನೀ ಟೆಲಿವಿಷನ್ ಪತ್ರಕರ್ತರೊಂದಿಗಿನ ಸಂಬಂಧದಿಂದಾಗಿ ಕಿನ್ ಅವರನ್ನು ವಜಾಗೊಳಿಸಲಾಗಿದೆ ಎಂದು ವ್ಯಾಪಕವಾಗಿ ನಂಬಲಾಗಿತ್ತು. ಲಿ, ಚೀನಾದ ಏರೋಸ್ಪೇಸ್ ಇಂಜಿನಿಯರ್ ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿಯ ಜನರಲ್ ಅವರು ಚೀನಾದ ಪ್ರಬಲ ಕ್ಷಿಪಣಿ ಪಡೆಯ ಮುಖ್ಯಸ್ಥರಾಗಿದ್ದರು, ಇದನ್ನು ಅಧಿಕೃತವಾಗಿ ‘ರಾಕೆಟ್ ಫೋರ್ಸ್’ ಎಂದು ಕರೆಯಲಾಯಿತು. ಲಿ ಅವರನ್ನು ವಜಾ ಮಾಡಿರುವುದು PLA ರಾಕೆಟ್ ಫೋರ್ಸ್ನಲ್ಲಿ ಕಂಪನ ಉಂಟು ಮಾಡಿದ್ದು ಇದರಲ್ಲಿ ಅದರ ಕಮಾಂಡರ್ ಲಿ ಯುಚಾವೊ ಮತ್ತು ರಾಜಕೀಯ ಕಮಿಷನರ್ ಕ್ಸು ಜೊಂಗ್ಬೊ ಇಬ್ಬರನ್ನೂ ಯಾವುದೇ ಅಧಿಕೃತ ವಿವರಣೆಯಿಲ್ಲದೆ ಬದಲಾಯಿಸಲಾಯಿತು.
ಅಮೇರಿಕಾವು ರಷ್ಯಾ ಮೇಲೆ ಹೇರಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿ ಚೀನಾದ ಸೇನೆಗೆ (ಇಡಿಡಿ) ರಷ್ಯಾದ ಸುಖೋಯ್ 35 ಫೈಟರ್ ಜೆಟ್ಗಳು ಮತ್ತು ಎಸ್ -400 ಕ್ಷಿಪಣಿಗಳನ್ನು ಖರೀದಿಸಲು 2018 ರಲ್ಲಿ ಅನುಮತಿ ನೀಡಿದ್ದರೂ ಸಹ ಲಿ ಅವರನ್ನು ಕಮ್ಯನಿಸ್ಟ್ ಪಕ್ಷವು ರಕ್ಷಣಾ ಸಚಿವರನ್ನಾಗಿ ನೇಮಿಸಿತ್ತು. .