ಮಕ್ಕಳು ಚಿಕ್ಕವರಿಂದ ದೊಡ್ಡವರಾಗುವ ವರೆಗೂ ಒಂದೊಂದೇ ವಿಚಾರಗಳನ್ನು ನಿಧಾನವಾಗಿ ಕಲಿಯುತ್ತಾರೆ. ಮಕ್ಕಳಲ್ಲಿ ಕೆಲವು ವಿಷಯಗಳನ್ನು ಚಿಕ್ಕ ವಯಸ್ಸಿನಲ್ಲೇ ಕಲಿಸಬೇಕು, ಯಾಕೆಂದರೆ ಅವರು ಅವರ ಜೀವನವನ್ನು ಯಾರ ಮೇಲೇಯೂ ಅವಲಂಬಿತವಾಗದೆ ಮುನ್ನಡಸಲು ಸಹಾಯವಾಗುತ್ತದೆ.ಸುಮಾರು 14 ನೇ ವಯಸ್ಸಿಗೆ ಕೆಲವೆಲ್ಲ ಸೆಲ್ಫ್ ಹೆಲ್ಪ್ ಸ್ಕಿಲ್ಸ್ ಅವರಿಗೆ ಗೊತ್ತಿರಬೇಕು.
1. ತಮಗಾಗಿ ಅಡುಗೆ ಮಾಡೋದಕ್ಕೆ ಕಲಿತರಬೇಕು
ಮಕ್ಕಳನ್ನು ಅಡುಗೆ ಮನೆಗೆ ಹೆಚ್ಚಿನ ಪೋಷಕರು ಸೇರಿಸುವುದಿಲ್ಲ, ಎಲ್ಲಿ ಮಕ್ಕಳಿಗೆ ಚಾಕು ತಾಗುತ್ತದೆಯೋ, ಅಥವಾ ಗ್ಯಾಸ್ ಆನ್ ಮಾಡಿ ಬರುತ್ತಾರೋ ಎಂಬ ಯೋಚನೆಗಳಿಂದ ಕೆಲವೊಂದು ಮನೆಯಲ್ಲಿ ತಿನ್ನುವ ತಟ್ಟೆಯನ್ನು ಅವರೇ ತೊಳಿಯುತ್ತಾರೆ. ಆದರೆ ಚಿಕ್ಕ ವಯಸ್ಸಿನಲ್ಲಿ ಅದ್ರಲ್ಲು ಮುಖ್ಯವಾಗಿ ಚಿಕ್ಕ- ಪುಟ್ಟ ಅಡುಗೆ ಮಾಡೋದಕ್ಕೆ ಗೊತ್ತಿರಬೇಕು ಯಾಕಂದ್ರೆ ಮನೆಯಲ್ಲಿ ಯಾರೂ ಇಲ್ಲದಾಗ ಅವರು ಏನಾದರೂ ಆಹಾರವನ್ನು ತಯಾರಿಸಿ ತಿನ್ನಬಹುದು. ತಮ್ಮ ಒಡಹುಟ್ಟಿದವರಿಗೂ ಹಸಿವಾದಾಗ ಮನೆಯಲ್ಲಿ ತಿನ್ನೋದಕ್ಕೆ ಏನೂ ಇಲ್ಲದಾಗ ಆಹಾರ ತಯಾರಿಸಿ ಕೊಡಬಹುದು.ಬೆಂಕಿ ಉಪಯೋಗಿಸದೆ ಕೂಡಾ ಅಡುಗೆ ಮಾಡುವುದನ್ನು ಕಲಿಯಬಹುದು.
2. ಅವರ ಬಟ್ಟೆ ಅವರೇ ಒಗೆದುಕೊಳ್ಳುವುದು
ಹನ್ನೆರಡನೇ ವಯಸ್ಸಿನಲ್ಲಿ ಮಕ್ಕಳ ಸಾಕಷ್ಟು ಪ್ರಬುದ್ಧರಾಗಿರುತ್ತಾರೆ. ಈ ವೇಳೆ ನಿಮ್ಮ ಮಕ್ಕಳನ್ನು ಅತಿಯಾಗಿ ಕಾಳಜಿ ಮಾಡುವ ಅಗತ್ಯ ಇರುವುದಿಲ್ಲ. ಮಕ್ಕಳು ಖಂಡಿತ ನಿಮಗೆ ಚಿಕ್ಕ- ಪುಟ್ಟ ಕೆಲಸಗಳಲ್ಲಿ ಸಹಾಯ ಮಾಡಬಹುದು. ಅದ್ರಲ್ಲಿ ಮುಖ್ಯವಾಗಿ ಬಟ್ಟೆ ಒಗೆಯುವಾಗ ಮಕ್ಕಳಿಗೆ ಸಹಾಯ ಮಾಡಬಹುದು. ಬಟ್ಟೆ ಒಣಗಿಸುವ ಸಂದರ್ಭದಲ್ಲಿ ಅಥವಾ ಬಟ್ಟೆಯನ್ನು ವಾಷಿಂಗ್ ಮೆಷಿನ್ಗೆ ಹಾಕಲು ಅವರ ಸಹಾಯ ಪಡೆದುಕೊಳ್ಳಿ.ಅವರ ಬಟ್ಟೆಯನ್ನು ಅವರೇ ಒಗೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಲಿ.
3. ಒಂಟಿಯಾಗಿ ಪ್ರಯಾಣ ಮಾಡೋದಕ್ಕೆ ಅಭ್ಯಾಸ ಮಾಡಿಸಿ
ಹನ್ನೆರಡನೇ ವಯಸ್ಸಿಗೆ ಮಕ್ಕಳು ಸ್ವಂತವಾಗಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡೋದಕ್ಕೆ ಕಲಿತಿರಬೇಕು. ಯಾಕಂದ್ರೆ ಒಂದು ವೇಳೆ ಯಾವತ್ತಾದರೂ ಬಸ್ ಅಥವಾ ಟ್ರೈನ್ ಮಿಸ್ ಆದರೆ ಒಬ್ಬರೇ ಮನೆಗೆ ತಲುಪುವಷ್ಟು ಸಾಮರ್ಥ್ಯ ಅವರಿಗೆ ಇರಬೇಕು. ಹೀಗಾಗಿ ಈ ವಯಸ್ಸಿನಲ್ಲೇ ಅವರಿಗೆ ದೈರ್ಯ ತುಂಬಿ ಸ್ವತತ್ರವಾಗಿರೋದನ್ನು ಅಭ್ಯಾಸ ಮಾಡಿಸಿ.
4. ಶಾಪಿಂಗ್ಗೆ ಕರೆದುಕೊಂಡು ಹೋಗಿ
ಪೋಷಕರು ಶಾಪಿಂಗ್ ಹೋಗುವಾಗ ಮಕ್ಕಳನ್ನು ಕರೆದುಕೊಂಡು ಹೋಗಿ. ಆಗ ಮಕ್ಕಳು ಮನೆಗೆ ಬೇಕಾಗಿರುವ ಸಾಮಾಗ್ರಿಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಒಂದು ಸಾರಿ ಅವರು ಕಲಿತುಕೊಂಡರೆ ಮುಂದಿನ ದಿನಗಳಲ್ಲಿ ಅವರೇ ಖುದ್ದಾಗಿ ಹೋಗಿ ಶಾಪಿಂಗ್ ಮಾಡಿಕೊಂಡು ಬರಬಹುದು. ಈ ಮೂಲಕ ನಿಮ್ಮ ಮಗು ಜವಾಬ್ದಾರಿಯನ್ನು ಕಲಿತುಕೊಳ್ಳುತ್ತದೆ.
5. ಹಣದ ಲೆಕ್ಕಾಚಾರ ತಿಳಿಸಿ
ಮಕ್ಕಳು ಹಣದ ಅಗತ್ಯತೆ ಬಗ್ಗೆ ತಿಳಿಸಿ, ಅವರ ಹೆಸರಿನಲ್ಲಿ ಹಣದ ಬ್ಯಾಂಕ್ ಖಾತೆ ತೆರೆದು, ಅವರ ಪಾಕೆಟ್ ಮನಿ, ಇನ್ನಿತರ ಹಣದ ಲೆಕ್ಕಾಚಾರದ ಬಗ್ಗೆ ಅವರೇ ನೋಡಿಕೊಳ್ಳುವಂತೆ ಗಮನಹರಿಸಿ.
6. ಉತ್ತಮ ನಡವಳಿಕೆ ಬೆಳೆಸಿ
ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಏನು ಕಲಿಯುತ್ತಾರೋ ದೊಡ್ಡದಾದ ಮೇಲೂ ಅದೇ ನಡವಳಿಕೆಯನ್ನು ರೂಢಿಸಿಕೊಳ್ಳುತ್ತಾರೆ. ಮಕ್ಕಳಿಗೆ ಚಿಕ್ಕಂದಿನಲ್ಲೇ ಯಾರಾದರೂ ಸಹಾಯ ಮಾಡಿದರೆ ಥ್ಯಾಂಕ್ಸ್ ಹೇಳೋದನ್ನು ಅಭ್ಯಾಸ ಮಾಡಿಸಿ. ತಪ್ಪಾದಾಗ ಕ್ಷಮೆ ಕೇಳುವ ಗುಣ ಇರಲಿ, ದೊಡ್ಡವರಿಗೆ ಎದುರು ಮಾತನಾಡದಂತೆ ನೋಡಿಕೊಳ್ಳಿ. ಸಮಯ ಪ್ರಜ್ಞೆ ಇರಲಿ, ಶಿಸ್ತಿನ ಜೀವನವನ್ನು ರೂಢಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಸಿ.