ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಸಿ-ಸೆಕ್ಷನ್ ಹೆರಿಗೆಗಳ ಮೂಲಕ ಆದ ಜನನಗಳು ಶೇ 4.3ರಷ್ಟು ಹೆಚ್ಚಾಗಿದೆ. ಅಂದರೆ ಈ ಮೊದಲು ಶೇ 17.2 ರಷ್ಟಿದ್ದ ಹೆರಿಗೆಗಳು ಶೇ 21.5ರಷ್ಟು ಹೆಚ್ಚಾಗಿದೆ. ಖಾಸಗಿ ಆರೋಗ್ಯ ಕೇಂದ್ರಗಳಲ್ಲೂ ಸಿಸೇರಿಯನ್ ಹೆರಿಗೆಗಳು ಶೇ 40.9 ರಿಂದ ಶೇ 47.4 ಕ್ಕೆ ಏರಿಕೆಯಾಗಿದೆ
ಸಿಸೇರಿಯನ್ ಹೆರಿಗೆ ಹೆಚ್ಚಳ ಆಗಲು ಕಾರಣ
ಹೆರಿಗೆ ಕೋಣೆಯಲ್ಲಿ ನಿರಂತರ ನಿಗಾ ವಹಿಸುವುದರಿಂದ ಸಿಸೇರಿಯನ್ ಸಾಧ್ಯತೆ ಹೆಚ್ಚುತ್ತದೆ.
ನೋವು ನಿವಾರಣೆ ಮತ್ತು ಆ್ಯಂಟಿಬಯೋಟಿಕ್ಸ್ ವಿಚಾರದಲ್ಲಿ ಸಿ-ಸೆಕ್ಷನ್ ಸುರಕ್ಷಿತ ಆಯ್ಕೆಯಾಗಿದೆ ಅನಿಸುತ್ತಿರುವುದು.
ಮಹಿಳೆಯರು ತಡವಾಗಿ ಮದುವೆಯಾಗುವುದು ಅಥವಾ ಗರ್ಭಧಾರಣೆಯನ್ನು ವಿಳಂಬ ಮಾಡುವುದರಿಂದ 35 ವರ್ಷಗಳನ್ನು ತಲುಪಿದ ನಂತರ ಇದು ಸಿಸೇರಿಯನ್ ಹೆರಿಗೆಗೆ ಕಾರಣವಾಗುತ್ತದೆ.
ಕೆಲವು ಮಹಿಳೆಯರು ಹೆರಿಗೆ ನೋವಿಗೆ ಭಯಪಟ್ಟು ಸಿ- ಸೆಕ್ಷನ್ ಆಯ್ಕೆ ಮಾಡಿಕೊಳ್ಳುಲು ಮುಂದಾಗುತ್ತಾರೆ.
ಆದರೆ ನಾರ್ಮಲ್ ಡೆಲಿವರಿ ತಾಯಿ ಮತ್ತು ಮಗುವಿಗೆ ಎದುರಾಗುವ ಸಾಕಷ್ಟು ಅಪಾಯಗಳು ಮತ್ತು ತೊಡಕುಗಳನ್ನು ಕಡಿಮೆ ಮಾಡುತ್ತದೆ. ಆದರೆ ಜನರಿಗೆ ಅದರ ಅರಿವು ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ.
ಹೀಗಾಗಿ ನಾರ್ಮಲ್ ಡೆಲಿವರಿ ಸಾಧ್ಯತೆಯನ್ನು ಹೆಚ್ಚಿಸುವ ವಿಧಾನಗಳು ಯಾವುವು ಎಂಬ ಬಗ್ಗೆ ವೈದ್ಯರು ಹೀಗೆ ವಿವರಿಸುತ್ತಾರೆ ಎಂದರೆ ನಾರ್ಮಲ್ ಡೆಲಿವರಿಯಾಗಲು ಎನರ್ಜಿ ಮತ್ತು ಸ್ಟೆಮಿನಾ ತುಂಬಾ ಮುಖ್ಯ. ಹೀಗಾಗಿ, ಗರ್ಭಧಾರಣೆಯ ಒಂಬತ್ತು ತಿಂಗಳನ್ನು ನಾರ್ಮಲ್ ಹೆರಿಗೆಯ ಮ್ಯಾರಥಾನ್ಗೆ ಪೂರ್ವಸಿದ್ಧತಾ ಹಂತವಾಗಿ ಪರಿಗಣಿಸಿ. ಪ್ರತಿದಿನ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ಹೆರಿಗೆಯ ಸಮಯದಲ್ಲಿ ಮಗುವನ್ನು ಹೊರಗೆ ತಳ್ಳಲು ಕೆಲವು ಸ್ಟ್ರೆಚಿಂಗ್ ಕೂಡ ಅಷ್ಟೇ ಮುಖ್ಯ. ಆದರೆ, ವೈದ್ಯಕೀಯ ಸಮಸ್ಯೆಗಳು ಇದ್ದ ಮಹಿಳೆಯರಿಗೆ ಮಾತ್ರ ವ್ಯಾಯಾಮ ಮಾಡಲು ಅನುಮತಿ ನೀಡುವುದಿಲ್ಲ. ಆದ್ದರಿಂದ, ವ್ಯಾಯಾಮ ಮಾಡುವ ಮೊದಲು ನಿಮ್ಮ ಪ್ರಸೂತಿ ವೈದ್ಯರ ಸಲಹೆ ಪಡೆಯಬೇಕು.
ಪ್ರಸವಪೂರ್ವ ಶಿಕ್ಷಣ ತರಗತಿಗಳು ಪ್ರಸವ ವೇದನೆ ಮತ್ತು ಜನನ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದರೆ ಇದು ಹೆರಿಗೆ ಸಮಯದಲ್ಲಿ ನೆರವಾಗುತ್ತದೆ.
ಆರೋಗ್ಯವಂತ ತಾಯಿ ಎಂದರೆ ಆರೋಗ್ಯವಂತ ಮಗು. ಸಾಕಷ್ಟು ಪ್ರೋಟೀನ್ ಮತ್ತು ಶಕ್ತಿಯನ್ನು ಒದಗಿಸುವ ಆಹಾರವನ್ನು ಸೇವಿಸುವ ಮೂಲಕ ಆಕೆ ತನ್ನ ಗರ್ಭಾಶಯವನ್ನು ಬಲಿಷ್ಠವಾಗಿ ಮತ್ತು ಹೆರಿಗೆಗೆ ಸಿದ್ಧವಾಗಿರಿಸಿಕೊಳ್ಳಬೇಕು. ಆ ಒಂಬತ್ತು ತಿಂಗಳಲ್ಲಿ ಮಗುವಿಗೆ ಮತ್ತು ತಾಯಿಗೆ ಹೆಚ್ಚುವರಿ ಕಾಳಜಿ ವಹಿಸಬೇಕು ಎಂಬುದನ್ನು ಅರಿತು, ಗರ್ಭಾವಸ್ಥೆಯಲ್ಲಿ ಅಗತ್ಯವಾದ ಪೋಷಣೆ ಮಾಡಿಕೊಳ್ಳುವುದನ್ನು ಕಲಿಯಬೇಕು. ಆಗ ಮಹಿಳೆಯರು ಸುಜರಂಗ್ ಬಿಟ್ಟು ನಾರ್ಮಲ್ ಹೆರಿಗೆಯನ್ನು ಮಾಡಿಕೊಳ್ಳಬಹುದು.