ಈ ಬಾರಿ ಮೇ 23 ರಿಂದ ಮೇ 28ರ ವರೆಗೆ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು ಚೆನ್ನೈ ಮತ್ತು ಅಹಮದಾಬಾದ್ನಲ್ಲಿ ನಡೆಯಲಿವೆ. ಕ್ವಾಲಿಫೈಯರ್ ಪಂದ್ಯ ಮೇ 23 ರಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಐಪಿಎಲ್ 2023 ಈ ಟೂರ್ನಿಯ ಮೊದಲ ಹಂತದ ಲೀಗ್ ಪಂದ್ಯಗಳು ಈಗಾಗಲೇ ಮುಗಿದಿದ್ದು, 4 ಬಲಿಷ್ಠ ತಂಡಗಳು ಪ್ಲೇಆಫ್ಗೆ ಲಗ್ಗೆ ಇಟ್ಟಿದೆ. ಇನ್ನು, ಈ ಬಾರಿಯ ಮೇ 23 ರಿಂದ ಮೇ 28ರ ವರೆಗೆ ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು ಚೆನ್ನೈ ಮತ್ತು ಅಹಮದಾಬಾದ್ನಲ್ಲಿ ಆಡಲಿವೆ. ಕ್ವಾಲಿಫೈಯರ್ ಪಂದ್ಯ ಮೇ 23 ರಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ ನಂತರ ಎಲಿಮಿನೇಟರ್ ಪಂದ್ಯ ಮೇ 24 ರಂದು ನಡೆಯಲಿದೆ. ಉಳಿದ ವೇಳಾಪಟ್ಟಿ ಈ ಕೆಳಕಂಡಂತಿದೆ.
ಮೇ 23 – ಕ್ವಾಲಿಫೈಯರ್ 1 ಪಂದ್ಯ – ಚೆನ್ನೈ, ಮೇ 24 – ಎಲಿಮಿನೇಟರ್ ಪಂದ್ಯ – ಚೆನ್ನೈ
ಮೇ 26 – ಕ್ವಾಲಿಫೈಯರ್ 2 ಪಂದ್ಯ – ಅಹಮದಾಬಾದ್
ಮೇ 28 – ಫೈನಲ್ -ಕ್ವಾಲಿಫೈಯರ್ 1 ರ ವಿಜೇತರು vs ಕ್ವಾಲಿಫೈಯರ್ 2 ರ ವಿಜೇತರ ನಡುವೆ- ಅಹಮದಾಬಾದ್ನಲ್ಲಿ ನಡೆಯಲಿದೆ.
ಸದ್ಯ ಪ್ಲೇಆಫ್ ತಂಡಗಳ ಬಗ್ಗೆ ಹೇಳುವುದಾದರೆ ಮೊದಲಿಗೆ ಅಗ್ರಸ್ಥಾನದಲ್ಲಿ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಿವೆ. ಈ ಎರಡು ತಂಡಗಳು ನೇರವಾಗಿ ಫೈನಲ್ಗಾಗಿ ಸೆಣಸಾಡಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮೇ 23 ರಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ.
ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೆ ತಲುಪಿದರೆ, ಸೋತ ತಂಡಕ್ಕೆ ಮೇ 26 – ಕ್ವಾಲಿಫೈಯರ್ 2ನೇ ಪಂದ್ಯದಲ್ಲಿ ಚಾನ್ಸ್ ಇದೆ.
ಇನ್ನು, ಐಪಿಎಲ್ ಅಂಕಪಟ್ಟಿಯಲ್ಲಿ 17 ಅಂಕದೊಂದಿಗೆ 3ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು 16 ಅಂಕ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಲಕ್ನೋ ಮತ್ತು ಮುಂಬೈ ನಡುವಿನ ಪಂದ್ಯವು ಮೇ 24ರಂದು ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಸಂಜೆ 7:30ಕ್ಕೆ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಕ್ವಾಲಿಫೈಯರ್ 2ರಲ್ಲಿ ಮತ್ತೆ ಮೊದಲ ಪಂದ್ಯದಲ್ಲಿ ಸೋತ ತಂಡದೊಂದಿಗೆ ಸೆಣಸಾಡುವ ಕಾತುರದಲ್ಲಿದೆ.