ದೊಡ್ಡಕ್ಕನ ಚಾಳಿ ಮನೆಮಂದಿಗೆಲ್ಲ ಅಂತ ಕೇಳಿದ್ದೀವಿ. ಇದು ಮನೆಯಲ್ಲಿನ ಹಿರಿಯರಿಗೂ ಅನ್ವಯಿಸುತ್ತದೆ. ಮಕ್ಕಳೆದುರು ನಾವು ಹೇಗೆ ನಡೆದುಕೊಳ್ಳಬೇಕು ಅಂತ ನಾವು ತಿಳಿದುಕೊಳ್ಳಬೇಕು ಅಲ್ವಾ.
ಹಾಗಿದ್ರೆ ಮನೆಯಲ್ಲಿ ಮಕ್ಕಳೆದುರು ಈ ತಪ್ಪುಗಳನ್ನು ಮಾಡದಿರಿ.
• ಮಕ್ಕಳೆದುರು ಜಗಳ ಮಾಡೋದು, ಕೆಟ್ಟ ಪದ ಬಳಸುವುದು.
• ಇಬ್ಬರು ಮಕ್ಕಳಿದ್ದರೆ ಒಂದೇ ಮಗುವಿನ ಪರವಾಗಿ ಮಾತನಾಡೋದು.
• ಒಂದೊಂದು ಮಗುವಿಗೆ ಒಂದೊಂದು ರೂಲ್ಸ್ ಮಾಡೋದು.
• ಗೌರವ ಕೊಡೋದನ್ನ ಕಲಿಸದೇ ಇರೋದು.
• ಹಿರಿಯರು ಮಾತನಾಡುವುದನ್ನು ನಿರ್ಲಕ್ಷಿಸುವುದು.
• ಮಕ್ಕಳಿಗೆ ತಾವು ಸ್ವಾತಂತ್ರ್ಯವಾಗಿ ಕೆಲಸ ಮಾಡುವುದಕ್ಕೆ ಪ್ರೋತ್ಸಾಹಿಸದೆ ಇರುವುದು.
• ಹೆಣ್ಣುಮಕ್ಕಳಿಗೆ ಒಂದು, ಗಂಡು ಮಗನಿಗೆ ಒಂದು ರೂಲ್ಸ್ ಮಾಡೋದು.
• ಮಕ್ಕಳಿಗೆ ಹೊಡೆಯುವುದು, ಬೈಯುವುದು.
• ಮಕ್ಕಳೆದುರು ಹೆಚ್ಚು ಮೊಬೈಲ್ ನೋಡೋದು.
• ಮಕ್ಕಳ ಭಾವನೆಗಳಿಗೆ ಬೆಲೆ ಕೊಡದೆ ಇರುವುದು.