ಮಂಗಳೂರು: ದೇವಸ್ಥಾನದ ಬಳಿ ಪ್ರಚಾರ ನಡೆಸುವ ವಿಚಾರವಾಗಿ ಆರಂಭವಾದ ವಾಗ್ವಾದ.
ನಗರದ ಉರ್ವ ಚಿಲಿಂಬಿ ಸಾಯಿ ಬಾಬಾ ಮಂದಿರದ ಬಳಿ ನಡೆದ ಘಟನೆ. ರಾಮನವಮಿ ಉತ್ಸವ ನಡೆಯುತ್ತಿದ್ದ ಮಂದಿರದ ಹೊರ ಭಾಗದ ಮುಖ್ಯ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರ ಪ್ರಚಾರ.
ಮಂದಿರದ ಬಳಿ ಪ್ರಚಾರ ನಡೆಸಬಾರದು ಎಂದು ಕೈ ಕಾರ್ಯಕರ್ತರ ಆಕ್ಷೇಪ. ಈ ಹೊತ್ತಲ್ಲೇ ವಾಗ್ವಾದ ತಾರಕಕ್ಕೇರಿ ನೂಕು ನುಗ್ಗಲು ನಡೆಯಿತು. ಸ್ಥಳಕ್ಕೆ ಶಾಸಕ ವೇದಾವ್ಯಾಸ್ ಕಾಮತ್,ಮಿಥುನ್ ರೈ ಭೇಟಿ.
ಗುಂಪು ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದ ಪೊಲೀಸರು.