ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅತ್ಯಂತ ನಿರ್ಣಾಯಕ ಪಂದ್ಯವಾಗಿದೆ. ಈ ಪಂದ್ಯವನ್ನು ಗೆದ್ದು ಪ್ಲೇಆಫ್ಗೇರುವ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸುವ ಅದ್ಭುತ ಅವಕಾಶ ಆರ್ಸಿಬಿ ಗೆ ಇದ್ದು ಈ ಅವಕಾಶವನ್ನು ಆರ್ಸಿಬಿ ಉತ್ತಮವಾಗಿ ಬಳಸಿಕೊಂಡರೆ ಪ್ಲೇಆಫ್ ಸ್ಪರ್ಧೆಯಲ್ಲಿ ಆರ್ಸಿಬಿ ಮುನ್ನಡೆ ಸಾದಿಸಲಿಕ್ಕೆ ಒಂದು ಉತ್ತಮ ಅವಕಾಶವಿದೆ.
ಸದ್ಯ ಅಗ್ರ ನಾಲ್ಕು ಸ್ಥಾದಲ್ಲಿರುವ ಎಲ್ಲಾ ತಂಡಗಳು ಕೂಡ 13 ಪಂದ್ಯಗಳನ್ನು ಆಡಿ ಮುಗಿಸಿದೆ. ಆ ಪೈಕಿ ಗುಜರಾತ್ ಟೈಟನ್ಸ್ ತಂಡ ಅಧಿಕೃತವಾಗಿ ಈಗಾಗಲೇ ಪ್ಲೇಆಫ್ಗೆ ಪ್ರವೇಶಿಸಿದೆ. ಉಳಿದ ಮೂರು ತಂಡಗಳು ಆಡಿರುವ 13ಪಂದ್ಯಗಳಲ್ಲಿ ತಲಾ 7 ಪಂದ್ಯಗಳನ್ನು ಗೆದ್ದುಕೊಂಡಿದೆ. ಸಿಎಸ್ಕೆ ಹಾಗೂ ಎಲ್ಎಸ್ಜಿ ತಂಡಗಳ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿರುವ ಕಾರಣ ತಲಾ 15 ಅಂಕಗಳನ್ನು ಪಡೆದುಕೊಂಡಿದೆ. ಇನ್ನು ಮುಂಬೈ ಇಂಡಿಯನ್ಸ್ ತಂಡ 14 ಅಂಕವನ್ನು ಖಾತೆಯಲ್ಲಿ ಉಳಿಸಿಕೊಂಡಿದೆ.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯವನ್ನು ಆರ್ಸಿಬಿ ಗದ್ದುಕೊಂಡರೆ ಮುಂಬೈ ಇಂಡಿಯನ್ಸ್ ಹೊಂದಿರುವ 14 ಅಂಕಗಳಿಗೆ ಆರ್ಸಿಬಿ ಕೂಡ ಸಮವಾಗಲಿದೆ. ಆದರೆ ಆರ್ಸಿಬಿ ನೆಟ್ರನ್ರೇಟ್ ಉತ್ತಮವಾಗಿರುವ ಕಾರಣ ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿದೆ. ಈ ಮೂಲಕ ಆರ್ಸಿಬಿ ಪ್ಲೇಆಫ್ ಸ್ಪರ್ಧೆಯಲ್ಲಿ ಒಂದು ಹಂತದ ಮೇಲುಗೈ ಸಾಧಿಸುವ ಅವಕಾಶವಿದೆ.
ಇವತ್ತಿನ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಪ್ಲೇ ಆಫ್ ಗೇರಲು 57.4% ಅವಕಾಶ ಇದ್ದು ಅದೇ ಸೋತರೆ 7% ಮಾತ್ರ ಅವಕಾಶ.