ಮಂಡ್ಯ: ದಸರಾ ಅಂಬಾರಿ ಹೊರುತ್ತಿದ್ದ ಮೃತ ಬಲರಾಮ ಆನೆಗೆ ಶ್ರೀರಂಗಪಟ್ಟಣದಲ್ಲಿ ಮಂಡ್ಯ ರಕ್ಷಣಾ ವೇದಿಕೆಯಡಿ ವಿನೂತನ ರೀತಿಯಲ್ಲಿ ಶ್ರದ್ದಾಂಜಲಿ ನಡೆಸಲಾಗಿದೆ.
ಮಂಡ್ಯ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ವಿನೂತನ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗತ್ತು. ಶ್ರೀರಂಗಪಟ್ಟಣದ ಮೈಸೂರು ಬೆಂಗಳೂರು ಹೆದ್ದಾರಿಯ ಕುವೆಂಪು ವೃತ್ತದಲ್ಲಿ ವಿಶೇಷವಾಗಿ ಬಲರಾಮ ಆನೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಿ ಜೈಕಾರ ಹಾಕಿ ಗೌರವ ಸೂಚಿಸಲಾಗಿದೆ.
ದಸರಾ ಜಂಬೂಸವಾರಿಯಲ್ಲಿ ಬಲರಾಮ ಸತತವಾಗಿ 14 ವರ್ಷಗಳಿಂದ ಚಿನ್ನದ ಅಂಬಾರಿ ಹೊತ್ತು ಮೈಸೂರು ದಸಾರ ಗೆ ಮೆರಗು ತಂದಿತ್ತು. ಅನಾರೋಗ್ಯಕ್ಕೆ ಒಳಗಾಗಿದ್ದ ಬಲರಾಮನಿಗೆ ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಚಿಕಿತ್ಸೆ ನೀಡಲಾಗಿತ್ತು.
ವರದಿಯ ಪ್ರಕಾರ ಬಲರಾಮನ ಬಾಯಿಯಲ್ಲಿ ಹುಣ್ಣುಗಳಾಗಿದ್ದು, ಆಹಾರ ಸೇವಿಸುತ್ತಿರಲಿಲ್ಲ. ನೀರನ್ನು ಸಹಾ ಕುಡಿಯಲು ಸಾಧ್ಯವಾಗದ ಕಾರಣ ಅಸ್ವಸ್ಥಗೊಂಡಿತ್ತು. ವೈದ್ಯರು ನೀಡುತ್ತಿದ್ಧ ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಕೊನೆಯುಸಿರೆಳೆದಿತ್ತು.ಆನೆಗೆ ಗಟ್ಟಿ ಆಹಾರ ಸೇವಿಸಲಾಗುತ್ತಿರಲಿಲ್ಲ. ಬಲರಾಮನಿಗೆ ರಾಗಿ ಗಂಜಿ, ರಾಗಿ ಹಿಟ್ಟು, ಬಾಳೆ ಹಣ್ಣು, ಕಲ್ಲಂಗಡಿ ಹಣ್ಣಿನಂತಹ ಮೆದು ಆಹಾರವನ್ನ ಮಾತ್ರ ನೀಡಲಾಗುತ್ತಿತ್ತು.