ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತೆ ತನ್ನ ಕಹಿ ಗುಣ ಲಕ್ಷಣದಿಂದಲೇ ಜಗತ್ಪ್ರಸಿದ್ಧಿ ಪಡೆದಿರುವ ಮುಳ್ಳು ಮೈ ಹೊಂದಿರುವ ತರಕಾರಿ ಈ ಹಾಗಲ ಕಾಯಿ. ಸಾಮಾನ್ಯವಾಗಿ ನಾವು ಹಣ ಖರ್ಚು ಮಾಡಿ ತೆಗೆದುಕೊಳ್ಳುವ ಆಂಗ್ಲ ಔಷಧಿಗಳು ತಿನ್ನಲು ಕಹಿಯೇ ಇರುತ್ತವೆ. ಮಧುಮೇಹಿಗಳಿಗೆ ಹಾಗಲಕಾಯಿ ನಿಜಕ್ಕೂ ದೇವರು ಕೊಟ್ಟ ವರವೇ ಹೌದು.
ಹಾಗಲಕಾಯಿ ರಸವು ಮಧುಮೇಹಕ್ಕೆ ಅತ್ಯುತ್ತಮ ನೈಸರ್ಗಿಕ ಮತ್ತು ಆಯುರ್ವೇದಿಕ ಔಷಧವಾಗಿದೆ. ಮತ್ತು ಇದರ ತಾಜಾ ರಸವನ್ನು ಬೆಳಿಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಮ್ಮ ದೇಹದ ಎಲ್ಲಾ ನರನಾಡಿಗಳಲ್ಲಿ ಸಂಚರಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇದ್ದಕ್ಕಿದಂತೆ ತೂಕ ಹೆಚ್ಚಾಗುವ, ಅಧಿಕ ರಕ್ತದ ಒತ್ತಡದಿಂದ ಬಳಲುವ, ಹೃದ್ರೋಗ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಮಧುಮೇಹ ಸಂಬಂಧಿತ ಆರೋಗ್ಯ ಸಮಸ್ಯೆಗಳ ಸಾಧ್ಯತೆ ಉಂಟಾಗುವುದನ್ನು ಕಡಿಮೆ ಮಾಡುತ್ತದೆ.
ಹಾಗಲಕಾಯಿ ರಸವು ತನ್ನಲ್ಲಿ ಫೋಲೇಟ್, ಜಿಂಕ್, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ‘ ಎ ‘ ಮತ್ತು ವಿಟಮಿನ್ ‘ ಸಿ ‘ ನಂತಹ ಹಲವಾರು ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದು ಆಹಾರದಲ್ಲಿ ನಾರಿನ ಅಂಶದ ಅತ್ಯುತ್ತಮ ಮೂಲ ಎಂದು ಗುರುತಿಸಿಕೊಂಡಿದೆ. ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಬೀಟಾ-ಕ್ಯಾರೋಟಿನ್ ಮಟ್ಟವನ್ನು ಇತರ ಯಾವುದೇ ತರಕಾರಿ ಮತ್ತು ಹಣ್ಣುಗಳಿಗಿಂತ ಎರಡು ಪಟ್ಟು ಹೆಚ್ಚಾಗಿ ಹೊಂದಿರುತ್ತದೆ .
ಹಾಗಲಕಾಯಿಯು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಾ, ಹಾಗಲಕಾಯಿಯ ಸೊಪ್ಪು, ಕಾಯಿ ಹೀಗೆ ಯಾವುದೇ ಭಾಗವನ್ನು ಔಷಧದ ರೂಪದಲ್ಲಿ ತೆಗೆದುಕೊಂಡರೂ ಉತ್ತಮ ಪರಿಣಾಮವನ್ನು ನೀಡುತ್ತದೆ. ಇದರ ಸೇವನೆಯಿಂದ ಮಧುಮೇಹ ಇರುವವರಲ್ಲಿ ಕರುಳಿನಿಂದ ಗ್ಲುಕೋಸ್ ಹಿರಿಕೆಯಾಗುವ ಅಂಶವನ್ನು ಕಡಿಮೆಗೊಳಿಸುವ ಜೊತೆಗೆ ಸ್ನಾಯುಗಳಲ್ಲಿ ಅವುಗಳ ಬಳಕೆಯನ್ನು ಹೆಚ್ಚಿನದಾಗಿ ಆಗುವಂತೆ ನೋಡಿಕೊಳ್ಳುತ್ತದೆ.
ಮಧುಮೇಹ ಇರುವವರು ಹಾಗಲಕಾಯಿ ರಸವನ್ನು ಪ್ರತಿ ದಿನ 50-100 ಮಿಲಿ ಕುಡಿಯುವುದು ಉತ್ತಮ.
ಹಾಗಲಕಾಯಿ ಜ್ಯೂಸು ಅನ್ನು ತಯಾರಿಸಲು ಬೇಕಾದ ಪದಾರ್ಥಗಳು: –
1 – 2 ತಾಜಾ ಕಹಿ ಸೋರೆಕಾಯಿ ಅಥವಾ ತಾಜಾ ಹಾಗಲಕಾಯಿ.
1/2 ನಿಂಬೆ ಹಣ್ಣಿನ ಹೋಳು.
1/4 ಟೀ ಚಮಚದಷ್ಟು ಅರಿಶಿನ ಪುಡಿ.
ಒಂದು ಚಿಟಿಕೆಯಷ್ಟು ಉಪ್ಪು.
ತಯಾರಿಸುವ ವಿಧಾನ.
1. ಮೊದಲಿಗೆ ಹಾಗಲಕಾಯಿಯನ್ನು ತೊಳೆದು ಸಿಪ್ಪೆ ತೆಗೆಯಿರಿ.
2. ಕಹಿ ಸೋರೆಕಾಯಿಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಅದರ ತೊಗಟೆ ಮತ್ತು ಬೀಜಗಳನ್ನು ಹೊರಗೆ ತೆಗೆಯಿರಿ.
3. ಒಂದು ಬಟ್ಟಲು ನೀರಿನಲ್ಲಿ ಅರ್ಧ ಟೀ ಚಮಚ ಉಪ್ಪು ಸೇರಿಸಿ ಮತ್ತು ಅದರಲ್ಲಿ ಕಹಿ ಸೋರೆಕಾಯಿಯನ್ನು ಸುಮಾರು 10 ನಿಮಿಷಗಳ ಕಾಲ ನೆನೆಸಿಡಿ.
4. ಕಹಿ ಸೋರೆಕಾಯಿ ತುಂಡುಗಳನ್ನು ತೆಗೆದುಕೊಂಡು ಮಿಕ್ಸರ್ ಗೆ ಹಾಕಿ. ಈಗ ಅದಕ್ಕೆ ನೀರು ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ರುಬ್ಬಿಕೊಳ್ಳಿ.
5. ಹಾಗಲಕಾಯಿ ರಸವನ್ನು ಗಾಜಿನ ಲೋಟದೊಳಗೆ ಸುರಿಯಿರಿ. ಅದಕ್ಕೆ ಉಪ್ಪು, ಅರಿಶಿನ ಮತ್ತು ನಿಂಬೆ ರಸವನ್ನು ಸೇರಿಸಿ. ಕುಡಿಯುವ ಮೊದಲು ಎಲ್ಲವನ್ನೂ ಚೆನ್ನಾಗಿ ಬೆರೆಸಿ.
ಹೀಗೆ ವಾರಕ್ಕೆ ಎರಡು ಮೂರು ಸಲ ಈ ತರ ಜ್ಯೂಸನ್ನು ಕುಡಿಯುವುದರಿಂದ ಮದುವೆಗಳು ತಮ್ಮ ಶುಗರ್ ಲೆವೆಲ್ ಅನ್ನು ಖಂಡಿತವಾಗಿಯೂ ಕಡಿಮೆ ಮಾಡಿಕೊಳ್ಳಬಹುದು.