ಮನೆ ಎಷ್ಟೇ ದೊಡ್ಡದಾಗಿದ್ರು ಅದರ ಅಂದ ಇರೋದೆ ಸುಂದರವಾದ ಹಾಗೂ ಶುಚಿಯಾದ ಅಡುಗೆ ಮನೆಯಿಂದ. ಅಡುಗೆ ಮನೆ ಶುಚಿಯಾಗಿದ್ದರೆ ಮನೆಯಲ್ಲಿ ಖುಷಿ, ಆರೋಗ್ಯ ಹೆಚ್ಚಾಗಿರುತ್ತೆ. ಕೆಲವೊಬ್ಬರು ತಮ್ಮ ಬ್ಯುಸಿ ಕೆಲಸಗಳ ನಡುವೆ ಮನೆ ಕ್ಲೀನ್ ಮಾಡೂವುದನ್ನೇ ಮರೆತು ಹೋಗುತ್ತಾರೆ.
ನಿಮಗೂ ಹಾಗೆ ಆಗಿದ್ಯಾ? ನಿಮ್ಮ ಅಡುಗೆ ಮನೆ ಕ್ಲೀನ್ ಆಗಿ ಇರಬೇಕಂದ್ರೆ ಪ್ರತಿದಿನ ಈ ಎಲ್ಲಾ ಜಾಗಗಳನ್ನು ಕ್ಲೀನ್ ಆಗಿ ಇಡಿ..
• ಅಡುಗೆ ಮನೆಯ ಸಿಂಕ್ ನಲ್ಲಿ ಪಾತ್ರೆಗಳನ್ನು ಗುಡ್ಡೆ ಮಾಡಿ ಇಡಬೇಡಿ. ಬಳಸಿದ ಕೂಡಲೇ ತೊಳೆದು ಇಡಿ.
• ತೊಳೆದ ಪಾತ್ರೆಗಳನ್ನು ಕಟ್ಟೆಯ ಮೇಲೆ ಜೋಡಿಸುವು ಅಥವಾ ಒಂದು ಟಬ್ ನಲ್ಲಿ ಹಾಕೋದು ಬೇಡ. ಬದಲಿಗೆ ಅಡುಗೆ ಮನೆ ಶಲ್ಫ್ ಗಳಲ್ಲಿ ಕ್ಲೀನ್ ಆಗಿ ಜೋಡಿಸಿ.
• ಗ್ಯಾಸ್ ಸ್ಟವ್ ಅನ್ನು ಪ್ರತಿ ದಿನ ರಾತ್ರಿ ಮಲಗುವ ಮುನ್ನ ಕ್ಲೀನ್ ಮಾಡಿ.
• ತರಕಾರಿ ಹೆಚ್ಚುವ ಅಥವಾ ಮಾಂಸ ಕತ್ತರಿಸುವ ಸ್ಥಳಗಳನ್ನು ಸ್ವಚ್ಛ ಮಾಡುತ್ತಲೇ ಇರಿ. ಇಲ್ಲವಾದರೆ ದುರ್ವಾಸನೆ ಬರುತ್ತದೆ.
• ಕಸದ ಬುಟ್ಟಿಗೆ ಒಂದು ಕವರ್ ಹಾಕಿ ಇಡಿ. ಹಸಿ ಕಸ- ಒಣ ಕಸ ಎಂದು ವಿಂಗಡಿಸಿ ಇಡಿ. ಕಸದ ಬುಟ್ಟಿ ಯಾವಾಗಲೂ ಮುಚ್ಚಿರಲಿ.
• ಫ್ರಿಡ್ಜ್ ನಲ್ಲಿ ಇಡುವ ಪದಾರ್ಥಗಳ ಕಡೆ ಗಮನವಿರಲಿ. ಕೆಲವು ಪದಾರ್ಥಗಳು ವಾಸನೆ ಉಂಟು ಮಾಡುತ್ತವೆ.
• ಹಾಲು, ಮೊಸರು, ಜ್ಯೂಸ್, ಹಣ್ಣು, ತರಕಾರಿ, ಮಾಂಸ ಹೀಗೆ ಎಲ್ಲಾ ಪದಾರ್ಥಗಳು ಫ್ರಿಡ್ಜ್ ನಲ್ಲಿ ಇಡುವುದರಿಂದ ಆಗಾಗ್ಗೆ ಫ್ರಿಡ್ಜ್ ಅನ್ನು ಫುಲ್ ಕ್ಲೀನ್ ಮಾಡಿ ಇಡಿ.