ತೆಳ್ಳಗೆ ಸುಂದರವಾದ ಮೈಕಟ್ಟು ಇರಬೇಕು ಅಂತ ಎಲ್ಲರಿಗೂ ಆಸೆ ಇರುತ್ತೆ. ಆದರೆ ಅನಿವಾರ್ಯ ಕಾರಣಗಳಿಂದ ಬೊಜ್ಜು, ತೂಕ ಹೆಚ್ಚಾಗುವುದು, ದಪ್ಪ ಆಗೋದು ಸಹಜ. ಆದರೆ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳೋಕೆ ಜನರು ಜಿಮ್, ಯೋಗ, ಡಯಟ್ ಅಂತೆಲ್ಲ ಮಾಡುತ್ತಾರೆ.
ನೀವು ಹೀಗೆ ಮಾಡ್ತೀರಾ? ಹಾಗಿದ್ರೆ ನೀವು ತೂಕ ಇಳಿಸುವಾಗ ಈ ತಪ್ಪುಗಳನ್ನು ಮಾಡದಿರಿ..
• ತಿಂಡಿ, ಊಟ ಸ್ಕಿಪ್ ಮಾಡುವುದು.
• ಕಡಿಮೆ ಪೌಷ್ಠಿಕಾಂಶ ಇರುವ ಆಹಾರ ತಿನ್ನುವುದು.
• ಅತಿಯಾದ ನಿದ್ದೆ ಅಥವಾ ನಿದ್ದೆ ಕಡಿಮೆ ಮಾಡುವುದು.
• ನಿಮ್ಮ ಶಕ್ತಿಗಿಂತ ಹೆಚ್ಚು ವ್ಯಾಯಾಮ ಮಾಡುವುದು.
• ವ್ಯಾಯಾಮ ಮಾಡುವಾಗ ಎಷ್ಟು ಕ್ಯಾಲೊರಿ ಬರ್ನ್ ಮಾಡಿದ್ದೀರಿ ಎಂದು ಗಮನಿಸೋದು.
• ಹಸಿವು ಇಲ್ಲದಿದ್ದರೂ ಆಗಾಗ್ಗೆ ಜಾಸ್ತಿ ತಿನ್ನುವುದು.
• ತೂಕ ಇಳಿಸೋಕೆ ಔಷಧಗಳನ್ನು ತೆಗೆದುಕೊಳ್ಳುವುದು.
• ತೂಕ ಹೆಚ್ಚಾಗಿರುವುದರ ಬಗ್ಗೆ ಅತಿಯಾಗಿ ಸ್ಟ್ರೆಸ್ ಮಾಡಿಕೊಳ್ಳುವುದು.
• ಹಸಿವಾದಾಗ ಬೇಕರಿ, ಕುರುಕುಲು ತಿನಿಸುಗಳನ್ನು ತಿನ್ನುವುದು.