ನಮ್ಮ ಜೊತೆ 24 ಗಂಟೆಗಳ ಕಾಲ ಯಾರು ಇರುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನಮ್ಮ ಸ್ಮಾರ್ಟ್ ಫೋನ್ ಮಾತ್ರ ನಮ್ಮ ಜೊತೆಗೆ ಇಟ್ಟುಕೊಂಡಿರುತ್ತೇವೆ. ಅದರಲ್ಲಿ ಏನು ಇಲ್ಲ ಅಂತೇನಿಲ್ಲ ಎಲ್ಲ ಮಾಹಿತಿಗಳನ್ನು ಅದರಲ್ಲಿ ಶೇಖರಿಸಿಟ್ಟಕೊಂಡಿರುತ್ತೇವೆ. ಅಂತಹ ಸ್ಮಾರ್ಟ್ ಫೋನ್ ಕಳೆದುಕೊಂಡರೆ ಆಗುವ ಆತಂಕ ಅಷ್ಟಿಷ್ಟಲ್ಲ. ಇದು ದುಬಾರಿ ಎನ್ನುವ ಕಾರಣಕಷ್ಟೇ ಅಲ್ಲದೆ ಅದರಲ್ಲಿರುವ ಸಂಪರ್ಕ ಸಂಖ್ಯೆಗಳು, ಫೋಟೋ, ಬ್ಯಾಂಕ್ ಡಿಟೇಲ್ಸ್ ಎಲ್ಲಾ ಹೋಗುತ್ತದೆ ಎಂಬ ಭಯ ನಮ್ಮನ್ನು ಕಾಡುತ್ತದೆ. ಆದರೆ ಇನ್ನು ಮುಂದೆ ನಮ್ಮ ಸ್ಮಾರ್ಟ್ ಫೋನ್ ಕಳೆದುಕೊಂಡರೆ ಅಥವಾ ಕಳ್ಳತನವಾದರೆ ಭಯಪಡುವ ಅಗತ್ಯವಿಲ್ಲ. ಕಳೆದುಕೊಂಡ ಮೊಬೈಲನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರ ಪರಿಹಾರ ಕಂಡುಹಿಡಿದಿದೆ ಅದೇನೆಂದರೆ ಪೋರ್ಟಲ್ ಜಾರಿಗೆ ತರಲಿದೆ.
ಈಗೀಗ ಮೊಬೈಲ್ ಕಳ್ಳತನ ಹೆಚ್ಚಾಗಿ ಆಗುತ್ತಿರುವುದರಿಂದ ಅದನ್ನು ಮನಗಂಡ ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಜನರ ಫೋನ್ ಕಳ್ಳತನಕ್ಕೆ ಪರಿಹಾರ ಕಂಡುಕೊಂಡಿದ್ದು ಹೊಸದಾಗಿ ಸಂಚಾರ ಸಾಥಿ ಪೋರ್ಟಲ್ ಪ್ರಾರಂಭಿಸಿದ್ದಾರೆ. ಸಾಮಾನ್ಯ ಜನರು ಕಳೆದುಕೊಂಡ ಮೊಬೈಲನ್ನು ಹುಡುಕುವುದೇ ಇದರ ಮುಖ್ಯ ಉದ್ದೇಶ.
ಮೇ 17 ವಿಶ್ವ ಟೆಲಿಕಾಂ ದಿನವಾಗಿದ್ದು ಅಂದು ಈ ಸಂಚಾರ ಸಾಥಿ ಪೋರ್ಟಲ್ ಅನಾವರಣಗೊಳ್ಳಲಿದೆ. ಸಂಚಾರ ಸಾಥಿ ಪೋರ್ಟಲ್ ಉತ್ತಮ ಸೇವೆನೀಡಲಿದೆ. ಮೊಬೈಲ್ ಬಳಕೆದಾರರು ತಮ್ಮ ಫೋನ್ ಎಲ್ಲಿದೆ ಎಂದು ಕಂಡುಕೊಳ್ಳಬಹುದು. ಆ್ಯಪಲ್ ಐಫೋನ್ನಲ್ಲಿರುವ ಫೈಂಡ್ ಮೈ ಫೋನ್ ವೈಶಿಷ್ಟ್ಯದಂತೆ ಇದು ಆಂಡ್ರಾಯ್ಡ್ ಫೋನ್ನಲ್ಲಿ ಕಾರ್ಯನಿರ್ವಹಿಸಲಿದೆ. ಇದನ್ನು ಸ್ಪಷ್ಟವಾಗಿ ಯಾವ ರೀತಿ ಉಪಯೋಗಿಸಬಹುದು ಎಂಬುದನ್ನು ಸರ್ಕಾರ ಇನ್ನು ಮುಂದೆ ಬಹಿರಂಗ ಪಡಿಸಬೇಕಿದೆ.