ಪಶ್ಚಿಮ ಘಟ್ಟಗಳ ನಡುವೆ ಗುಪ್ತವಾಗಿ ಹರಿಯುವ ಜಲಧಾರೆಯೇ ಸಿರಿ ಮನೆ ಜಲಪಾತ. ಹಚ್ಚ ಹಸುರಿನ ಕಾನನ ಮೂಲಕ 40 ಅಡಿ ಎತ್ತರದಿಂದ ಧುಮುಕುವ ಈ ವೈಯಾರದ ಸಿರಿಯೇ ಸಿರಿಮನೆ ಜಲಪಾತ. ಶೃಂಗೇರಿಯಿಂದ 15 ಕಿ.ಮೀ ದೂರದಲ್ಲಿ ಕಿಗ್ಗದಿಂದ 5ಕಿ.ಮೀ ದೂರದಲ್ಲಿ ಪ್ರಶಾಂತವಾದ ವಾತವರಣದಲ್ಲಿದೆ.
ಇಂದು ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ತುಂಬಾನೇ ಸುರಕ್ಷಿತವಾದ ಜಲಪಾತ ವರ್ಷವಿಡಿ ಭೇಟಿ ನೀಡಲು ಮತ್ತು ನೀರಿನಲ್ಲಿ ಆಡಲು ಸೂಕ್ತ ಸ್ಥಳವಾಗಿದೆ. ವರ್ಷದಲ್ಲಿ ಎಲ್ಲಾ ಕಾಲದಲ್ಲೂ ಯಾವಾಗಲು ಭೇಟಿ ನೀಡಬಹುದು ಸ್ಥಳವಾಗಿದೆ. ಧುಮ್ಮಿಕ್ಕಿ ಹರಿಯುವ ನೀರಿನಲ್ಲಿ ಆಟವಾಡುವುದು ಮಳೆಗಾಲದಲ್ಲಿ ಸ್ವಲ್ಪ ಕಷ್ಟಕರವಾದ ಕೆಲಸ . ಸ್ನೇಹಿತರ ಬಳಗ, ಫ್ಯಾಮಿಲಿ ಜೊತೆಗೆ ಈ ಬೇಸಿಗೆಯ ತಾಪದಿಂದ ದೂರವಾಗಿ ಮಜಾ ಮಾಡಲು ಬಯಸುವವರಿಗೆ ಇದು ಉತ್ತಮ ಜಾಗ.
ಇಲ್ಲಿಗೆ ತಲುಪಲು ಗಾಡಿಗಳ ವ್ಯವಸ್ಥೆಯು ಇದೆ. ಸ್ವಂತ ಗಾಡಿಗಳಲ್ಲಿ ಹೋಗಬಹುದು. ಪಾರ್ಕಿಂಗ್ಗೆ ಸ್ವಳಾವಕಾಶ ಇದೆ. ಜಾಲಪಾತಕ್ಕೆ ಇಳಿಯಲು ಸೂಕ್ತ ಮೆಟ್ಟಿಲುಗಳ ವ್ಯವಸ್ಥೆ ಇದೆ. ಬಟ್ಟೆ ಬದಲಾಯಿಸಲು ಬೂತ್ ಮಾದರಿಯ ಕೋಣೆಗಳ ನಿರ್ಮಾಣಮಾಡಲಾಗಿದೆ.
ಮನೆಮಂದಿಗೆಲ್ಲಾ ಟ್ರೀಪ್ ಹೋಗಿ ಅದ್ಭುತ ಜಲ ಸಿರಿಯನ್ನು ಕಾಣಲು ಇದುವೆ ಸೂಕ್ತ ಸಮಯ. ನೀರಿನ ಬಲ ಪ್ರಭಾವವು ಕಮ್ಮಿ ಇರುತ್ತದೆ. ಮಕ್ಕಳು ದೊಡ್ಡವರು ಹಿರಿಯರು ಎಲ್ಲರೂ ತಂಪು ತಂಪು ನೀರಿನ ಮಜಾ ತೆಗೆದುಕೊಳ್ಳಬಹುದು