ಯೋಗಾಸನ ಅನ್ನುವುದು ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಮತ್ತು ಭಾವನಾತ್ಮಕವಾಗಿ ಶಕ್ತಿ ನೀಡುತ್ತದೆ. ಯೋಗಾಭ್ಯಾಸ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ, ಅದರಂತೆಯೇ ಕೂದಲಿನ ಸಮಸ್ಯೆಗೂ ಸಹಾಯ ಮಾಡುತ್ತದೆ. ಈ ಕೆಳಗಿನ ಯೋಗಾಸನದಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
ವಜ್ರಾಸನ:
ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಈ ಮೂಲಕ ಕೂದಲಿಗೆ ಅಗತ್ಯವಾದ ಪೋಷಕಾಂಶ ಸಿಗಲಿದೆ.
ಅಧೋಮುಖ ಶ್ವಾನಾಸನ: ಈ ಆಸನದಿಂದ ನೆತ್ತಿಗೆ ರಕ್ತ ಸಂಚಾರ ಹೆಚ್ಚಾಗುತ್ತದೆ. ಈ ಮೂಲಕ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ.
ಉತ್ತಾನಾಸನ:
ಕೂದಲು ಉದುರುವಿಕೆಗೆ ಪ್ರಮುಖ ಕಾರಣ ಒತ್ತಡ. ಒತ್ತಡ ನಿವಾರಣೆ ಮಾಡಿಕೊಂಡರೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಶಿರ್ಷಾಸನ:
ಶಿರ್ಷಾಸನದ ಮೂಲಕ ನೆತ್ತಿಗೆ ರಕ್ತದ ಹರಿವು ಹೆಚ್ಚು ಮಾಡುತ್ತದೆ. ಈ ಮೂಲಕ ಕೂದಲು ಬೆಳೆಯುವುದು ಹೆಚ್ಚಾಗುತ್ತದೆ.
ಮತ್ಸ್ಯಾಸನ:
ಈ ಆಸನ ಸ್ನಾಯುವಿನ ಒತ್ತಡವನ್ನು ನಿವಾರಿಸುತ್ತದೆ ಮತ್ತು ದೇಹಕ್ಕೆ ಆರಾಮ ನೀಡುತ್ತದೆ. ಈ ಆಸನ ತಲೆಯ ಕಡೆಗೆ ತಲೆಯ ಕಡೆಗೆ ರಕ್ತ ಪರಿಚಲನೆ ಆಗುವಂತೆ ಮಾಡುವ ಮೂಲಕ ಕೂದಲಿಗೆ ಶಕ್ತಿ ನೀಡುತ್ತದೆ