ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ನನ್ನರಸಿ ರಾಧೆ ಧಾರವಾಹಿ ಮೂಲಕ ಎಲ್ಲರ ಮನಗೆದ್ದಿದ್ದ ನಟಿ ಸಹನಾ ಶೆಟ್ಟಿ ಅವರು ಈಗ ನಿಜ ಜೀವನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ನನ್ನರಸಿ ರಾಧೆ ಧಾರವಾಹಿಯಲ್ಲಿ ಅಗಸ್ತ್ಯನ ತಂಗಿ ಪಾತ್ರದಲ್ಲಿ ಸಹನಾ ಕಾಣಿಸಿಕೊಂಡಿದ್ದರು. ಸಹನಾ ಶೆಟ್ಟಿ ತಮ್ಮ ಇನ್ಸ್ ಟಾಗ್ರಾಂ ನಲ್ಲಿ ಈ ಬಗ್ಗೆ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದು, ಸಹನಾ ಅವರು ಪ್ರತಾಪ್ ಶೆಟ್ಟಿ ಎಂಬುವರ ಜೊತೆಯಲ್ಲಿ ಹೊಸ ಜೀವನ ಪ್ರಾರಂಭಿಸಿದ್ದಾರೆ.
ಈ ಜೋಡಿಯ ಪ್ರೀ ವೆಡ್ಡಿಂಗ್ ಫೋಟೋಶೂಟ್ ಗೋವಾದ ಬೀಚ್ ಗಳು ಹಾಗೂ ಇತರೆ ಸುಂದರ ಸ್ಥಳಗಳಲ್ಲಿ ಮಾಡಿಸಿಕೊಂಡಿದ್ದಾರೆ. ಪ್ರೀವೆಡ್ಡಿಂಗ್ ವಿಡಿಯೋದಲ್ಲಿ ಸಹನಾ ಫುಲ್ ಕ್ಲಾಸ್ ಲುಕ್ ನಲ್ಲಿ ಕಾಣಿಸುವಂತಹ ಡ್ರೆಸ್ ಗಳನ್ನು ಧರಿಸಿದ್ದಾರೆ.
ಇದರಂತೆ ಅವರ ಅರಿಶಿನ ಶಾಸ್ತ್ರ ಕೂಡ ಸಖತ್ ಅದ್ಧೂರಿಯಾಗಿ ನಡೆದಿದ್ದು, ವಿಡಿಯೋ ನೋಡಿ ಅಭಿಮಾನಿಗಳು ಶುಭಹಾರೈಸಿದ್ದಾರೆ. ಮದುವೆ ಹಾಗೂ ಆರತಕ್ಷತೆಗೆ ಗೀತಾ ಧಾರವಾಹಿಯ ನಟ ಧನುಷ್ ಗೌಡ, ಭವ್ಯಾ ಗೌಡ ಭಾಗಿಯಾಗಿದ್ದಾರೆ.