ಇಂದಿನ ಜೀವನ ಶೈಲಿಯು ಮಾನಸಿಕವಾಗಿ ಮಾತ್ರವಲ್ಲ ದೈಹಿಕವಾಗಿಯು ಮನುಷ್ಯರನ್ನು ಕಾಡುತ್ತಿರುತ್ತದೆ. ದಿನ ನಿತ್ಯ ಒಡಾಟ, ಕೆಲಸ, ಅಪೂರ್ಣ ನಿದ್ದೆ, ಚಿಂತೆ ಒಂದಿಷ್ಟು ಜಂಜಾಟಗಳು ಮನುಷ್ಯನ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯವನ್ನು ಕಾಡುತ್ತದೆ.
ಹೊಟ್ಟೆಯ ಬೊಜ್ಜು ಇಂದು ಬಹುತೇಕರನ್ನು ಕಾಡುವ ಸಮಸ್ಯೆ. ಕೆಲವರು ದಪ್ಪ ಆದ ಕಾರಣ ಹೊಟ್ಟೆಯ ಬೊಜ್ಜು ಕೂಡ ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರ ದೇಹ ನೀಳವಾಗಿದ್ದರು ಬರಿ ಹೊಟ್ಟೆಯ ಭಾಗದಲ್ಲಿ ಮಾತ್ರ ಬೊಜ್ಜು ತುಂಬಿಕೊಳ್ಳುತ್ತದೆ.
ಸಾಕಷ್ಟು ಭಾರಿ ಯುವಕ ಯುವತಿಯರು ಇದರಿಂದ ಮುಜುಗರದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಇಂದು ಭಾಹ್ಯ ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ ಆದ್ದರಿಂದ ಹೊಟ್ಟೆಯ ಭಾಗದಲ್ಲಿ ಬೊಜ್ಜು ಸೇರಿಕೊಂಡಿರುವವರು ಪದೇ ಪದೇ ಮುಜುಗರಕ್ಕೆ ಒಳಗಾಗುತ್ತಾರೆ. ಯಾವುದೇ ಸಮಾರಂಭಕ್ಕೆ ಹೋಗುವುದಿದ್ದರೆ ಎಷ್ಟೆ ಒಳ್ಳೆಯ ಬಟ್ಟೆ ಹಾಕಿಕೊಂಡರು ಕೆಲವರು ಬೊಜ್ಜುನ್ನು ಕಂಡು ನಗುವರು. ಇನ್ನು ಕೆಲವರಿಗೆ ಆಸೆಯಂತೆ ನೆಚ್ಚಿನ ಡ್ರೇಸ್ ಹಾಕಲು ದೈರ್ಯವೇ ಸಾಲದು. ದಪ್ಪಗಿರುವ ಮಹಿಳೆ ಬಸ್ಸಲ್ಲಿ ಹೋದಾಗ ಕೆಲವರು ಸೀಟು ಬಿಟ್ಟು ಕೋಡುವ ಸಂಗತಿ ನಡೆಯುತ್ತದೆ. ಯಾಕೆಂದರೆ ಮಹಿಳೆಯನ್ನು ಕಂಡು ಗರ್ಭಿಣಿ ಎಂದು ಊಹಿಸುವವರು ಜಾಸ್ತಿ.
ಹುಡುಗರು ಕಮ್ಮಿ ಇಲ್ಲ ಹೊಟ್ಟೆಯ ಬೊಜ್ಜಿನಿಂದಾಗಿ ಮದುವೆ ಪ್ರಸ್ತಾಪಕ್ಕೆ ಎಲ್ಲಿಯ ಸಮಸ್ಯೆಯಾಗುತ್ತದೆ ಎಂಬ ಚಿಂತೆಯು ಕಾಡುತ್ತದೆ. ಯಾಕೆಂದರೆ ಹೊಟ್ಟೆಯ ಬೊಜ್ಜಿನಿಂದಾಗಿ ಹುಡುಗರು ಮಧ್ಯ ವಯಸ್ಸಿನ ಗಂಡಸರಂತೆ ಕಾಣುವುದು ಸಹಜ.
ಇಷ್ಟಕ್ಕು ಈ ಹೊಟ್ಟೆ ಬೊಜ್ಜು ಯಾಕೆ ಬರುತ್ತೆ ಎನ್ನುವುದು ಎಲ್ಲರನ್ನು ಕಾಡುವ ಪ್ರಶ್ನೆ.
ಕಳಪೆ ಆಹಾರ ಪದ್ಧತಿ:
ಕೆಲವರು ತಿಂಡಿ ಪೋತರಂತೆ ಅಥಾವ ಬಕಾಸುರನ ತರ ತಿನ್ನುವುದನ್ನೇ ಜೀವಾಳ ಮಾಡಿಕೊಂಡಿರುತ್ತಾರೆ. ಕೊಂಚವು ಇದು ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಕಲ್ಪನೆ ಕೂಡ ಇರುವುದಿಲ್ಲ.ಜೊತೆಗೆ ಸರಿಯಾದ ಸಮಯಕ್ಕೆ ಊಟ ಮಾಡದಿರುವುದು ಕೂಡ ಕಾರಣವಾಗುತ್ತದೆ.ಕರಿದ ಎಣ್ಣೆಯ ಪದಾರ್ಥಗಳು ಇಡೀ ದೇಹವನ್ನೇ ದಡೂತಿಯನ್ನಾಗಿಸುತ್ತದೆ.
ಅತೀಯಾದ ಮಧ್ಯ ಸೇವನೆ:
ಅತೀಯಾದ ಮಧ್ಯ ಸೇವನೆಯಿಂದಲೂ ಬೊಜ್ಜು ಬರಲು ಕಾರಣವಾಗುತ್ತದೆ. ಕೆಲವರ ದೇಹ ಸಣ್ಣಗಿದ್ದು ಮಧ್ಯ ಸೇವನೆಯ ಆರಂಭದಿಂದ ದೇಹವು ನಿಧಾನಕ್ಕೆ ದಪ್ಪಗಾಗಲು ಶರುವಾಗುತ್ತದೆ. ಮತ್ತೆ ಹೊಟ್ಟೆಯಲ್ಲಿ ಬೊಜ್ಜು ಕಾಣಿಸಿಕೊಳ್ಳಲಾರಂಬಿಸುತ್ತದೆ.
ವ್ಯಾಯಮವಿಲ್ಲ:
ಕೆಲವೊಂದು ಕೆಲಸಗಳು ಸರಿಯಾಗಿ ಮನಷ್ಯನ ದೇಹಕ್ಕೆ ವ್ಯಾಯಮವನ್ನು ನೀಡುವುದಿಲ್ಲ. ಆಫೀಸ್ ಕೆಲಸ, ಡೈವರ್ ಕೆಲಸ ಹೀಗೆ ಕೆಲವೊಂದು ಕೆಲಸವು ದೇಹಕ್ಕೆ ವ್ಯಾಮ ನೀಡದ್ದೆ ಬೊಜ್ಜು ಉತ್ಪಾತ್ತಿಯಾಗಲು ಕಾರಣವಾಗುತ್ತದೆ. ಹೆಚ್ಚು ಸಮಯದ ವರೆಗೆ ಕುಳಿತ್ತುಕೊಂಡಿರುವುದರಿಂದ ಹೊಟ್ಟೆ ಭಾಗದಲ್ಲಿ ಬೊಜ್ಜು ಬರುತ್ತದೆ.
ಚಿಂತೆ:
ಚಿಂತೆಯು ಚಿತೆಗೆ ಸಮಾನ ಎನ್ನುತ್ತಾರೆ. ಚಿಂತೆಯು ಹೆಚ್ಚಿದಾಗ ಕೆಲವರು ಅಧಿಕ ತಿನ್ನಲು ಬಯಸುತ್ತಾರೆ. ಇದರ ಅರಿವು ಆ ವ್ಯಕ್ತಿಗೆ ಇರುವುದಿಲ್ಲ. ದೇಹದಲ್ಲಿ ಕ್ಯಾಲರಿಸ್ ಹೆಚ್ಚಾಗಿ ದಪ್ಪಗಾಗುತ್ತಾರೆ.
ಜೆನೆಟಿಕ್:
ಮನುಷ್ಯನಿಗೆ ಬರುವಂತ ಕೆಲವೊಂದು ಸಮಸ್ಯೆಗಳು ಹುಟ್ಟಿನಿಂದಲೇ ಅಂದರೆ ಪೂರ್ವ ನಿರ್ಧಾರಿತವಾಗಿರುತ್ತದೆ. ಆತನ ಜಿನ್ನಲ್ಲಿಯೇ ಆ ಸಮಸ್ಯೆ ಇದ್ದಲ್ಲಿ ವ್ಯಕ್ತಿಯನ್ನು ಕಾಡುವುದರಲ್ಲಿ ಸಂಶಯವಿಲ್ಲ.
ಕಡಿಮೆ ನಿದ್ರೆ:
ಕಡಿಮೆ ನಿದ್ರೆಯು ಒಂದು ಕಾರಣವಾಗುತ್ತದೆ. ಕಡಿಮೆ ನಿದ್ರೆ ಎಂದರೆ ದೇಹಕ್ಕೆ ವಿಶ್ರಾಂತಿ ಇಲ್ಲದಿರುವುದು ಮತ್ತು ಕೆಲವೊಮ್ಮೆ ಇಂತಹದೇ ತಿಂಡಿಯನ್ನು ತಿನ್ನಬೇಕೆಂಬ ಬಯಕೆಗಳು ಹುಟ್ಟುವುದರಿಂದ ಅದನ್ನು ತೀರಿಸಿಕೊಳ್ಳುವುದರಿಂದಲೂ ಕಾರಣವಾಗುತ್ತದೆ.
ಧೂಮಪಾನ:
ಅಧ್ಯಯನದ ಪ್ರಕಾರ ಧೂಮಪಾನ ಮಾಡದವರಿಗಿಂತ, ಧೂಮಪಾನ ಮಾಡುವವರಲ್ಲಿ ಅಧಿಕ ಮಂದಿಗೆ ಹೊಟ್ಟೆಯ ಬೊಜ್ಜಿನ ಸಮಸ್ಯೆ ಕಾಡಿದೆ.
ಈ ರೀತಿ ಸಮಸ್ಯೆಯಿಂದ ಬಳಲುವವರು ಚಿಂತಿಸುವ ಅಗತ್ಯವಿಲ್ಲ. ಎಕೆಂದರೆ ದೇಹಕ್ಕೆ ವ್ಯಾಯಮ ನೀಡಿಬೇಕು, ಹಾಗೂ ಕರಿದ ಪದಾರ್ಥಗಳು, ಧೂಮಪಾನ, ಮಧ್ಯಪಾನದಿಂದ ದೂರವಿದ್ದಲ್ಲಿ ಹೊಟ್ಟೆಯ ಭಾಗದಲ್ಲಿ ಬೊಜ್ಜು ಬರುವುದನ್ನು ಸುಲಭವಾಗಿ ತಪ್ಪಿಸಬಹುದು.ಇಂದು ಯೋಗದಿಂದಲೂ ಹೊಟ್ಟೆಯ ಭಾಗದ ಬೊಜ್ಜನ್ನು ಕಡಿಮೆಮಾಡಿಕೊಳ್ಳಬಹದು. ಹೊಟ್ಟೆಯ ಭಾಗದ ಬೊಜ್ಜನ್ನು ಕರಗಿಸಲೆಂದೇ ಕೆಲವೊಂದು ವ್ಯಾಯಮಗಳು ಇರುವುದರಿಂದ ಚಿಂತಿಸುವ ಅಗತ್ಯವಿಲ್ಲ.