ಅಜರ್ಬೈಜಾನ್ನ ಬಾಕುನಲ್ಲಿ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ 2023 ನಡೆಯುತ್ತಿದ್ದು, ಭಾರತ ಮೊದಲ ಚಿನ್ನದ ಪದಕ ಗೆದ್ದಿದೆ. 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಫೈನಲ್ನಲ್ಲಿ ದಿವ್ಯಾ ಟಿಎಸ್ ಹಾಗೂ ಸರಬ್ಜೋತ್ ಸಿಂಗ್ ಜೋಡಿ ಮೊದಲ ಸ್ಥಾನವನ್ನು ಪಡೆದು ಬಂಗಾರ ಪದಕವನ್ನು ಗೆದ್ದುಕೊಂಡಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ದಿವ್ಯಾ ಅವರು ಇವರಿಗೆ ಇದು ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಮೊದಲ ಪದಕ.
ಸರ್ಬಿಯಾದ ದಮಿರ್, ಜೊರಾನಾ ವಿರುದ್ಧ 16-14 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸುವುದರ ಈ ಮೂಲಕ ಭಾರತಕ್ಕೆ ಮೊದಲ ಚಿನ್ನವನ್ನು ಭಾರತದ ಜೋಡಿ ತಂದು ಕೊಟ್ಟಿದೆ.
ಇದಕ್ಕೂ ಮುನ್ನ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ದಿವ್ಯಾ ಮತ್ತು ಸರಬ್ಜೋತ್ ಅವರು 581 ಪಾಯಿಂಟ್ಸ್ಗಳನ್ನು ಕಲೆಹಾಕುವ ಮೂಲಕ ಸ್ಪರ್ಧೆಯಲ್ಲಿದ್ದ 55 ತಂಡಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದರು.
ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ರಿಧಮ್ ಸಂಗ್ವಾನ್ ಅವರು ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇನ್ನೂ ಭಾರತದ ವರುಣ್ ತೋಮರ್ ಮತ್ತು ಇಶಾ ಸಿಂಗ್ 578 ಸ್ಕೋರ್ ಗಳಿಸಿ 6ನೇ ಸ್ಥಾನ ಗಳಿಸಿದರು ಮತ್ತು ಪದಕ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಅರ್ಹತಾ ಸುತ್ತಿನಲ್ಲಿ ಒಟ್ಟು 55 ಜೋಡಿಗಳು ಸ್ಪರ್ಧಿಸಿದ್ದವು. ಸದ್ಯ ಭಾರತ ಒಂದು ಚಿನ್ನ ಮತ್ತು ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.