ಭಾರತೀಯ ಸೇನೆಯಲ್ಲಿನ ಬ್ರಿಗೇಡಿಯರ್ ಹಾಗೂ ಅದಕ್ಕಿಂತ ಉನ್ನತ ಶ್ರೇಣಿಯಲ್ಲಿನ ಅಧಿಕಾರಿಗಳಿಗೆ ಆಗಸ್ಟ್ 1ರಿಂದ ಏಕರೂಪ ಸಮವಸ್ತ್ರ ಅಳವಡಿಸಲು ಸೇನೆ ನಿರ್ಧರಿಸಿದೆ.
ಈ ಬಗ್ಗೆ ಇತ್ತೀಚೆಗಷ್ಟೆ ನಡೆದ ಸೇನಾ ಕಮಾಂಡರ್ ಗಳ ಸಮ್ಮೇಳನದಲ್ಲಿ ವಿಸ್ತೃತ ಚರ್ಚೆ ನಡೆಸಿದ ಬಳಿಕ ಈ ನಿರ್ಧಾರ ಮಾಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇದೇ ಆಗಸ್ಟ್ 1ರಿಂದ ಎಲ್ಲಾ ಹಿರಿಯ ಅಧಿಕಾರಿಗಳ ಶಿರಸ್ತ್ರಾಣ, ಬ್ಯಾಡ್ಜ್ ಗಳು, ಗಾರ್ಗೆಟ್ ಪ್ಯಾಚ್ ಗಳು, ಬೆಲ್ಟ್ ಹಾಗೂ ಶೂ ಗಳ ಗುಣ ಮಟ್ಟವನ್ನು ಹೆಚ್ಚಿಸಲಾಗುತ್ತದೆ. ಕರ್ನಲ್ ಹಾಗೂ ಅದರ ಕೆಳಗಿನ ಶ್ರೇಣಿಯ ಅಧಿಕಾರಿಗಳು ಧರಿಸುವ ಸಮವಸ್ತ್ರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ವರದಿ ತಿಳಿಸಿದೆ.