ವ್ಯಕ್ತಿಯ ಸೌಂದರ್ಯವು ಅಡಕವಾಗಿರುವುದು ಅವರ ತ್ವಚೆ ಮತ್ತು ಕೂದಲಿನಲ್ಲಿ ಇವೆರಡನ್ನು ಆರೋಗ್ಯವಾಗಿ ಇಟ್ಟುಕೊಂಡಲ್ಲಿ ಸೌಂದರ್ಯಕ್ಕೆ ಇನ್ನಷ್ಟು ಹೊಳಪನ್ನು ನೀಡುತ್ತದೆ. ಅದಕ್ಕಾಗಿ ನೈಸರ್ಗಿಕವಾದ ಸಾಮಗ್ರಿಗಳನ್ನೇ ಬಳಸುವುದು ಹೆಚ್ಚು ಪರಿಣಾಮಕಾರಿ.
ಅತ್ಯಂತ ಸುಂಗಧಿತ ದ್ರವ್ಯಗಳಲ್ಲಿ ಒಂದಾಗಿರುವ ಶ್ರೀ ಗಂಧದ ಎಣ್ಣೆಯು ಬಹಳ ದುಬಾರಿಯಾಗಿದೆ. ಹೆಚ್ಚಾಗಿ ಸೋಪ್, ಪರಫ್ಯೂಮ್, ಪೌಡರ್ ಹಾಗೂ ಇತರ ಸೌಂದರ್ಯ ವರ್ಧಕಗಳಲ್ಲಿಯು ಬಳಸುತ್ತಾರೆ. ಗಂಧದ ಎಣ್ಣೆಯ ಬಳಕೆಯಿಂದ ಸಾಕಷ್ಟು ಪ್ರಯೋಜನೆಗಳಿವೆ.
ಚರ್ಮಕ್ಕೆ ಹೊಳಪು ದೇಹಕ್ಕೆ ಕಾಂತಿಯನ್ನು ನೀಡುವ ಗಂಧದ ಎಣ್ಣೆಯನ್ನು ಆರ್ಯುವೇದದಲ್ಲಿ ಆರೋಗ್ಯ ವರ್ಧಕಗಳಾಗಿಯು ಬಳಸಲಾಗುತ್ತಿದೆ.ಆರೋಮದಂತಹ ಸೌಂದರ್ಯ ಚಿಕಿತ್ಸೆಗಳಲ್ಲಿ ಇಂದಿಗೂ ಬಳಸಲಾಗುತ್ತದೆ.
ಶ್ರೀ ಗಂಧದ ಎಣ್ಣೆಯನ್ನು ಬಳಸುವುದರಿಂದ ಇದರಲ್ಲಿರುವಂತಹ ನೈಸರ್ಗಿಕ ಗುಣಗಳು ತ್ವಚೆಯನ್ನು ಶುಧ್ಧಿಕರಿಸುವುದರ ಜೊತೆಗೆ ಮೊಡವೆಗಳನ್ನು ತಗ್ಗಿಸುತ್ತದೆ. ಶ್ರೀ ಗಂಧದ ಪೌಡರ್ಗಳನ್ನು ಬಳಸುವುದರಿಂದ ತ್ವಚೆಯಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುತ್ತದೆ.
ಕಪ್ಪು ಕಲೆಗಳನ್ನು ನಿವಾರಿಸಲು ಕೂಡ ಸಹಕಾರಿ. ಗಂಧದ ಎಣ್ಣೆ, ಬಾದಾಮಿ ಎಣ್ಣೆ ಜೊತೆ ಗಂಧದ ಹುಡಿಗೆ ರೋಸ್ ವಾಟರ್ನ್ನು ಸೇರಿಸಿ ಕಪ್ಪು ಕಲೆಗಳಿರುವ ಜಾಗಗಳಿಗೆ ಹಚ್ಚಬೇಕು.
ತಾರುಣ್ಯ ಭರಿತ ಚರ್ಮಕ್ಕಾಗಿ ಬಳಸಬಹುದು. ಗಂಧದ ಎಣ್ಣೆ,ಅರಶಿನ ಮತ್ತು ಜೇನಿನ ಹನಿಗಳನ್ನು ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ನೀರಿನಲ್ಲಿ ತೊಳೆಯಬೇಕು. ಇದನ್ನು ವಾರದಲ್ಲಿ ಮೂರು ಬಾರಿಯಾದರೂ ಮಾಡಿದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ.
ಕೆಲವೊಮ್ಮ ನಮ್ಮ ಜೀವನ ಶೈಲಿ ನಮ್ಮ ಉತ್ತಮ ನಿದ್ದೆಯನ್ನು ಕಸಿಯುತ್ತದೆ ಮತ್ತು ಚಿಂತಾಭರಿತ ಜೀವನವನ್ನು ಸಾಗಿಸುತ್ತಿರುತೇವೆ. ಒತ್ತಡ ಮತ್ತು ಚಿಂತೆ ಎರಡರಿಂದ ಮುಕ್ತಿಪಡೆಯಲು ಗಂಧದ ಎಣ್ಣೆಯ ಬಳಕೆ ಪರಿಣಾಮಕಾರಿ. ಬಿಸಿ ನೀರಿಗೆ ಎರಡರಿಂದ ಮೂರು ಹನಿ ಎಣ್ಣೆಯನ್ನು ಹಾಕಿ ಸಾನ್ನ ಮಾಡಬಹುದು ಅಥವಾ ಎಣ್ಣೆಯನ್ನು ಕುತ್ತಿಗೆಯ ಹಿಂಭಾಗಕ್ಕೆ ಹಚ್ಚಬೇಕು. ಇದರಿಂದ ಉತ್ತಮ ನಿದ್ದೆಗೆ ಬರಲು ಸಹಕಾರಿ.
ಬೇಸಿಗೆಯ ಸಂದರ್ಭದಲ್ಲಿ ಆಗುವಂತಹ ಚರ್ಮದ ಕೆಲವೊಂದು ಸಮಸ್ಯೆಗಳಿಗೆ ಸರಿಯಾದ ಸೂಕ್ತವಾದ ಪರಿಣಾಮವನ್ನು ಬೀರುತ್ತದೆ. ದುಬಾರಿ ಎಣ್ಣೆಯು ಸೌಂದರ್ಯವನ್ನು ಕಾಪಾಡುವಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ.