ವಿವಿಧ ರೀತಿಯ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಭಾರತವು ಹೇರಳವಾಗಿ ಬೆಳೆಯುವ ಒಂದು ಆಹಾರ ಪದಾರ್ಥವೆಂದರೆ ಅದು ತೆಂಗಿನಕಾಯಿ. ಇದು ಭಾರತದ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ತೆಂಗಿನ ಚಿಪ್ಪನ್ನು ಹೊರತುಪಡಿಸಿ ಪ್ರತಿಯೊಂದು ಭಾಗವನ್ನು ಹಲವಾರು ರೀತಿಯಲ್ಲಿ ಬಳಸಲಾಗುತ್ತದೆ. ತೆಂಗಿನ ಚಿಪ್ಪು ಪರಿಸರ ಸ್ನೇಹಿ ಉತ್ಪನ್ನವಾಗಿದ್ದು, ಇದನ್ನು ಚೆನ್ನಾಗಿ ಸಂರಕ್ಷಿಸಿದರೆ ವರ್ಷಗಳವರೆಗೆ ಉಳಿಯುತ್ತದೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವ ಬದಲು, ಕಸದ ಬುಟ್ಟಿಗೆ ಎಸೆಯದೆ ಅನೇಕ ರೀತಿಯಲ್ಲಿ ಬಳಸಲು ಪ್ರಯತ್ನಿಸಬೇಕು.
ಟೇಬಲ್ ಸಸ್ಯಗಳಿಗಾಗಿ ಸಣ್ಣ ಪ್ಲಾಸ್ಟಿಕ್ ಮಡಕೆಗಳನ್ನು ಉಪಯೋಗಿಸುತ್ತಾರೆ . ಆದರೆ ಅದರ ಬದಲು ತೆಂಗಿನ ಚಿಪ್ಪು ಉಪಯೋಗಿಸಿದರೆ ಒಳ್ಳೆಯದು ಏಕೆಂದರೆ ಅದು ಸುಂದರವಾಗಿ ಕಾಣುತ್ತದೆ ಮತ್ತು ನಿಮ್ಮನ್ನು ಪರಿಸರ ಸ್ನೇಹಿ ಸ್ಮಾರ್ಟ್ ನಾಗರಿಕನನ್ನಾಗಿ ಮಾಡುತ್ತದೆ.
ತಯಾರಿಸುವ ಹಂತಗಳು
• ತೆಂಗಿನ ಚಿಪ್ಪನ್ನು ಸ್ವಚ್ಛಗೊಳಿಸುವ ಮೂಲಕ ಪ್ರಾರಂಭಿಸಿ. ಸ್ಯಾಂಡ್ ಪೇಪರ್ ತೆಗೆದುಕೊಳ್ಳಿ ಮತ್ತು ಚಿಪ್ಪನ್ನು ಚೆನ್ನಾಗಿ ಉಜ್ಜಿ, ಅದರ ದರಗುವಿಕೆಯನ್ನು ನುಣುಪಾಗುವಂತೆ ಮಾಡಿ.
• ವಿಶೇಷವಾಗಿ ಚಿಪ್ಪಿನ ಕೆಳಭಾಗವನ್ನು ಸಮತಟ್ಟಾದ ಮೇಲ್ಮೈಯಲ್ಲಿ ಕುಳಿತುಕೊಳ್ಳುವಂತೆ ಮಾಡಿ.
• ಇದನ್ನು ಮಾಡಿದ ನಂತರ, ಹೊರಗಿನ ಮೇಲ್ಮೈಯನ್ನು ನಯಗೊಳಿಸಲು ಅದರ ಮೇಲೆ ಯಾವುದೇ ಎಣ್ಣೆಯನ್ನು ಉಜ್ಜಿ. ನಿಮಗೆ ಬೇಕಾದಂತೆ ಅಲಂಕರಿಸಿ.
• ಚಿಪ್ಪನ್ನು ಮಣ್ಣಿನಿಂದ ತುಂಬಿಸಿ ಮತ್ತು ಒಂದು ಸಸಿಯನ್ನು ನೆಡಿ.
ತೆಂಗಿನ ಚಿಪ್ಪಿನಲ್ಲಿ ಹೇರ್ ಆಯಿಲ್ ಸಂಗ್ರಹಿಸಿ
ನಾವೆಲ್ಲರೂ ನಮ್ಮ ನೆತ್ತಿಯ ಮೇಲೆ ಅತ್ಯಂತ ಪೌಷ್ಠಿಕವಾದ ಕೂದಲಿನ ಎಣ್ಣೆಗಳನ್ನು ಬಳಸಲು ಬಯಸುವುದಿಲ್ಲವೇ!
ಮನೆಯಲ್ಲಿ ತಯಾರಿಸಿದ ಹೇರ್ ಆಯಿಲ್ ಗಳನ್ನು ತಯಾರಿಸಲು ಸಾಧ್ಯವಾಗದಿದ್ದರೆ ಮತ್ತು ಅಂಗಡಿಯಿಂದ ಖರೀದಿಸಿದವುಗಳನ್ನು ಮತ್ತೆ ಅದೇ ಪ್ಲಾಸ್ಟಿಕ್ ಬಾಟಲ್ನಲ್ಲಿ ಇಡುತ್ತೇವೆ. ಆದರೆ ಅದೇ ಎಣ್ಣೆಯನ್ನು ತೆಂಗಿನ ಚಿಪ್ಪಿನಲ್ಲಿ ಇಡುವುದರಿಂದ ಎಣ್ಣೆಗೆ ಪೌಷ್ಠಿಕಾಂಶವನ್ನು ಸೇರಿಸಲು ನಿಮಗೆ ಸಹಾಯ ಮಾಡುತ್ತದೆ.
ತಯಾರಿಸುವ ಹಂತಗಳು
• ಸಾಮಾನ್ಯವಾಗಿ ನಾವೆಲ್ಲರೂ ವಾರಾಂತ್ಯದಲ್ಲಿ ತಲೆಗೆ ಮಸಾಜ್ ಮಾಡುತ್ತೇವೆ. ಆದ್ದರಿಂದ ಅದರ ಹಿಂದಿನ ರಾತ್ರಿ ಅರ್ಧ ಕಪ್ ಹೇರ್ ಆಯಿಲ್ (ತೆಂಗಿನೆಣ್ಣೆ ಅಲ್ಲ) ತೆಗೆದುಕೊಂಡು ಚಿಪ್ಪಿನಲ್ಲಿ ಸುರಿಯಿರಿ.
• ಸ್ವಚ್ಛವಾದ ಹತ್ತಿ ಬಟ್ಟೆಯಿಂದ ಅದನ್ನು ಮುಚ್ಚಿ ರಾತ್ರಿಯಿಡೀ ಬಿಡಿ.
• ಮರುದಿನ ಬೆಳಿಗ್ಗೆ, ನಿಮ್ಮ ತೆಂಗಿನ ಚಿಪ್ಪನ್ನು ಇದ್ದಿಲಿನ/ಕಟ್ಟಿಗೆ ಒಲೆ ಮೇಲೆ ಲಘುವಾಗಿ ಬಿಸಿ ಮಾಡಿ.
• ಎಣ್ಣೆ ಬಿಸಿಯಾದ ನಂತರ, ನಿಮ್ಮ ನೆತ್ತಿಯನ್ನು ಅದರಿಂದ ಮಸಾಜ್ ಮಾಡಿ