ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಗೆ ಭೇಟಿ ನೀಡಲು ಬಯಸುವವರಿಗೆ ಇದು ತುಂಬಾ ಉಪಯುಕ್ತವಾದ ಮಾಹಿತಿ ಇಲ್ಲಿದೆ ನೋಡಿ. ಹೊಸ ದೇವಸ್ಥಾನದ ಗರ್ಭಗುಡಿಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಆದ ನಂತರ ಪ್ರತಿದಿನ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆಯಿದೆ. ಅದಕ್ಕಾಗಿಯೇ ಭಕ್ತಾದಿಗಳ ವಸತಿಗಾಗಿ ಹಲವು ಬಗೆಯ ಹೋಟೆಲ್ ಗಳನ್ನೂ ಅಲ್ಲಿ ನಿರ್ಮಿಸಲಾಗುತ್ತಿದೆ.
ಅಯೋಧ್ಯೆಯ ಐದು ವಿಶೇಷ ಹೋಟೆಲ್ಗಳ ಸಂಪೂರ್ಣ ವಿವರಗಳು ಇಲ್ಲಿವೆ.
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅಯೋಧ್ಯೆಯ ಚಿತ್ರಣವನ್ನೇ ಬದಲಿಸಿದೆ. ಸುಪ್ರೀಂ ಕೋರ್ಟ್ ರಾಮ ಜನ್ಮಭೂಮಿ ಪರವಾಗಿ ತೀರ್ಪು ನೀಡಿದ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಬರದಿಂದ ಪ್ರಾರಂಭವಾಗಿದೆ. ದೇವಾಲಯದ ನಿರ್ಮಾಣ ಶುರುವಾದ ನಂತರ ಭಕ್ತರ ಸಂಖ್ಯೆಯು ಬಹಳ ಹೆಚ್ಚಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಅಯೋಧ್ಯೆಯಲ್ಲಿ ಭಕ್ತರಿಗೆ ದೊರಕಬೇಕಾದ ಮೂಲಸೌಕರ್ಯ ವ್ಯವಸ್ಥೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ದೇವಸ್ಥಾನ ಸಿದ್ಧವಾಗುತ್ತಿದ್ದಂತೆ ಅಲ್ಲಿಗೆ ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ಸಾವಿರಾರು ಭಕ್ತರು ಬೇರೆ- ಬೇರೆ ರಾಜ್ಯದಿಂದ ಅಲ್ಲಿಗೆ ಆಗಮಿಸಲಿದ್ದಾರೆ. ಅವರಿಗೆ ಉಳಿದುಕೊಳ್ಳಲು ಅತ್ಯುತ್ತಮವಾದ ಹೋಟೆಲ್ಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.
ರಾಮಾಯಣಂ : ರಾಷ್ಟ್ರೀಯ ಹೆದ್ದಾರಿ ಬೂತ್ ಸಂಖ್ಯೆ 4 ರಲ್ಲಿ ನೀವು ಹೋಟೆಲ್ ರಾಮಾಯಣಂ ಕಾಣಬಹುದು. ಇದು ಒಟ್ಟು 55 ಕೊಠಡಿಗಳನ್ನು ಹೊಂದಿದ್ದು, ನೀವು ಇಲ್ಲಿ ಉಳಿಯಲು ಬಯಸಿದರೆ, ಪ್ರತಿ ಕೋಣೆಗೆ 5,000 ಸಾವಿರ ರೂಪಾಯಿಗಳಿಂದ 15,000 ಸಾವಿರ ರೂಪಾಯಿಗಳವರೆಗೆ ಐಷಾರಾಮಿ ಕೊಠಡಿಗಳಿವೆ. ಹೆಚ್ಚಿನ ಮಾಹಿತಿಗಾಗಿ ನೀವು ಈ ಸಂಖ್ಯೆಗೆ ಕರೆ ಮಾಡಿ 6386901835.
ತಾರಾ ಜಿ ರೆಸಾರ್ಟ್ : ಅಯೋಧ್ಯೆಗೆ ಶ್ರೀರಾಮನ ದರ್ಶನಕ್ಕೆ ಬರುವವರಿಗೆ ಅಯೋಧ್ಯೆ-ಫೈಜಾಬಾದ್ ನಡುವಿನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ತಾರಾ ಜಿ ರೆಸಾರ್ಟ್ಗೆ ಉಳಿದುಕೊಳ್ಳಲು ಉತ್ತಮ ಆಯ್ಕೆಯಿದೆ. ನೀವು ಇಲ್ಲಿ ಉಳಿಯಲು ಬಯಸಿದರೆ ವಿವಿಧ ಸೌಕರ್ಯಗಳನ್ನು ಹೊಂದಿರುವ ಕೊಠಡಿಗಳಿಗೆ 2600, 2800 ಮತ್ತು 6500 ರೂಪಾಯಿಯವರೆಗೆ ಸಿಗುತ್ತವೆ. ಹೋಟೆಲ್ ಒಟ್ಟು 38 ಕೊಠಡಿಗಳನ್ನು ಹೊಂದಿದೆ. ಹೋಟೆಲ್ನಲ್ಲೇ ಊಟದ ಸೌಲಭ್ಯವನ್ನು ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನೀವು ಈ ಸಂಖ್ಯೆ 7311160000 ಗೆ ಕರೆ ಮಾಡಬಹುದು.
ಕೃಷ್ಣಾ ಪ್ಯಾಲೇಸ್ : ನೀವು ಸಹದ್ಗಂಜ್ ಬೈಪಾಸ್ನಿಂದ ಫೈಜಾಬಾದ್ ಮೂಲಕ ಅಯೋಧ್ಯಾ ಧಾಮದ ಕಡೆಗೆ ಹೊರಟಾಗ ಕೃಷ್ಣ ಪ್ಯಾಲೇಸ್ ಹೋಟೆಲ್ ಕಾಣಬಹುದು. ಇಲ್ಲಿ 91 ಕೊಠಡಿಗಳಿವೆ. 3,000 ರಿಂದ 7,450 ರೂ. ವರೆಗೆ ಕೊಠಡಿಗಳು ಲಭ್ಯವಿದೆ. ವಸತಿ ಜೊತೆಗೆ ಊಟ, ಟಿಫಿನ್ ಕೂಡ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆ 05278221367 ಗೆ ಕರೆ ಮಾಡಿ.
ಪಂಚಶೀಲ : ಹೋಟೆಲ್ ಪಂಚಶೀಲಾ ಫೈಜಾಬಾದ್ ಮತ್ತು ಅಯೋಧ್ಯೆ ನಡುವಿನ ದಿಯೋಕಾಲಿ ಬೈಪಾಸ್ನಲ್ಲಿದೆ. ಈ ರೆಸ್ಟೋರೆಂಟ್-ಕಮ್-ಲಾಡ್ಜ್ 32 ಕೊಠಡಿಗಳನ್ನು ಹೊಂದಿದೆ. 2000 ರಿಂದ 6500 ಪ್ರತಿ ಬಾಡಿಗೆಗೆ. ಇಲ್ಲಿ ವಸತಿ ಜೊತೆಗೆ ಆಹಾರವೂ ದೂರಕುವುದು. ಭೇಟಿ ನೀಡಲು ಬಯಸುವವರು ಈ ಸಂಖ್ಯೆಗೆ 998407400 ಗೆ ಕರೆ ಮಾಡಬಹುದು.
ಸರಯೂ ಅತಿಥಿ ಗೃಹ : ರಾಮಕಥಾ ಪಾರ್ಕ್ ಬಳಿ ಸರಯೂ ಅತಿಥಿ ಗೃಹವಿದೆ. ಈ ಹೋಟೆಲ್ 12 ಕೊಠಡಿಗಳನ್ನು ಹೊಂದಿದೆ. 1500 ರಿಂದ 4500 ಕೊಠಡಿಗಳ ಸೌಲಭ್ಯವಿವೆ. ಊಟ, ಟಿಫಿನ್ ಕೂಡ ಲಭ್ಯ. ಯಾವುದೇ ಮಾಹಿತಿಗಾಗಿ 9415609449 ಈ ಸಂಖ್ಯೆಗೂ ಸಂಪರ್ಕಿಸಬಹುದು.