ನಾವು ಯಾವಾಗಲೂ ಹೆಚ್ಚು ಆಹಾರ ಸೇವನೆ ಮಾಡಿದ ನಂತರದಲ್ಲಿ ಮೊದಲು ಹೋಗಿ ಸ್ವಲ್ಪ ಹೊತ್ತು ಮಲಗಿಕೊಳ್ಳಬೇಕು ಎನಿಸಿಬಿಡುತ್ತದೆ. ಏಕೆಂದರೆ ಅಷ್ಟರಮಟ್ಟಿಗೆ ನಮಗೆ ಒಂದು ರೀತಿ ಅಸಹಜ ಅನುಭವ ಉಂಟಾಗಿರುತ್ತದೆ. ಎದೆಯುರಿ, ಹುಳಿತೇಗು ಕಂಡುಬರುವ ಸಾಧ್ಯತೆ ಕೂಡ ಇರುತ್ತದೆ. ಇತ್ತೀಚಿನ ಯುವ ಜನತೆ ಈ ಸಮಸ್ಯೆಗಳನ್ನು ಪದೇಪದೇ ಹೇಳುತ್ತಿರುತ್ತಾರೆ. ಆದರೆ ಏಕೆ ಹೀಗಾಗುತ್ತದೆ ಎಂಬುದನ್ನು ಮಾತ್ರ ತಿಳಿದುಕೊಳ್ಳಲು ಹೋಗುವುದಿಲ್ಲ.
ಆರೋಗ್ಯಕರವಾದ ಜೀರ್ಣ ಶಕ್ತಿ ಇಲ್ಲದಿದ್ದರೆ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ನಾವು ಸೇವಿಸುವ ಆಹಾರ ಚೆನ್ನಾಗಿ ಜೀರ್ಣವಾಗಲು ಹೊಟ್ಟೆಯ ಭಾಗದಲ್ಲಿ ಆಮ್ಲದ ಉತ್ಪತ್ತಿ ಆಗುತ್ತದೆ. ಇದು ಮೇಲ್ಭಾಗಕ್ಕೆ ಅಂದರೆ ಎದೆಯ ಭಾಗಕ್ಕೆ ಚಲಿಸಿದಾಗ ಎದೆಯುರಿ ಕಾಣಿಸಿಕೊಳ್ಳುತ್ತದೆ.
ಊಟ ಆದ ತಕ್ಷಣದಲ್ಲಿ ತುಂಬಾ ಜನರಿಗೆ ಈ ರೀತಿ ಅನಿಸುತ್ತದೆ. ಆದರೆ ಕೆಲವರಿಗೆ ಈ ಸಂದರ್ಭದಲ್ಲಿ ಎದೆ ಊರಿ ಜೊತೆಗೆ ಹುಳಿತೇಗು ಕೂಡ ಕಂಡುಬರುತ್ತದೆ. ಬಾಯಿ ಕಹಿ ಆದಂತಹ ಅನುಭವ ಕೂಡ ಆಗುತ್ತದೆ. ನಮ್ಮ ಹೊಟ್ಟೆಯ ಭಾಗ ಡಯಾಫ್ರಮ್ ಮಾಂಸ ಖಂಡ ಗಳ ಮೂಲಕ ಎದೆಯ ಭಾಗಕ್ಕೆ ಒತ್ತಿದಾಗ ಈ ಸಮಸ್ಯೆ ಕಂಡು ಬರುತ್ತದೆ.
ಊಟ ಆದ ನಂತರದಲ್ಲಿ ಎದೆ ಉರಿ ಕಂಡು ಬರಲು ಇದೇ ಪ್ರಮುಖ ಕಾರಣವಾಗಿರುತ್ತದೆ. ತುಂಬಾ ಜನರಿಗೆ ಇದು ಪದೇ ಪದೇ ಆಗುತ್ತದೆ. ನಮ್ಮ ಜೀವನ ಶೈಲಿಯ ಸರಿಯಿಲ್ಲದ ಕಾರಣದಿಂದ ಅಥವಾ ತೆಗೆದುಕೊಳ್ಳುವ ಔಷಧಿಗಳ ಅಡ್ಡ ಪರಿಣಾಮಗಳಿಂದ ಈ ರೀತಿ ಉಂಟಾಗುತ್ತದೆ.
ಔಷಧಿಗಳ ಮೂಲಕ ಇದನ್ನು ಸರಿಪಡಿಸಬಹುದು ಅನ್ನಲಾಗುತ್ತದೆ ಆದರೆ ಕೆಲವರಿಗೆ ಇದು ಸರಿ ಹೋಗುವುದಿಲ್ಲ. ಮಸಾಲೆ ಪದಾರ್ಥಗಳನ್ನು ಒಳಗೊಂಡ ಆಹಾರಗಳನ್ನು ಸೇವಿಸಿದಾಗ ನಮ್ಮ ದೇಹ ಬಿಸಿಯಾಗುತ್ತದೆ. ಆಗ ಎದೆಯುರಿ ಕಂಡುಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ತುಂಬಾ ವೇಗವಾಗಿ ಈ ಅನುಭವ ಉಂಟಾಗುವುದರಿಂದ ಬಾಯಿಯಲ್ಲಿ ಸಹ ಉರಿ ಕಂಡು ಬರುತ್ತದೆ ಮತ್ತು ಹೊಟ್ಟೆ ನೋವು ಜೊತೆಗೆ ಗ್ಯಾಸ್ಟ್ರಿಕ್ ಸಹ ಉಂಟಾಗುತ್ತದೆ.
ಇಂತಹ ಸಂದರ್ಭದಲ್ಲಿ ತಣ್ಣಗಿರುವ ಹಾಲು, ಐಸ್, ಡೈರಿ ಉತ್ಪನ್ನ ಗಳನ್ನು ಸೇವನೆ ಮಾಡಿದರೆ ಅದು ನಿಮ್ಮ ಹೊಟ್ಟೆ ಆರೋಗ್ಯ ವನ್ನು ಕಾಪಾಡಲು ಸಹಾಯ ಮಾಡುತ್ತದೆ. ಕೆಲವೊಂದು ಮನೆ ಮದ್ದುಗಳನ್ನು ಸಹ ಟ್ರೈ ಮಾಡಬಹುದು. ದೈಹಿಕವಾಗಿ ಹೆಚ್ಚು ಚಟುವಟಿಕೆಯಿಂದ ಕೂಡಿದರೆ ಒಳೆತು. ಒಂದು ವೇಳೆ ಇದೇ ರೀತಿ ರೋಗ ಲಕ್ಷಣಗಳು ಮುಂದುವರೆದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಔಷಧಿಯನ್ನು ಪಡೆದುಕೊಳ್ಳುವುದು ಉತ್ತಮ.
ಊಟ ಮಾಡಿದ ತಕ್ಷಣ ಮಲಗಿಕೊಳ್ಳಬಾರದು. ಬಹಳಷ್ಟು ಜನರಿಗೆ ಇದೊಂದು ಅಭ್ಯಾಸವಾಗಿದೆ. ನಿಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಕಡಿಮೆ ಆಗುವಂತೆ ಮಾಡುತ್ತದೆ. ಇದರ ನಂತರದಲ್ಲಿ ನಿಮ್ಮ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲ ನಿಮ್ಮ ಎದೆಯ ಭಾಗಕ್ಕೆ ಚಲಿಸಲು ಮುಂದಾಗುತ್ತದೆ. ಇದರಿಂದ ನಿಮಗೆ ಎದೆಯುರಿ ಕಾಣಿಸುತ್ತದೆ. ಊಟ ಆದ ಮೇಲೆ ವಾಕಿಂಗ್ ಮಾಡಬೇಕು. ಕನಿಷ್ಠ ಅರ್ಧ ಕಿಲೋಮೀಟರ್ ನಿಧಾನವಾಗಿ ನಡೆದರೆ ಸಾಕು.
ಇದರಿಂದ ನಿಮ್ಮ ಬ್ಲಡ್ ಶುಗರ್ ಲೆವೆಲ್ ಕೂಡ ಉತ್ತಮ ಗೊಳ್ಳುತ್ತದೆ ಜೊತೆಗೆ ಜೀರ್ಣಶಕ್ತಿ ಹೆಚ್ಚಾಗುತ್ತದೆ ಹಾಗೂ ನಿಮ್ಮ ಸಂಪೂರ್ಣ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಐದು ನಿಮಿಷಗಳ ಕಾಲ ವಜ್ರಾಸನ ಮಾಡದ್ದರು ಸಾಕಾಗುತ್ತದೆ. ಐದು ನಿಮಿಷಗಳ ಕಾಲ ವಜ್ರಾಸನ ಭಂಗಿಯಲ್ಲಿ ಊಟ ಆದ ನಂತರದಲ್ಲಿ ಕುಳಿತುಕೊಳ್ಳುವುದರಿಂದ ನೀವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.
ನಿಮ್ಮ ದೇಹದ ಹೆಚ್ಚಿನ ತೂಕವನ್ನು ಕಡಿಮೆ ಮಾಡಿ ಕೊಳ್ಳಲು ನೀವು ಉತ್ತಮವಾದ ಆಹಾರ ಪದ್ಧತಿಯನ್ನು ಹೊಂದಿದರೆ ಅದರಿಂದ ಎದೆಯುರಿ ಸಮಸ್ಯೆ ಸಾಕಷ್ಟು ಕಡಿಮೆಯಾಗುತ್ತದೆ.
ನಿಮ್ಮ ಆರೋಗ್ಯ ತಜ್ಞರಿಂದ ಮಾಹಿತಿ ಪಡೆದು ನಿಮ್ಮ ಜೀವನ ಶೈಲಿಯಲ್ಲಿ ಸಹ ಬದಲಾವಣೆಯನ್ನು ತಂದು ಕೊಳ್ಳುವುದು ಉತ್ತಮ. ತಾತ್ಕಾಲಿಕವಾಗಿ ಪರಿಹಾರ ಬೇಕು ಎಂದರೆ ಮಾತ್ರೆಗಳನ್ನು ಸೇವಿಸಬಹುದಾಗಿದೆ.