ಕುಟುಂಬದ ಆಧಾರ ಸ್ತಂಭವಾಗಿರುವ ಮಹಿಳೆಯರು ತಮ್ಮ ಜೀವನದ ಎಲ್ಲಾ ಹಂತಗಳಲ್ಲಿಯೂ ಪೋಷಕಾಂಶ ಭರಿತ ಉತ್ತಮ ಆಹಾರಗಳನ್ನು ಸೇವಿಸಬೇಕು. ನಿಜ ಹೇಳಬೇಕು ಎಂತಾದರೆ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಪ್ರೋಟೀನ್ ವಿಟಮಿನ್ ಇರುವ ಆಹಾರಗಳನ್ನು ಸೇವಿಸಬೇಕಾಗುತ್ತದೆ.
ಮನೆ ಜವಾಬ್ದಾರಿ ಹಾಗೂ ವೃತ್ತಿ ಜೀವನದ ಕೆಲಸಗಳಲ್ಲಿ ತೊಡಗಿರುವ ಮಹಿಳೆಯರು, ತಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ ಪೌಷ್ಟಿಕಾಂಶಯುತ ಆಹಾರವನ್ನು ಸೇವಿಸಬೇಕಾಗುತ್ತದೆ.
ಹದಿಹರಿಯದ ಹೆಣ್ಣು ಮಕ್ಕಳಿಗೆ ಕಬ್ಬಿಣ ಮತ್ತು ಪೋಲಿಕ್ ಆಮ್ಲದಂತಹ ಹೆಚ್ಚಿನ ಪೋಷಕಾಂಶಗಳ ಅಗತ್ಯವಿರುತ್ತದೆ. ಗರ್ಭಿಣಿಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳ ಅಗತ್ಯವಿರುತ್ತದೆ. ಗರ್ಭಧಾರಣೆಯ ಮೊದಲು ಮತ್ತು ಗರ್ಭ ಧರಿಸಿದ ಬಳಿಕ ಉತ್ತಮ ಪಾಲಿಕ್ ಅಗತ್ಯವಿರುತ್ತದೆ. ಹಾಲುಣಿಸುವ ಅಮ್ಮಂದಿರಿಗೆ ಆರೋಗ್ಯಕರ ಎದೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲು ಗ್ಯಾಲಿಕ್ಟಗೋಸ್ಟ್ ಎಂದು ಕರೆಯಲ್ಪಡುವ ಕೆಲವು ಆಹಾರಗಳ ಅಗತ್ಯವಿರುತ್ತದೆ. ಇಂತಹ ಸಮಯದಲ್ಲಿ ಮಹಿಳೆಯಾದವಳು ಕ್ಯಾಲ್ಸಿಯಂ ಭರಿತ ಆಹಾರಗಳ ಸೇವನೆಯ ಮೇಲೆ ಹೆಚ್ಚು ಗಮನ ಹರಿಸಬೇಕು.
ವ್ಯರ್ಥ ಮಾಡಬಾರದೆಂಬ ಕಾರಣಕ್ಕೆ ಮನೆಯವರು ಬಿಟ್ಟ ಊಟವನ್ನು ಸೇವಿಸಿ ಸುಮ್ಮನಾಗುವರು ಈ ಮಹಿಳೆಯರು. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳೆಯರಿಗೆ ತಮ್ಮ ಆರೋಗ್ಯದ ಬಗ್ಗೆ ಯಾವುದೇ ಯೋಚನೆ ಇರುವುದಿಲ್ಲ.
ಸಾಮಾನ್ಯವಾಗಿ ಪ್ರತಿದಿನ ಒಬ್ಬ ಮಹಿಳೆ ದಿನಕ್ಕೆ ಕನಿಷ್ಠ 1.600 ಕ್ಯಾಲೋರಿಗಳು ಮತ್ತು 50 ಗ್ರಾಂ ಪ್ರೋಟಿನ್ ಅನ್ನು ಸೇವಿಸಬೇಕಾಗುತ್ತದೆ. ಇದರ ಜೊತೆಜೊತೆಗೆ ದಿನದ 30 ನಿಮಿಷಗಳ ಕಾಲ ವ್ಯಾಯಾಮವನ್ನು ತನ್ನ ದೇಹಕ್ಕೆ ಮಹಿಳೆಯಾದವಳು ನೀಡಬೇಕಾಗುತ್ತದೆ. ಮಹಿಳೆಯ ಸೇವಿಸುವ ಆಹಾರದಲ್ಲಿ 30% ಗಿಂತ ಕಡಿಮೆ ಕೊಬ್ಬಿನಂಶ ಇರುವ ಆಹಾರವನ್ನು ಸೇವನೆ ಮಾಡಬೇಕಾಗುತ್ತದೆ.
ಆಹಾರದಲ್ಲಿ ತರಕಾರಿಗಳು ಹಣ್ಣುಗಳು ಮತ್ತು ಧಾನ್ಯಗಳು ಹೆಚ್ಚಾಗಿರಬೇಕು. ಕಬ್ಬಿಣಾಂಶವುಳ್ಳ ಆಹಾರಗಳಾದ ಹಸಿರು ಎಲೆಗಳು, ತರಕಾರಿಗಳು, ಕಿತ್ತಳೆ ರಸ, ಚಿಕನ್ ಸೇವನೆಯನ್ನು ಮಹಿಳೆ ಸೇವಿಸಬೇಕಾಗುತ್ತದೆ.ಕ್ಯಾಲ್ಸಿಯಂ ನೊಂದಿಗೆ ವಿಟಮಿನ್ ಡಿ ಇರುವ ಮೀನು, ಅಣಬೆ, ಧಾನ್ಯಗಳ ಸೇವನೆಯನ್ನು ಕೂಡ ಅತಿಯಾಗಿ ಸೇವಿಸುತ್ತಿರಬೇಕು. ಒಟ್ಟಿನಲ್ಲಿ ಋತುಮತಿ, ಗರ್ಭಿಣಿ ಆಗಿ ಕಷ್ಟಪಡುವ ಮಹಿಳೆ ಒಳ್ಳೆಯ ಪೋಷಕಾಂಶ ಭರಿತ ಆಹಾರ ತಿಂದು ಉತ್ತಮ ಜೀವನ ನಡೆಸಬೇಕು.