ಈಗೀನ ಕಾಲದಲ್ಲಿ ಎಲ್ಲರೂ ದುಡಿಲೇ ಬೇಕು ಎನ್ನುವ ಅನಿವಾರ್ಯತೆ ಆದರಿಂದ ಯಾರು ಕೆಲಸದಿಂದ ಸುಮ್ಮನೆ ಕೂರಲು ಸಾಧ್ಯವಿಲ್ಲ. ಹಾಗಾಗಿ ತಾವು ದುಡಿಯುವ ಸಂಸ್ಥೆಯು ಯಾವ ಶಿಫ್ಟ್ ಕೊಟ್ಟರು ಕೆಲಸ ಮಾಡಲೇ ಬೇಕು.
ಭಾರದಲ್ಲಿ ರಾತ್ರಿ ಪಾಳಿ ಕೆಲಸಕ್ಕೆ ಜೀವ ಬಂದಿದದ್ದು ದೊಡ್ಡ ಮಲ್ಟಿನ್ಯಾಶನಲ್ ಕಂಪೆನಿಗಳಿAದ. ಅದರಲ್ಲೂ ವಿದೇಶಿ ಬೆಸ್ಡ್ ಕಂಪೆನಿಗಳು. ಒಂದು ದಿನದಲ್ಲಿ ಹಲವಾರು ಶಿಫ್ಟ್ ಗಳು.
ಇವು ರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ನಿದ್ದೆಕೆಟ್ಟು ನಿರಂತರವಾಗಿ ಒಂದೇ ಜಾಗದಲ್ಲಿ ಕೂತು ಕೆಲಸವನ್ನು ಮಾಡಬೇಕಾಗುತ್ತದೆ.ಒಂದೆಡೆ ಕಾಡುವ ನಿದ್ದೆ, ತಾಳ್ಮೆ ಪರೀಕ್ಷೆ ಮಾಡಬಹುದು. ಕೆಲವರು ರಾತ್ರಿ ಪಾಳಿ ಕೆಲಸ ಮಾಡುವವರು ಸರಿಯಾದ ಸಮಯದ ಪರಿಪಲಾನೆ ಮಾಡುವುದಿಲ್ಲ ಆದ್ದರಿಂದ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಾಗಿ ಬೊಜ್ಜಿನ ಸಮಸ್ಯೆ ಹಾಗೂ ಹೃದಯ ಸಂಬAದಿ ಕಾಯಿಲೆಗಳು, ಮಧುಮೇಹಕ್ಕೆ ದಾರಿ ಮಾಡಿಕೊಡುತ್ತದೆ.ಕಣ್ಣಿನ ಸುತ್ತ ಡಾರ್ಕ್ ಸರ್ಕಲ್, ನಿದ್ರಾಹೀನತೆಯಿಂದ ದೇಹವು ಉಲ್ಲಾಸವನ್ನು ಕಳೆದುಕೊಳ್ಲುತ್ತದೆ. ಇನ್ನು ಕೆಲವರಿಗೆ ಪಿತ್ತದ ಸಮಸ್ಯೆ ಹೆಚ್ಚಾಗಬಹದು.
ರಾತ್ರಿ ಪಾಳಿಯಲ್ಲಿ ಕೆಲಸವನ್ನು ಮಾಡುವವರು ಒಂದು ದಿನಚರಿಯನ್ನು ಅನುಸರಿಸಬೇಕು. ಎಂಟು ಗಂಟೆ ಸರಿಯಾಗಿ ನಿದ್ದೆ. ದಿನವಿಡಿ ಸಮಯ ಸಿಕ್ಕಾಗೆಲ್ಲ ನೀರನ್ನು ಪದೆ ಪದೆ ಕುಡಿಯುವುದು ಉತ್ತಮ. ಆಹಾರವನ್ನು ಸರಿಯಾದ ಸಮಯಕ್ಕೆ ತೆಗೆದು ಕೊಳ್ಳುವುದು ಕೂಡ ಅಗತ್ಯ. ಯಾವುದೇ ಕಾರಣಕ್ಕೂ ಬೆಳಿಗ್ಗಿನ ಸಮಯದಲ್ಲಿ ಮಲಗಬಾರದು.
ಸರಳ ವಾಗಿ ಹೇಳುವುದದರೆ ಊಟ , ನೀರು , ನಿದ್ದೆ ಈ ಮೂರು ಮಂತ್ರವನ್ನು ಸರಿಯಾದ ಕ್ರಮದಲ್ಲಿ ವ್ಯಕ್ತಿಯು ಅನುಸರಿಸಬೇಕು. ಕೆಲಸವನ್ನು ಯಾವುದೇ ಅಡೆ ತಡಗಳಿಲ್ಲದೆ ಸುಲಭವಾಗಿ ಮಾಡಬಹದು.