ನೃತ್ಯ ಮಾಡುವ ಕಲೆ ಎಲ್ಲರಿಗೂ ಒಲಿದು ಬರುವುದಿಲ್ಲ. ಈ ಪ್ರತಿಭೆಯು ಒಂದು ವೇಳೆ ನಮಗೆ ಕಲೆಯಾಗಿ ಬಂದರೆ ನಾವು ಅದೃಷ್ಟವಂತರೇ ಸರಿ.
ಸಭೆಯಲ್ಲಿ ನೃತ್ಯ ಮಾಡುವುದು ಒಂದು ಪ್ರತಿಭೆ. ಆದರೆ ನಮ್ಮಷ್ಟಕ್ಕೆ ನಾವು ಒಂದು ಸಮಯದವರೆಗೆ ನೃತ್ಯ ಮಾಡುವುದರಿಂದ ನಮ್ಮ ಆರೋಗ್ಯದ ವಿಷಯದಲ್ಲಿ ಹಲವಾರು ಲಾಭಗಳಿವೆ. ದೇಹದ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ, ರಕ್ತದ ಒತ್ತಡ ಸಮಸ್ಯೆಗೆ ಪರಿಹಾರ ಹಾಗೂ ದಿನನಿತ್ಯದಲ್ಲಿ ಹೆಚ್ಚು ಕ್ರಿಯಾಶೀಲರಾಗಿರಲು ಇದು ಸಹಾಯಕವಾಗಿರುತ್ತದೆ.
ನೃತ್ಯ ಮಾಡುವುದರಿಂದ ವಾಸ್ತವವಾಗಿ ಕೊಬ್ಬು ಕರಗಿಸಲು ಸಹಾಯಕವಾಗುತ್ತದೆ. ಒಂದು ಗಂಟೆ ನೃತ್ಯ ಮಾಡುವುದರಿಂದ 500 ಕ್ಯಾಲೋರಿ ಕರಗಿಸಬಹುದಾಗಿದೆ. ನೃತ್ಯದ ಮೂಲಕ ನಾವು ಹೆಚ್ಚಿನ ತೂಕವನ್ನು ಕಳೆದುಕೊಳ್ಳಬಹುದು.
ನೃತ್ಯದಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ ಡಾನ್ಸ್ ಅಥವಾ ನೃತ್ಯಭಂಗಿಗಳಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಮೂಳೆಗಳು ಬಲಿಷ್ಟವಾಗುತ್ತವೆ. ಜೊತೆಗೆ ಕಾಲು ನೋವು, ಬೆನ್ನಿನ ಉರಿ ಭಾಗ, ಸಂಧಿ ನೋವುಗಳಿಂದ ಪರಿಹಾರವಾಗುತ್ತದೆ. ಆರೋಗ್ಯದ ಸಮತೋಲನಕ್ಕೆ ಪೂರಕ ಕೂಡ ಹೌದು.
ನೃತ್ಯದಲ್ಲಿ ಅನೇಕ ವಿಧಗಳಿವೆ ಆದರೆ ಅದೆಲ್ಲ ಡಾನ್ಸರ್ ಗಳು ಸ್ಟೇಜ್ ನಲ್ಲಿ ಮಾಡಿ ಅವರ ಪ್ರತಿಭೆಯನ್ನು ತೋರ್ಪಡಿಸಲು ಇರುವ ಸಾಧನಗಳಾಗಿವೆ, ಆದರೆ ಸಾಮಾನ್ಯ ನೃತ್ಯವನ್ನು ನಾವು ಮನೆಯಲ್ಲಿ ಮಾಡುವುದರಿಂದ ಈ ಮೇಲಿನ ಆರೋಗ್ಯ ಪ್ರಯೋಜನವನ್ನು ಪಡೆಯಬಹುದಾಗಿದೆ.