ಪ್ರತಿದಿನ ಹತ್ತಾರು ಸ್ಪ್ಯಾಮ್ ಕಾಲ್ಸ್, ಮೆಸೇಜ್ ಗಳು ಮೊಬೈಲ್ ಗೆ ಬರುತ್ತಲೇ ಇರುತ್ತವೆ. ಅವುಗಳನ್ನು ಸ್ಪ್ಯಾಮ್ ಎಂದು ತಿಳಿಯದೆ ನಮ್ಮ ಕ್ರೆಡಿಟ್ ಕಾರ್ಡ್, ಒಟಿಪಿ ಸಂಖ್ಯೆಗಳನ್ನು ಕೊಟ್ಟು ಮೋಸ ಹೋಗುವವರನ್ನು ನಾವು ಈಗಲೂ ನೋಡುತ್ತಿರುತ್ತೇವೆ. ನಾವು ಈ ರೀತಿಯ ವಂಚನೆಗಳಿಗೆ ಒಳಗಾಗಬಾರದು ಅಂದ್ರೆ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ..
• ನಿಮ್ಮ ಕಾರ್ಡ್ ಮಾಹಿತಿಯನ್ನು ಇ-ಮೇಲ್ ಮೂಲಕವೋ, ಮೆಸೇಜ್- ಕಾಲ್ ಮೂಲಕವೋ ಹಂಚಿಕೊಳ್ಳಬೇಡಿ.
• ಪ್ರತಿ ತಿಂಗಳು ನಿಮ್ಮ ಖರ್ಚಿನ ಲಿಮಿಟ್ ಅನ್ನು ಕಾರ್ಡ್ ನೊಂದಿಗೆ ನೋಂದಾಯಿಸಿ. ಅದಕ್ಕಿಂತ ಹೆಚ್ಚಾದರೆ ತಾನಾಗಿಯೇ ಪೇಮೆಂಟ್ ನಿರಾಕರಿಸಲಿದೆ.
• ಅಂತಾರಾಷ್ಟ್ರೀಯ ವಹಿವಾಟುಗಳನ್ನು ಆದಷ್ಟು ಕಡಿಮೆ ಮಾಡಿ. ಮೋಸ ಹೋಗುವ ಸಾಧ್ಯತೆಯೇ ಹೆಚ್ಚು.
• ಗೊತ್ತಿಲ್ಲದ ಅನಧಿಕೃತ ವೆಬ್ ಸೈಟ್ಸ್ ಗಳ ಮೂಲಕ ಶಾಪಿಂಗ್ ಮಾಡಬೇಡಿ.
• ಫ್ರೀ ವೈಫೈ ಸಿಗುತ್ತೆ ಅಂತ ಎಲ್ಲೆಂದರಲ್ಲಿ ಕನೆಕ್ಟ್ ಮಾಡಿಕೊಂಡು ಆನ್ ಲೈನ್ ವ್ಯವಹಾರ ಮಾಡದಿರಿ.
• ನಿಮ್ಮ ಕಾರ್ಡ್ ಪಿನ್ ಅನ್ನು ಯಾರಿಗೂ ತಿಳಿಸಬೇಡಿ.
• ಮೆಸೇಜ್ ಮೂಲಕ ನಿಮಗೆ ಬರುವ ನಕಲಿ ಬಹುಮಾನದ ಮೇಸೇಜ್ ಲಿಂಕ್ ಗಳನ್ನು ಒತ್ತಬೇಡಿ.