ಬೀಟ್ರೂಟ್ ಸೇವನೆಯಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನೆಗಳಿವೆ. ನಾವು ಬೀಟ್ರೋಟ್ ಪಲ್ಯ ಸಾಂಬಾರ್ ಜ್ಯೂಸ್ ಹೀಗೆ ನಾನಾ ರೀತಿಯಲ್ಲಿ ಸೇವನೆಯನ್ನು ಮಾಡಿರುತ್ತೇವೆ.ಇನ್ನೂ ವಿಭಿನ್ನವಾಗಿ ಬೆಳ್ಳಗಿನ ತಿಂಡಿಗೆ ಬೀಟ್ರೂಟ್ ಪರೋಟವನ್ನು ಹೇಗೆ ತಯಾರಿಸವುದು ಎಂದು ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು:
ಗೋಧಿ ಹಿಟ್ಟು- 2 ಕಪ್
ತುರಿದ ಬೀಟ್ರೂಟ್ – 1 1/2 ಕಪ್
ಶುಂಠಿ ಪೇಸ್ಟ್- ಅರ್ಧ ಟೀಚಮಚ
ಜೀರಿಗೆ- 12 ಟೀಸ್ಪೂನ್
ಗರಂ ಮಸಾಲಾ – ಅರ್ಧ ಟೀ ಚಮಚ
ಒಣ ಮಾವಿನ ಪುಡಿ- ಅರ್ಧ ಟೀಚಮಚ
ಅಜ್ವೈನ- ಅರ್ಧ ಟೀಸ್ಪೂನ್
ಸ್ವಲ್ಪಹಸಿರು ಕೊತ್ತಂಬರಿ ಸೊಪ್ಪು
ಹಸಿರು ಮೆಣಸಿನಕಾಯಿ – 1
ಎಣ್ಣೆ- 3 ಟೀ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ:
ಬೀಟ್ರೂಟ್ಗಳನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಿ ಬೀಟ್ರೂಟ್ಗಳನ್ನು ತುರಿದುಕೊಳ್ಳಿ. ಬಳಿಕ ಮಧ್ಯಮ ಉರಿಯಲ್ಲಿ ಪ್ಯಾನ್ ಅನ್ನು ಬಿಸಿ ಮಾಡಿ 2 ಚಮಚ ಎಣ್ಣೆ ಹಾಕಿ. ಬಿಸಿಯಾದ ಎಣ್ಣೆಗೆ ಶುಂಠಿ ಪೇಸ್ಟ್ ಮತ್ತು ಕತ್ತರಿಸಿದ ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಫ್ರೈ ಮಾಡಿ. ಒಂದು ನಿಮಿಷ ಹುರಿದ ನಂತರ ತುರಿದ ಬೀಟ್ರೂಟ್ ಮತ್ತು ರುಚಿಗೆ ಉಪ್ಪು ಸೇರಿಸಿ. ಎರಡು ನಿಮಿಷಗಳ ಕಾಲ ಬೇಯಸಿ ಬೇಕಾದಲ್ಲಿ ನೀರನ್ನು ಸೇರಿಸಿ ನಂತರ ಪ್ಯಾನ್ ಅನ್ನು ಮುಚ್ಚಿ 10 ನಿಮಿಷಗಳ ಕಾಲ ಬೇಯಿಸಿ. ಬಳಿಕ ಉರಿ ಆರಿಸಿ ತಣ್ಣಗಾಗಲು ಬಿಡಿ. ನಂತರ, ಬೇಯಿಸಿದ ಬೀಟ್ರೂಟ್ನ್ನು ಮಿಕ್ಸಿಯಲ್ಲಿ ಹಾಕಿ ನೀರನ್ನು ಸೇರಿಸದೆ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಒಂದು ಪಾತ್ರೆಗೆ ಒಂದು ಚಮಚ ಎಣ್ಣೆ, ಸ್ವಲ್ಪ ಉಪ್ಪು ಮತ್ತು ಎರಡು ಕಪ್ ಗೋಧಿ ಹಿಟ್ಟು ಸೇರಿಸಿ. ಮತ್ತೆ ಜೀರಿಗೆ, ಗರಂ ಮಸಾಲಾ, ಒಣಗಿದ ಮಾವಿನ ಪುಡಿ ,ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಬೀಟ್ರೂಟ್ ಪೇಸ್ಟ್ ಅನ್ನು ಸೇರಿಸಿ. ಸ್ವಲ್ಪ ನೀರನ್ನು ಹಾಕಿ ಮೃದುವಾಗಿ ಹಿಟ್ಟನ್ನು ನಾದಿಕೊಳ್ಳಿ.
ತವಾ ಬಿಸಿ ಮಾಡಿ. ನಾದಿಕೊಂಡ ಹಿಟ್ಟನ್ನು ಪರೋಟದ ಆಕಾರದಲ್ಲಿ ಲಟ್ಟಿಸಿಕೊಂಡು . ಬಿಸಿಮಾಡಿದ ತವಾ ಮೇಲೆ ಪರೋಟವನ್ನು ಹಾಕಿ ಪರೋಟದ ಎರಡೂ ಬದಿಗಳಿಗೆ ಎಣ್ಣೆ ಅಥವಾ ತುಪ್ಪವನ್ನು ಹಚ್ಚಿಕೊಳ್ಳಿ ಮತ್ತು ಅದನ್ನು ಗರಿಗರಿಯಾಗುವವರೆಗೆ ಬೇಯಿಸಿಕೊಂಡರೆ ಬೀಟ್ರೂಟ್ ಪರೋಟ ಸವಿಯಲು ಸಿದ್ದ. ಇದನ್ನು ಚಟ್ನಿ ಅಥವಾ ಮೊಸರಿನೊಂದಿಗೆ ಊಣ ಬಡಿಸಬಹುದು.