ಇದು ಕೋಚಿಂಗ್ ತರಗತಿಗಳ ಯುಗ.ಆಲ್ ಲೈನ್ ಕ್ಲಾಸ್ ಗಳ ಒಂದಿಷ್ಟು ಲರ್ನಿಂಗ್ ಆಫ್ ಗಳದ್ದೇ ಕಾಲ. ಉತ್ತಮ ವಿದ್ಯಾಭ್ಯಾಸದ ಕನಸ್ಸು ಹೊತ್ತ ಯುವಕ, ಯುವತಿಯರು ಒಂದಿಷ್ಟು ಮಂದಿ ಇದರಲ್ಲಿ ನೋಂದಾಯಿಸಿಕೊಂಡು ಭಾರಿ ಮೊತ್ತದ ಶುಲ್ಕವನ್ನು ನೀಡಿ ತರಗತಿಗಳನ್ನು ಪಡೆಯುತ್ತಾರೆ.
ಇನ್ನೂ ಆನ್ ಲೈನ್ ಕ್ಲಾಸ್ಗಳ ಬಣ್ಣ ಬಣ್ಣದ ಜಾಹೀರಾತಿಗೆ ಮಾರು ಹೋಗದವರಿಲ್ಲ. ಪ್ರಾಯೋಜಕರು ತಮ್ಮ ಸಂಸ್ಥೆಯನ್ನು ಉತ್ತೆಜೀಸಲು ಎಲ್ಲಕ್ಕಿಂತ ಭಿನ್ನ ಪರಿಕಲ್ಪನೆಯೊಂದಿಗೆ ತಮ್ಮ ಉತ್ಪನಗಳನ್ನು ಜನರ ಮುಂದಿಡುತ್ತಾರೆ. ಇತ್ತ ಇದನೆಲ್ಲ ನಿಜವೆಂದು ನಂಬಿ ಮೋಸಹೊಗುವವರ ಸಂಖ್ಯೆಯೇ ಹೆಚ್ಚು.
ಇಂತಹದ ಒಂದು ಸನ್ನಿವೇಶ ನಿಧಾನಕ್ಕೆ ಬೆಳಕಿಗೆ ಬಂದಿದೆ. ಬೈಜೂಸ್ನ ಜಾಹೀರಾತಿನಲ್ಲಿ ಕಾಣಿಸಿಕೊಂಡು ಕೋಚಿಂಗ್ ಭರವಸೆಯನ್ನು ಪ್ರಚಾರ ಮಾಡಿದ್ದಕ್ಕಾಗಿ ನಟ ಶಾರುಖ್ ಖಾನ್ಗೆ ದಂಡ ವಿಧಿಸಲಾಗಿದೆ.
ಪ್ರಿಯಾಂಕ ದಿಕ್ಷೀತ್ ಐಎಎಸ್ ಕೋಚಿಂಗ್ ಎಂದು ಬೈಜೂಸ್ ಸಂಸ್ಥೆಯಲ್ಲಿ ಶುಲ್ಕ ಪಾವತಿಸಿದರು. ಉತ್ತಮ ತರಭೇತಿ ನೀಡುವುದಾಗಿ ನಂಬಿಸಿದ ಸಂಸ್ಥೆ ಇದೀಗ ಯಾವುದೇ ತರಗತಿಗಳನ್ನು ನೀಡದೆ ತನ್ನ ಹಣವನ್ನು ಹಿಂದಿರುಗುಸದೆ ವಂಚಿಸಿದೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿನಿ ಶಾರುಖ್ ಖಾನ್ ಬೈಜೂಸ್ನ ಜಾಹೀರಾತು ನೋಡಿ ಪ್ರೇರಿತಗೊಂಡು ಸಂಸ್ಥೆ ಐಎಎಸ್ ತರಬೇತಿಗಾಗಿ ಸೇರಿದ್ದಾಗಿ ಹೇಳಿಕೊಂಡಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಈ ಪ್ರಕರಣಕ್ಕೆ ಸಂಬಂಧಿಸಿ ನಟ ಶಾರುಖ್ ಖಾನ್ ಮತ್ತು ಎಡ್-ಟೆಕ್ ಸಂಸ್ಥೆಯ ಬೈಜೂಸ್ ಸಂಸ್ಥೆಗೆ ಇಂದೋರ್ ನ ಸ್ಥಳೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ದಂಡ ವಿಧಿಸಿದೆ.
ವಿಚಾರಣೆ ನಡೆಸಿದ ಅಯೋಗವು ಪ್ರಿಯಾಂಕ ಪಾವತಿಸಿದ ಶುಲ್ಕ 1.08 ಲಕ್ಷ ರೂ ಶುಲ್ಕವನ್ನು ವಾರ್ಷಿಕ ಶೇ. 12ರಷ್ಟು ಬಡ್ಡಿಯೊಂದಿಗೆ ಮರುಪಾವತಿಸಬೇಕು. ದಾವೆ ವೆಚ್ಚ 5000 ರೂ, ಮಾನಸಿಕ ಹಾಗೂ ಆರ್ಥಿಕ ಸಂಕಷ್ಟ ಪರಿಹಾರ 50000 ರೂ ಪರಿಹಾರವನ್ನು ಶಾರುಖ್ ಖಾನ್ ಮತ್ತು ಬೈಜೂಸ್ ಸಂಸ್ಥೆ ಸಮಾನಾಗಿ ಪಾವತಿಸಬೇಕು.
ಜಾಹೀರಾತಿನ ಪ್ರಭಾವ ಅಥವಾ ತನ್ನ ನೆಚ್ಚಿನ ನಟ ನಟಿಯರ ಮಾತಿಗೆ ಮರುಳಾಗಿ ಇಂತಹ ತಪ್ಪುಗಳನ್ನು ಮಾಡುವವರಿಗೆ ಇದು ಒಂದು ಎಚ್ಚರಿಕೆಯ ಕರೆ ಗಂಟೆಯಾಗಿದೆ.