ಈ ಸಲದ ಎಲೆಕ್ಷನ್ ಪ್ರಕ್ರಿಯಲ್ಲಿ ಒಂದು ಪಕ್ಷದ ಮೇಲೆ ಇನ್ನೊಂದು ಪಕ್ಷ ವಾಕ್ಸಾಮರ ಮಾಡುತ್ತಾ ಸಾಗುತ್ತಿರುವ ನಡುವೆ ಒಂದಕ್ಕಿಂತ ಒಂದು ಅದ್ಬುತ ಪ್ರಣಾಳಿಕೆಗಳ ಘೋಷಣೆಯೊಂದಿಗೆ ಸಾಗುತ್ತಿತ್ತು. ಆದರೆ ಇತ್ತೀಚಿಗೆ ಕಾಂಗ್ರೆಸ್ ಪಕ್ಷ ಮಾಡಿದ ಒಂದು ಯಡವಟ್ಟು ಇಡೀ ದೇಶದಲ್ಲಿಯೇ ಸಂಚಲನ ಮೂಡಿಸಿದೆ.
ಇತೀಚಿಗೆ ಕಾಂಗ್ರೆಸ್ ಪಕ್ಷ ನಾವು ಅಧಿಕಾರಕ್ಕೆ ಬಂದರೆ ಭಜರಂಗದಳವನ್ನು ಬ್ಯಾನ್ ಮಾಡ್ತಿವಿ ಎಂದು ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಆದರೆ ಇಷ್ಟು ದಿನದ ಚುನಾವಣಾ ಸಮೀಕ್ಷೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಬಿಜೆಪಿಗೆ ಈ ಹೇಳಿಕೆ ವರದಾನವಾದಂತಿದೆ. ಒಂದೆಡೆ ಮೋದಿ ರೋಡ್ ಶೋ ರ್ಯಾಲಿಗಳು ರಾಜ್ಯದಲ್ಲಿ ಸೆನ್ಸಷನ್ ಕ್ರಿಯೇಟ್ ಮಾಡುತಿದ್ದು, ಇನ್ನೊಂದೆಡೆ ಬಜರಂಗ ವಿವಾದ ಬಿಜೆಪಿಗೆ ಬಲವಾಗುತ್ತಾ ಕಾದು ನೋಡುಬೇಕು.
ಅಷ್ಟಕ್ಕೂ ಈ ಭಜರಂಗದಳ ಹೇಗೆ ಹುಟ್ಟುಕೊಂಡಿತು? ಇದರ ಇತಿಹಾಸ ಏನು?
ಅಕ್ಟೋಬರ್ 8 1988ರಲ್ಲಿ,ಇಂದಿರಾಗಾಂಧಿ ಆಡಳಿತದ ಸಮಯದಲ್ಲಿ ಅಯೋಧ್ಯಯಲ್ಲಿ ಜಾನಕಿ ರಾಮ ಉತ್ಸವ ಮಾಡಲು ನಿಶ್ಚಯಿಸಲಾಯಿತು.ಆದರೆ ಆಗಿನ ಕಾಂಗ್ರೆಸ್ ಸರ್ಕಾರ ಆ ಉತ್ಸವಕ್ಕೆ ಪೊಲೀಸ್ ರಕ್ಷಣೆ ಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಆಗಿನ ಯುವಕರಿಗೆ ಕೆಲವು ಹಿಂದೂ ನಾಯಕರು ತಮ್ಮ ಕಾರ್ಯಕ್ರಮಕ್ಕೆ ತಾವೇ ರಕ್ಷಿಣೆ ಕೊಡುವುದಾಗಿ ನಿರ್ಧರಿಸಿ ವಿಶ್ವ ಹಿಂದೂ ಪರಿಷತ್ ಭಜರಂಗ ದಳವನ್ನು ಹುಟ್ಟುಹಾಕಿತು. ಅಂದಿನ ಆರ್ಎಸ್ಎಸ್ ಮುಖಂಡ ವಿನಯ್ ಕಟೀಯಾರ್ ಇದರ ಸಂಸ್ಥಾಪಕ ಎಂದು ಹೇಳಲಾಗುತ್ತದೆ.
ತದನಂತರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಿಂದೂ ಸಮಾಜಕ್ಕೆ ಹತ್ತಿರವಾಗುತ್ತಾ ಹೋಯಿತು,1990 ರಲ್ಲಿ ತನ್ನದೇ ಸ್ಥಾನಮಾನ ವನ್ನು ಇದು ಕಂಡುಕೊಂಡಿತು.
ಭಜರಂಗದಳ ಹೇಳಿಕೊಳ್ಳುವ ಹಾಗೆ ಇದು ಯಾವುದೇ ಧರ್ಮ ವಿರೋಧಿ ಸಂಘಟನೆ ಅಲ್ಲ. ಅವರ ಧ್ಯೇಯ ವಾಕ್ಯ ಸೇವೆ, ಸಂಸ್ಕಾರ, ಸುರಕ್ಷತೆ ಹಾಗೆ ಬೇರೆ ಧರ್ಮದವರು ಹಿಂದೂ ಧರ್ಮಕ್ಕೆ ಗೌರವ ಕೊಡುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿಕೊಳ್ಳುತ್ತಾರೆ.
ಅಕ್ರಮ ಮತಾಂತರ, ಚಟುವಟಿಕೆ ಅಥವಾ ಹಿಂದೂಗಳ ಮೇಲಿನ ದಬ್ಬಾಳಿಕೆ ಸಹಿಸುವುದಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಇದಾದ ಮೇಲೆ ಎಷ್ಟೋ ಬಾರಿ ಭಜರಂಗದಳ ವಿವಾದಗಳನ್ನು ತನ್ನ ಮೇಲೆ ಎಳೆದುಕೊಂಡಿದೆ. ಎಷ್ಟೋ ಸಲ ಕಾಂಗ್ರೇಸ್ ಆಡಳಿತದಲ್ಲಿರುವಾಗಲೇ ಭಜರಂಗದ ಮೇಲೆ ಆರೋಪಗಳಿದ್ದರೂ ಅದನ್ನು ಬ್ಯಾನ್ ಮಾಡಿಲ್ಲ. ಎಷ್ಟೋ ಪ್ರಮುಖ ರಾಜಕಾರಣಿಗಳು ಅದರಲ್ಲೂ ಮಾಯವತಿ,ಎಲ್ ಕೆ ಅಡ್ವಾನಿ, ವಾಜಪೇಯಿ ಕೂಡಾ ಬಜರಂಗದಳ ಹಿಂಸೆ ಬಿಟ್ಟುಬಿಡಬೇಕೆಂದು ಮನವಿ ಮಾಡಿದ್ದರು.
ಭಜರಂಗದಳ ಪೊಲೀಸ್ ನೈತಿಕಗಿರಿ ಮಾಡುತ್ತಿದ್ದಾರೆ ಎಂಬ ಆರೋಪವಿದೆ.ಹಿಂದೂ ಯುವತಿಯರು ಅನ್ಯಧರ್ಮೇಯರ ಜೊತೆ ಓಡಾಟ ಮಾಡುವಾಗ, ಅಥವಾ ಹಿಂದೂ ದೇವಸ್ಥಾನ, ಅಥವಾ ಧಾರ್ಮಿಕ ನಂಬಿಕೆಗಳಿಗೆ ತೊಂದರೆಯಾದಾಗ ಪೋಲೀಸರ ಮೊದಲು ಇವರೇ ಕಾನೂನು ಕೈಗೆತ್ತಿಕೊಳ್ಳುತ್ತಾರೆ ಎಂಬ ಆರೋಪವು ಇವರ ಮೇಲಿದೆ. ಲವ್ ಜಿಹಾದ್, ಅಥವಾ ಹಿಂದೂ ಮತಾಂತರ ಸಂಬಂಧ ಪಟ್ಟಂತೆ ಪೋಲೀಸರ ಮೊದಲು ಇವರೇ ಮುನ್ನುಗ್ಗುತ್ತಾರೆ ಎಂಬ ದೊಡ್ಡ ಆರೋಪವಿದೆ.
ಮೊದಲೇ ಹಿಂದೂ ವಿರೋಧಿ ಪಕ್ಷ ಎಂದು ಬಿಜೆಪಿ ಇಂದ ಕರೆಸಲ್ಪಡುವ ಕಾಂಗ್ರೆಸ್ ಈಗ ಬಜರಂಗದಳ ನಿಷೇದ ಮಾಡ್ತಿವಿ ಅಂತ ಹೇಳಿ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.