ಮೊಬೈಲ್ ಲಾಕ್ ಎಲ್ಲರಿಗೂ ಮರೆತು ಹೋಗೋದು ಸರ್ವೆ ಸಾಮಾನ್ಯವಾಗದೆ. ಹೆಚ್ಚಾಗಿ ಆಪ್ ಗಳಿಗೆ ಹಾಕಿರುವ ಲಾಕ್ ಮರೆತುಹೋಗಿರುತ್ತದೆ. ಯಾವಾಗಲಾದರೂ ಒಮ್ಮೆ ಆಪ್ ಓಪನ್ ಮಾಡಿದ್ರೆ ಲಾಕ್ ಮರೆತಿರುತ್ತದೆ. ಮೊಬೈಲ್ ಲಾಕ್ ಪ್ಯಾಟರ್ನ್ ಒಪನ್ ಮಾಡಲು ಶತಪ್ರಯತ್ನ ಮಾಡಬೇಕಾಗುತ್ತದೆ. ಕೆಲವು ಪ್ರಯತ್ನಗಳ ಬಳಿಕ ಅನ್ ಲಾಕ್ ಆಗುತ್ತದೆ, ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಆ ಪ್ಯಾಟ್ರನ್ ನೆನಪಾಗದೆ ಇರಬಹುದು.ಆಗ ಫೋನ್ ಅನ್ ಲಾಕ್ ಮಾಡಲು ಒಂದೇ ದಾರಿ ಎಂದು ಮೊಬೈಲ್ ಶಾಪ್ಗೆ ತೆಗೆದುಕೊಂಡು ಹೋಗುತ್ತೇವೆ. ಈ ರೀತಿ ಮಾತ್ರವಲ್ಲದೆ, ಈ ಸಿಂಪಲ್ ಟ್ರಿಕ್ಸ್ ಮೂಲಕವೂ ಮೊಬೈಲ್ ಅನ್ ಲಾಕ್ ಮಾಡಬಹುದು.
ಲಾಕ್ ಮೊಬೈಲ್ ಅನ್ ಲಾಕ್ ಮಾಡೋದು ಹೇಗಂದರೆ,
• ಹೇಗೂ ನಿಮ್ಮ ಮೊಬೈಲ್ ಲಾಕ್ ಮರೆತಿರುತ್ತೀರ ಮೊಬೈಲ್ ಓಪನ್ ಮಾಡಲು ಸಾಧ್ಯವಿಲ್ಲ. ಹಾಗಿರುವಾಗ ಮೊದಲು ಮತ್ತೊಂದು ಫೋನ್ ಅಥವಾ ಕಂಪ್ಯೂಟರ್ನಿಂದ google.com/android/devicemanager ಗೆ ಭೇಟಿ ನೀಡಿ.
• Google ಖಾತೆಗೆ ಸೈನ್ ಇನ್ ಆಗಿ. ಅನ್ಲಾಕ್ ಮಾಡಲು ಬಯಸುವ ಪಟ್ಟಿಯಿಂದ ಫೋನ್ ಆಯ್ಕೆಮಾಡಿ.
• ‘ನಿಮ್ಮ ಫೋನ್ ಲಾಕ್ ಮಾಡಿ’ ಆಯ್ಕೆಗೆ ಕ್ಲಿಕ್ ಮಾಡಿ.
• ಹೊಸ ಪಾಸ್ವರ್ಡ್ ಅನ್ನು ಟೈಪ್ ಮಾಡಿ. ಕೆಳಗೆ ನೀಡಿರುವ ಲಾಕ್ ಬಟನ್ ಕ್ಲಿಕ್ ಮಾಡಿ.
• ಫೋನ್ ಅನ್ಲಾಕ್ ಮಾಡಲು ಹೊಸ ಪಾಸ್ ವರ್ಡ್ ಅನ್ನು ಟೈಪ್ ಮಾಡಿ. ಗೂಗಲ್ ಸಹಾಯಕವನ್ನು ಸರಿಯಾಗಿ ಹೊಂದಿಸಿದ್ದರೆ, ‘ಅನ್ಲಾಕ್ ವಿತ್ ವಾಯ್ಸ್ʼ ಆಯ್ಕೆ ಇರುತ್ತದೆ.
• ಇದು ನಿಮ್ಮ ಪೂರ್ವ-ರೆಕಾರ್ಡ್ ಮಾಡಿದ ಧ್ವನಿಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.
• ಈ ವೈಶಿಷ್ಟ್ಯವು ಆನ್ ಆಗಿದ್ದರೆ, ನಿಮ್ಮ ಸ್ಮಾರ್ಟ್ಫೋನ್ ಅನ್ಲಾಕ್ ಮಾಡಲು ‘ಓಕೆ ಗೂಗಲ್’ ಎಂದು ಹೇಳಬಹುದು.