ಮಂಗಳೂರು: ನಗರದ ಸಂತ ಜೆರೋಸಾ ಶಾಲೆಯಲ್ಲಿ ಏಳನೆ ತರಗತಿಗೆ ಪಾಠ ಮಾಡುತ್ತಿದ್ದ ಸಿಸ್ಟರ್ ಪ್ರಭಾ ಎನ್ನುವ ಶಿಕ್ಷಕಿ “Work is worship” ಎನ್ನುವ ಪಾಠ ಮಾಡುವ ಸಂದರ್ಭದಲ್ಲಿ ಹಿಂದೂ ಮಕ್ಕಳನ್ನು ಉದ್ದೇಶಿಸಿ , ” ನೀವುಗಳು ಮಸೀದಿ ಒಡೆದು ರಾಮನ ಮಂದಿರ ಕಟ್ಟುವ ಅಗತ್ಯವಿತ್ತೇ ? ನೀವು ಕಲ್ಲು ಕೆತ್ತಿ ಅಲಂಕಾರ ಮಾಡಿ ಇಟ್ಟ ತಕ್ಷಣ ಅದು ದೇವರಾಗುತ್ತದೆಯೇ?, ನಿಮ್ಮ ರಾಮಾಯಣ ಮಹಾಭಾರತ ಎಲ್ಲ ಕಾಲ್ಪನಿಕ ಕತೆಗಳು , ನಿಮ್ಮ ಮೋದಿ ಗುಜರಾತಿನಲ್ಲಿ ಮುಸ್ಲಿಮರನ್ನು ಕೊಂದವ ನು ” ಮೊದಲಾದ ದ್ವೇಷ ಪೂರಿತ ಮಾತುಗಳನ್ನು ಆಡಿದ್ದರು.
ಇದನ್ನು ಪ್ರಶ್ನಿಸಿ ಮಕ್ಕಳ ಹೆತ್ತವರು, ಶಾಸಕರುಗಳಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಮತ್ತು ಇತರ ಸಾಮಾಜಿಕ ನಾಯಕರು ಶಾಲೆಗೆ ತೆರಳಿ ಪ್ರತಿಭಟಿಸಿದ್ದರು . ಆ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಶಿಕ್ಷಕಿಯನ್ನು ವಜಾ ಮಾಡಿ ಆದೇಶ ಮಾಡಿತ್ತು .
ಮತ್ತು ಈ ಬಗ್ಗೆ ತನಿಖೆ ನಡೆಸಲು ದಯಾನಂದ ರಾಮಚಂದ್ರ ನಾಯ್ಕ ಅವರನ್ನು ನೇಮಿಸಲಾಗಿತ್ತು . ಇತ್ತೀಚೆಗಿನ ಬೆಳವಣಿಗೆಯಂತೆ ರಾಜ್ಯ ಕಾಂಗ್ರೆಸ್ ಸರಕಾರ ತನಿಖಾಧಿಕಾರಿಯವರಾದ ದಯಾನಂದ ರಾಮಚಂದ್ರ ನಾಯ್ಕರವನ್ನು ತನಿಖೆ ಹಂತದಲ್ಲಿರುವಾಗಲೇ ದಿಢೀರ್ ವರ್ಗಾವಣೆ ಮಾಡಿದೆ .
ಅಲ್ಲದೆ ಜೆರೊಸಾ ಶಾಲೆಯ ಆಡಳಿತ ಮಂಡಳಿಯವರು, ಕಾಂಗ್ರೇಸ್ ನ ಐವನ್ ಡಿಸೋಜಾ, ಜೆ ಆರ್ ಲೋಬೋ ಮತ್ತಿತರರು ಸೇರಿಕೊಂಡು, ಐವನ್ ಡಿಸೋಜ ಅಪ್ತರಾಗಿದ್ದ ಕಾಂಗ್ರೆಸ್ ನ ದಿ. ಮೊಂತು ಲೋಬೋ ಪುತ್ರ ಅನಿಲ್ ಜೆರಾಲ್ಡ್ ಲೋಬೊನನ್ನು ಠಾಣೆಗೆ ಕರೆ ತಂದು ಪೋಲಿಸರ ಮೇಲೆ ಒತ್ತಡ ಹಾಕಿ ಪ್ರಕರಣ ದಾಖಲಿಸುವಂತೆ , ಅಂದು ಪ್ರತಿಭಟಿಸಿದ ವೇದವ್ಯಾಸ ಕಾಮತ್ , ಭರತ್ ಶೆಟ್ಟಿ , ಶರಣ್ ಪಂಪವೆಲ್ ಮೊದಲಾದವರ ವಿರುದ್ದ ದೂರು ಸಾಮಾಜಿಕ ಶಾಂತಿ ಭಂಗಕ್ಕೆ ಪ್ರಯತ್ನಿಸಿದ್ದಾರೆ ಮತ್ತು ಕೋಮು ಸೌಹಾರ್ದ ಹಾಳುಗೆಡವಿದ್ದಾರೆ ಎಂದು ಆರೋಪಿಸಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ
ರಾಮನನ್ನು ಕೆಟ್ಟದಾಗಿ ನಿಂದಿಸಿದ ಶಿಕ್ಷಕಿಯ ವಿರುದ್ಧ ಪ್ರತಿಭಟಿಸಿದ ಹೆತ್ತವರ ಜೊತೆ ನಿಂತ ಕಾರಣಕ್ಕಾಗಿ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ತಿನ ನಾಯಕ ಶರಣ್ ಪಂಪವೆಲ್ ಹಾಗು ಕಾರ್ಪೊರೇಟರ್ ಗಳಾದ ಸಂದೀಪ್ ಗರೋಡಿ ಭರತ್ ಕುಮಾರ್ ವಿರುದ್ಧ ಸರಕಾರ ಪೊಲೀಸರನ್ನು ಉಪಯೋಗಿಸಿ ದರ್ಪ ತೋರಿಸಿ ರಾಜಕೀಯ ಲಾಭ ಪಡೆದಿದೆ.
ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ಮಾನಸಿಕತೆ ಮತ್ತು ಬಿಜೆಪಿ ಶಾಸಕರನ್ನು ಬಗ್ಗು ಬಡಿಯುವ ನೀತಿಯ ವಿರುದ್ಧ ನಾಳೆ ತೀವ್ರ ಪ್ರತಿಭಟನೆ ಬೃಹತ್ ಹೋರಾಟ ನಡೆಸುವ ಸಿದ್ಧತೆ ನಡೆದಿದೆ.