ಸನ್ ಬರ್ನ್ ಇದು ಬಿಸಿಲಿನ ಶಾಖಕ್ಕೆ ಕೆಲವೇ ಗಂಟೆಗಳಲ್ಲಿ ಉಂಟಾಗುವ ಚರ್ಮದ ಸಮಸ್ಯೆಯಾಗಿದೆ. ಬೇಸಿಗೆಯಲ್ಲಿ ಹೆಚ್ಚಾಗಿ ಎಲ್ಲರೂ ಸನ್ ಬರ್ನ್ಗೆ ತುತ್ತಾಗುವರು ಹಾಗಾಗಿ ಕೆಲವೊಂದು ಮುಂಜಾಗೃತ ಕ್ರಮಗಳನ್ನು ಅನುಸರಿಸುವುದರಿಂದ ನಾವು ನಮ್ಮ ತ್ಚಚೆಯನ್ನು ಸರ್ನ್ಬರ್ನ್ನಿಂದ ರಕ್ಷಿಸಿಕೊಳ್ಳಬಹುದು.
ಬಿಸಿಲಿನ ತಾಪದಿಂದ ನಮ್ಮನ್ನು ನಾವು ರಕ್ಷಿಸಿಕೋಳ್ಳಲು ಫುಲ್ ಸ್ಲೀವ್ ಡ್ರೇಸ್, ಸನ್ಸ್ ಕ್ರೀಮ್ ಬಳಕೆ, ಹ್ಯಾಂಡ್ ಗ್ಲವ್ಸ್ ಬಳಕೆ ಉಪಯುಕ್ತ. ಸನ್ ಬರ್ನ್ ಉರಿಯೂತದ ಚರ್ಮ, ಬಿಳಿ ಚರ್ಮದ ಮೇಲೆ ಗುಲಾಬಿ ಅಥವಾ ಕೆಂಪು ಬಣ್ಣದಲ್ಲಿ ಕಂಡರೆ, ಕಪ್ಪು ಚರ್ಮದ ಮೇಲೆ ಕಂದು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಬಿಸಿಯ ಜೊತೆಗೆ ಉರಿಯ ಅನುಭವ ನೀಡುತ್ತದೆ ಮತ್ತು ತುರಿಕೆಯುಂಟು ಮಾಡುತ್ತದೆ.
ಸೂರ್ಯನ ಯುವಿ ಕಿರಣಗಳು ನೇರ ಮನುಷ್ಯನ ಮೇಲೆ ಬಿದ್ದಾಗಲೆಲ್ಲ ದೇಹದ ಭಾಗವು ಸುಟ್ಟು ಹೋಗಬಹುದು. ಕಣ್ಣುಗಳಲ್ಲಿ ಒಂದು ರೀತಿಯ ಉರಿಯ ಅನುಭವವಾಗುತ್ತದೆ. ಕೆಲವೊಂದು ಸಮಸ್ಯೆಗಳು ತಾನಾಗಿಯೇ ಸರಿಯಾಗುತ್ತದೆ. ಇನ್ನು ಕೆಲವು ಸಮಸೆಯಗಳಿಗೆ ವೈದ್ಯರನ್ನು ಭೇಟಿ ಮಾಡುವುದು ಅವಶ್ಯಕ.
ಅಲ್ಲದೆ ಸರಳ ಉಪಾಯಗಳಿಂದಲೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು, ಬೆಳಿಗ್ಗೆ 10 ರಿಂದ ಸಂಜೆ 4 ರವರೆಗಿನ ಸೂರ್ಯನ ಬೆಳಕಿಗೆ ನೇರವಾಗಿ ನಮ್ಮ ಮೈಯನ್ನು ಒಡ್ಡಿಕೊಳ್ಳದಿರುವುದು.ಆದಷ್ಟು ಹೊರಗಡೆ ಇರುವುದನ್ನು ತಪ್ಪಿಸಿಕೊಳ್ಳುವುದು ಉತ್ತಮ.
ಚರ್ಮಕ್ಕೆ ಸೂಕ್ತವೆನಿಸಿದ ಸನ್ಸ್ ಕ್ರೀಮ್ ನ್ನು ಬಳಸುವುದು ಉತ್ತಮ. ವೈದ್ಯರ ಸಲಹೆಯ ಮೇರೆಗೆ ಬಳಸುವುದು ಸೂಕ್ತ. ದೇಹವು ನಿರ್ಜಲಿಕರಣವನ್ನು ಅನುಭಿಸಹುದು, ಅತಿಯಾದ ಆಯಾಸ, ದಾಹವು ಇನ್ನಷ್ಟು ಶಕ್ತಿಯನ್ನೆ ಕುಂದಿಸಬಹುದು. ಮನೆಯ ಹೊರಗಡೆ ಹೋಗುವಾಗ ಛತ್ರಿಯನ್ನು ಹಿಡಿದುಕೊಂಡು ಹೋಗುವುದು ಮತ್ತು ಸಾಧ್ಯವಾದಷ್ಟು ನೆರಳನ್ನು ಆಶ್ರಯಿಸುವುದು ಉತ್ತಮ